ಬ್ಯಾಂಕುಗಳಿಂದ ಸಾಲ ವಿವರ ಕೋರಿದ ಎಸ್ಎಫ್ಐಒ
ಮಲ್ಯ ವಂಚನೆ ಪ್ರಕರಣ
ಮುಂಬೈ,ಜೂ.26: ಗಣ್ಯ ವ್ಯಕ್ತಿಗಳು ಭಾಗಿಯಾಗಿರುವ ಅಪರಾಧಗಳ ತನಿಖಾ ಸಂಸ್ಥೆಯಾಗಿರುವ ಗಂಭೀರ ವಂಚನೆ ತನಿಖಾ ಕಚೇರಿ(ಎಸ್ಎಫ್ಐಒ)ಯು ವಿಜಯ ಮಲ್ಯ ಒಡೆತನದ,ಈಗ ನಿಷ್ಕ್ರಿಯಗೊಂಡಿರುವ ಕಿಂಗ್ಫಿಷರ್ ಏರ್ಲೈನ್ಸ್ಗೆ ನೀಡಿರುವ ಸಾಲಗಳ ವಿವರಗಳನ್ನು ಸಲ್ಲಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ.
ಕಿಂಗ್ಫಿಷರ್ಗೆ ನೀಡಲಾಗಿರುವ ಸಾಲಗಳ ಎಲ್ಲ ವಿವರಗಳನ್ನು ಒದಗಿಸುವಂತೆ ಸೂಚಿಸಲಾಗಿದೆ. ಈ ಸಾಲಗಳನ್ನು ನೀಡುವ ಮುನ್ನ ಎಲ್ಲ ವಿಧಿವಿಧಾನಗಳನ್ನು ಅನುಸರಿಸಲಾಗಿತ್ತೇ ಎನ್ನುವುದನ್ನು ತಿಳಿದುಕೊಳ್ಳಲು ಎಸ್ಎಫ್ಐಒ ಬಯಸಿದೆ ಎಂದು ಬ್ಯಾಕಿಂಗ್ ಮೂಲವೊಂದು ತಿಳಿಸಿದೆ. ಅಗತ್ಯ ವಿವರಗಳನ್ನು ಅದಕ್ಕೆ ಸಲ್ಲಿಸಲಾಗಿದೆ ಎಂದೂ ಅದು ಹೇಳಿತು.
ಎಸ್ಎಫ್ಐಓ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ತನಗೆ ಒಪ್ಪಿಸುವ ಹಣಕಾಸು ವಂಚನೆ ಪ್ರಕರಣಗಳ ತನಿಖೆಯನ್ನು ನಡೆಸುತ್ತದೆ.
Next Story