ಶೂಟಿಂಗ್ ವೇಳೆ ಗಾಯಗೊಂಡ ಸೈಫ್

ಮುಂಬೈ, ಜೂ. 26 : ಖ್ಯಾತ ನಟ ಸೈಫ್ ಅಲಿ ಖಾನ್ ಶೂಟಿಂಗ್ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಹೆಬ್ಬೆರಳಿಗೆ ಭಾರೀ ಗಾಯವಾದ ಸೈಫ್ ಅವರನ್ನು ಇಲ್ಲಿನ ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನು ಅವರ ಸೋದರಿ ಸೋಹಾ ಅಲಿ ಖಾನ್ ಖಚಿತಪಡಿಸಿದ್ದಾರೆ. " ಶೂಟಿಂಗ್ ವೇಳೆ ಸೈಫ್ ಅವರ ಹೆಬ್ಬೆರಳಿಗೆ ದೊಡ್ಡ ಗಾಯವಾಗಿದೆ. ಆದರೆ ಅವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಕ್ಕಿದ್ದು ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ " ಎಂದು ಸೋಹಾ ಹೇಳಿದ್ದಾರೆ.
Next Story





