ಪೆನಾಲ್ಟಿ ಶೂಟೌಟ್‌ನಲ್ಲಿ ಸ್ವಿಟ್ಝರ್‌ಲ್ಯಾಂಡ್‌ನ್ನು ಹೊರದಬ್ಬಿದ ಪೋಲಂಡ್
ಯುರೋ ಫುಟ್ಬಾಲ್ ಟೂರ್ನಮೆಂಟ್

ಸೈಂಟ್ ಎಟಿನಿ, ಜೂ.25: ಇಲ್ಲಿ ನಡೆದ ಯುರೋ ಫುಟ್ಬಾಲ್ ಕೂಟದ ಮೊದಲ ಹದಿನಾರರ ಘಟ್ಟದ ಪಂದ್ಯದಲ್ಲಿ ಸ್ವಿಟ್ಝರ್‌ಲ್ಯಾಂಡ್‌ನ್ನು ಇಂದು ಪೋಲಂಡ್ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದೆ.
ಕುತೂಹಲ ಕೆರಳಿಸಿದದ್ದ ಈ ಪಂದ್ಯ 1-1 ಗೋಲುಗಳೊಂದಿಗೆ ಡ್ರಾದಲ್ಲಿ ಕೊನೆಗೊಂಡಾಗ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸಲಾಯಿತು.
ಪೋಲಂಡ್ ತಂಡದ ಜಾಕೂಬ್ ಬ್ಲಾಸ್‌ಝಿಕೊಸಕಿ 39ನೆ ನಿಮಿಷದಲ್ಲಿ ಗೋಲು ದಾಖಲಿಸಿದರು. ಸ್ವಿಸ್ ತಂಡದ ಝೆರ್ದಾನ್ ಶೆಕೋರಿಕಾರಿ 82ನೆ ನಿಮಿಷದಲ್ಲಿ ಗೋಲು ಜಮೆ ಮಾಡಿ ಸಮಬಲ ಸಾಧಿಸಿದರು. ಬಳಿಕ ಉಭಯ ತಂಡಗಳಿಂದಲೂ ಗೋಲು ಬಾರದೆ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಕೊನೆಗೊಂಡಿತ್ತು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಪೋಲಂಡ್ ಮೇಲುಗೈ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
Next Story





