ಶೂಟಿಂಗ್: ಜಿತು ರಾಯ್‌ಗೆ ರಜತ

ಬಾಕು, ಜೂ.25: ಭಾರತದ ಖ್ಯಾತ ಶೂಟರ್ ಜಿತು ರಾಯ್ ಐಎಎಸ್‌ಎಫ್ ವರ್ಲ್ಡ್ ಕಪ್‌ನ 10 ಮೀಟರ್ ಶೂಟಿಂಗ್‌ನಲ್ಲಿ ರಜತ ಪದಕ ಗಿಟ್ಟಿಸಿಕೊಂಡಿದ್ದಾರೆ. ಆದರೆ 50 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಎಡವಿದರು.
ಅಝರ್‌ಬೈಜಾನ್‌ನಲ್ಲಿ ನಡೆದ ಟೂರ್ನಮೆಂಟ್ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಜಿತು 95 ಅಂಕಗಳನ್ನು ಪಡೆದಿದ್ದರು. ಆದರೆ ಅವರು 97, 97, 98,96, ಮತ್ತು 97 ಸೇರಿದಂತೆ 580 ಅಂಕಗಳನ್ನು ಗಿಟ್ಟಿಸಿಕೊಂಡಿದ್ದರು.
ಜಿತು ಸೇರಿದಂತೆ ಆರು ಮಂದಿ ಅಥ್ಲೀಟ್‌ಗಳು 580 ಅಂಕ ಪಡೆದಿದ್ದರು. ಅರ್ಹತಾ ಸುತ್ತಿನಲ್ಲಿ ಅವರು ಆರನೆ ಸ್ಥಾನ ಪಡೆದಿದ್ದರು.
ಅಂತಿಮ ಹಣಾಹಣಿಯಲ್ಲಿ ಜಿತು ಅವರು 9.8, 10.2, 10.5 ಸೇರಿದಂತೆ 30.5 ಅಂಕ ದಾಖಲಿಸಿದರು.
ಜಿತು ತೀವ್ರ ಸ್ಪರ್ಧೆ ನೀಡಿದ್ದರೂ, ಎರಡನೆ ಸ್ಥಾನ ಪಡೆದರು. ಬ್ರೆಝಿಲ್‌ನ ಫೆಲಿಫೆ ಅಲ್ಮೇಡಿಯಾ ವೂ ಮತ್ತು ಕೊರಿಯಾದ ಶೂಟರ್ ಜಿನ್ ಜಾನ್ಗೊ ವಿರುದ್ಧ ಸ್ಪರ್ಧೆ ಎದುರಿಸಿದರು. ಆದರೆ ಜಿನ್ 200 ಅಂಕ ದಾಖಲಿಸಿ ಚಿನ್ನ ಗಿಟ್ಟಿಸಿಕೊಂಡರು. ಜಿತು ಅವರು ಜಿನ್‌ಗಿಂತ 0.5 ಕಡಿಮೆ ಅಂಕಗಳ ಹಿನ್ನೆಡೆ ಸಾಧಿಸಿ ಬೆಳ್ಳಿ ತನ್ನದಾಗಿಸಿಕೊಂಡರು
ಜಾನ್ಗೋ 50 ಮೀಟರ್ ಶೂಟಿಂಗ್‌ನಲ್ಲಿ ಚಿನ್ನ, ಪಡೆದಿದ್ದರು. ಭಾರತದ ಇತರ ಶೂಟರ್‌ಗಳ ಪೈಕಿ ಓಂಕಾರ್ ಸಿಂಗ್ 28ನೆ ಸ್ಥಾನ ಹಾಗೂ ಗುರುಪ್ರೀತ್ ಸಿಂಗ್ 42ನೆ ಸ್ಥಾನ ಪಡೆದರು.





