2ನೆ ಬ್ರೆಕ್ಸಿಟ್ ಜನಮತಗಣನೆ ಕೋರಿ 10 ಲಕ್ಷ ಸಹಿ
ಲಂಡನ್, ಜೂ. 25: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರಬೇಕೇ, ಬೇಡವೇ ಎಂಬ ಬಗ್ಗೆ ಎರಡನೆ ಜನಮತಗಣನೆ ನಡೆಯಬೇಕು ಎಂದು ಕೋರುವ ಮನವಿಯೊಂದಕ್ಕೆ ಬ್ರಿಟನ್‌ನಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ಹಾಗಾಗಿ, ಈ ಪ್ರಸ್ತಾಪದ ಬಗ್ಗೆ ಬ್ರಿಟಿಷ್ ಸಂಸತ್ತಿನಲ್ಲಿ ಚರ್ಚೆಯಾಗಬೇಕಾಗಿರುವುದು ಅನಿವಾರ್ಯವಾಗಿದೆ. ಯಾವುದೇ ವಿಷಯದ ಬಗ್ಗೆ ಬ್ರಿಟನ್‌ನ ಹೌಸ್ ಆಫ್ ಕಾಮನ್ಸ್‌ನಲ್ಲಿ ಚರ್ಚೆಯಾಗಬೇಕಾದರೆ ಸಹಿಗಳ ಸಂಖ್ಯೆ ಒಂದು ಲಕ್ಷವನ್ನು ದಾಟಬೇಕಾಗಿರುವುದು ಅಗತ್ಯ. ಎರಡನೆ ಜನಮತಗಣನೆಯಾಗಬೇಕೆಂದು ಕೋರುವ ಮನವಿಗೆ ಈಗಾಗಲೇ 12,74,321 ಮಂದಿ ಸಹಿ ಹಾಕಿದ್ದಾರೆ ಹಾಗೂ ಈ ಸಂಖ್ಯೆ ಏರುತ್ತಲೇ ಇದೆ.
Next Story





