ಕಾಸರಗೋಡು: ಮಾದಕ ವಸ್ತು ವಿರೋಧಿ ದಿನಾಚರಣೆ

ಕಾಸರಗೋಡು: ಮಾದಕ ವಸ್ತು ಮುಕ್ತ ಸಮಾಜಕ್ಕೆ ಜನರ ಬೆಂಬಲ ಅಗತ್ಯ ಎಂದು ರಾಜ್ಯ ಕಂದಾಯ ಸಚಿವ ಇ . ಚಂದ್ರಶೇಖರನ್ ಹೇಳಿದರು.
ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಆದಿತ್ಯವಾರ ಕಾಸರಗೋಡು ಸರಕಾರಿ ಕಾಲೇಜು ಸಭಾಂಗಣದಲ್ಲಿ ಅಬಕಾರಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿದೆ. ಮುಂದಿನ ಪೀಳಿಗೆಗೆ ಇಂತಹ ದುಶ್ಚಟ ದಿಂದ ಮುಕ್ತಿ ಲಭಿಸಬೇಕಿದೆ ಎಂದರು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ನಗರಸಭಾ ಅಧ್ಯಕ್ಷೆ ಭೀಫಾತಿಮ್ಮ ಇಬ್ರಾಹಿಂ, ಪ್ರಭಾರ ಪ್ರಾಂಶುಪಾಲ ಕೆ.ಕೆ ಮುಹಮ್ಮದಾಲಿ, ಪ್ರೆಸ್ ಕ್ಲಬ್ ಅಧ್ಯಕ್ಷ ಸನ್ನಿ ಜೋಸೆಫ್ , ಇ. ಚಂದ್ರಶೇಖರನ್ ನಾಯರ್, ಎಂ.ವಿ ಬಾಬುರಾಜ್, ಎಂ.ಸಿ ರಾಜು, ಎನ್.ಜಿ ರಘುನಾಥನ್, ಮುಹಮ್ಮದ್ ರಶೀದ್, ಮ್ಯಾಥ್ಯೂ ಕುರ್ಯನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಾಗಾರ, ಚಿತ್ರ ಪ್ರದರ್ಶನ, ಏಕಪಾತ್ರಾಭಿನಯ ಮೊದಲಾದ ಕಾರ್ಯಕ್ರಮಗಳನ್ನು ಮಾದಕ ವಸ್ತು ದಿನಾಚರಣೆಯಂಗವಾಗಿ ಹಮ್ಮಿಕೊಳ್ಳಲಾಗಿತ್ತು.
Next Story





