ಅಫ್ಘಾನಿಸ್ತಾನ ತಂಡಕ್ಕೆ ಲಾಲ್‌ಚಂದ್ ರಜಪೂತ್ ಕೋಚ್

ಕಾಬೂಲ್, ಜೂ.25:ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಲಾಲ್‌ಚಂದ್ ರಜಪೂತ್ ಅವರು ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ನಾಯಕ ಇಂಝಮಮ್ ಉಲ್ ಹಕ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರಜಪೂತ್ ನೇಮಕಗೊಂಡಿದ್ದಾರೆ.
ಇಂಝಮಮ್ ಅವರು ಕಳೆದ ಎಪ್ರಿಲ್‌ನಲ್ಲಿ ಅಫ್ಘಾನಿಸ್ತಾನ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ರಜಪೂತ್ ಅವರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ದಕ್ಷಿಣ ಆಫ್ರಿಕದ ಹರ್ಷಲ್ ಗಿಬ್ಸ್ ಮತ್ತು ಮುಹಮ್ಮದ್ ಯೂಸುಫ್ ಮತ್ತು ವಿಂಡೀಸ್‌ನ ಕೋರಿ ಪಾಲಿಮೋರ್ ಅವರಿಗೆ ಅವಕಾಶ ನಿರಾಕರಿಸಿದ್ದಾರೆ.
ರಜಪೂತ್ 1985ರಿಂದ 1987ರ ತನಕ ಭಾರತದ ಕ್ರಿಕೆಟ್ ತಂಡದ ಪರ 2 ಟೆಸ್ಟ್‌ಹಾಗೂ ನಾಲ್ಕು ಏಕದಿನ ಪಂದ್ಯವನ್ನು ಆಡಿದ್ದರು. ಭಾರತ 2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಜಯಿಸಿದಾಗ ಲಾಲ್‌ಚಂದ್ ರಜಪೂತ್ ಭಾರತದ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದರು.
ರಜಪೂತ್ ಅವರು ಇಂಡಿಯಾ ಅಂಡರ್ -19 ಕ್ರಿಕೆಟ್ ತಂಡ,ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಯಶಸ್ವಿಯಾಗಿದ್ದರು. ಈ ಕಾರಣದಿಂದಾಗಿ ಅವರ ಅನುಭವ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಅಭಿವೃದ್ಧಿಗೆ ನೆರವಾಗಲಿದೆ’’ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ದ್ಯಾನೀಶ್ ನಸೀಮುಲ್ಲಾ ತಿಳಿಸಿದ್ದಾರೆ.
ರಜಪೂತ್ ತಾಂತ್ರಿಕವಾಗಿ ಮತ್ತು ವೃತ್ತಿಪರ ಬಲಿಷ್ಠ ಕೋಚ್ ಆಗಿದ್ದಾರೆ. ಅವರು ಸ್ಕಾಟ್ಲೆಂಡ್, ಐರ್ಲೆಂಡ್, ಹಾಲೆಂಡ್ ಪ್ರವಾಸದ ವೇಳೆ ಅಫ್ಘಾನಿಸ್ತಾನ ತಂಡದ ಕೋಚ್ ಆಗಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಮುಹಮ್ಮದ್ ಕೈಫ್ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ‘‘ ನಮಗೆ ಹಲವು ಅರ್ಜಿಗಳು ಬಂದಿತ್ತು. ಅಂತಿಮವಾಗಿ ರಜಪೂತ್ ಮತ್ತು ಕೈಫ್ ಅಂತಿಮವಾಗಿ ಕಣದಲ್ಲಿ ಉಳಿದಿದ್ದರು. ಈ ಪೈಕಿ ರಜಪೂತ್ ಅವರನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ,







