ಮಾರಿಮುತ್ತು ಖ್ಯಾತಿಯ ಸರೋಜಮ್ಮ ಇನ್ನಿಲ್ಲ

ಬೆಂಗಳೂರು, ಜೂ.25: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟಿ ಹಾಗೂ ಮಾರಿಮುತ್ತು ಪಾತ್ರದ ಖ್ಯಾತಿಯ ಸರೋಜಮ್ಮ ತಡರಾತ್ರಿ ನಿಧನರಾಗಿದ್ದಾರೆ.
ಶನಿವಾರ ತಡರಾತ್ರಿ ಮಾರಿ ಮುತ್ತು ಯಾನೆ ಸರೋಜಮ್ಮ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿ ಯಾಗದೆ ಉಸಿರಾಟದ ತೊಂದರೆಯಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಉಪೇಂದ್ರ ಸಿನೆಮಾ ಸೇರಿದಂತೆ 15ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಖಳನಟಿಯಾಗಿ ಅಭಿನಯಿಸಿದ್ದ ಸರೋಜಮ್ಮ, ಅತ್ಯುತ್ತಮ ಖಳನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.
ಸರೋಜಮ್ಮ ಅವರಿಗೆ ಮೂವರು ಮಕ್ಕಳಿದ್ದು, ಅವರ ಮೃತದೇಹವನ್ನು ಇಲ್ಲಿನ ಕಮಲಾನಗರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.
Next Story





