ಆಹಾರ ಸಚಿವರ ಹೃದಯ ವೈಶಾಲ್ಯ...
"ಕ್ರೈಸ್ತ ಫಾದರ್" ಗೆ ಬ್ರದರ್ ಆದ ಖಾದರ್!

ಪವಿತ್ರ ಮಕ್ಕಾ ಮದೀನಾ ಪ್ರವಾಸ ಮುಗಿಸಿ ಇಂದು ಬೆಳಿಗ್ಗೆ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಧ್ಯಾಹ್ನ ಬಳಿಕದ 3 ಗಂಟೆಯ ಜೆಟ್ ಏರ್ವೇಸ್ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹಾರಿದ್ದ ಆಹಾರ ಸಚಿವ ಯುಟಿ. ಖಾದರ್ ರಿಗೆ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಲ್ಲಿ ಇಳಿಯಲು ಸಾಧ್ಯವಾಗಿಲ್ಲ. ಸ್ವಲ್ಪ ಹೊತ್ತು ಸುತ್ತು ಹೊಡೆದ ವಿಮಾನ ಪುನಃ ಹಿಂದಿರುಗಿ ಬೆಂಗಳೂರಲ್ಲೇ ಇಳಿಸುವ ಮೂಲಕ ಪ್ರಯಾಣಿಕರಲ್ಲಿ ನಿರಾಶೆ ತಂದಿತ್ತು.
ಇದೇ ವಿಮಾನದಲ್ಲಿದ್ದ ವ್ಹೀಲ್ ಚೆಯರ್ ನಲ್ಲಿ ಬಂದಿದ್ದ 88 ರ ಹರೆಯದ ನಿವೃತ್ತ ಕ್ರೈಸ್ತ ಫಾದರ್ ಸ್ಟೇನಿ ವೇಗಸ್ ಮತ್ತವರ ಆಸ್ಟ್ರೇಲಿಯಾದ ಕುಟುಂಬ ಸದಸ್ಯ ಕೂಡಾ ಇದ್ದರು. ಅವರು ಮಂಗಳೂರು ಬಿಷಪ್ ಅಲೋಷಿಯಸ್ ಪಾವ್ಲ್ ಡಿ'ಸೋಜ ಅವರ ಹುಟ್ಟುಹಬ್ಬಕ್ಕೆ ಶುಭಕೋರಲು ಮಂಗಳೂರಿಗೆ ತೆರಳುತ್ತಿದ್ದರು. ಆದರೆ ವಿಮಾನ ಮಂಗಳೂರಲ್ಲಿ ಲ್ಯಾಂಡ್ ಆಗದೇ ಇರುವುದರಿಂದ ಬೆಂಗಳೂರಿನಲ್ಲಿ ಇಳಿದು ಏರ್ ಪೋರ್ಟ್ ನಲ್ಲಿ ಅತಂತ್ರ ಸ್ಥಿತಿಯಲ್ಲಿದ್ದರು.
ಇದನ್ನು ಗಮನಿಸಿದ ಸಚಿವ ಯು.ಟಿ. ಖಾದರ್ ಕ್ರೈಸ್ತ ಫಾದರ್ ಸ್ಟೇನಿ ವೇಗಸ್ ಅವರನ್ನು ತನ್ನ ಸರಕಾರಿ ಕಾರಲ್ಲಿ ಕುಳ್ಳಿರಿಸಿ ಬೆಂಗಳೂರು ಮಿಲ್ಲರ್ಸ್ ರಸ್ತೆಯಲ್ಲಿ ಬಿಷಪ್ ಹೌಸ್ ನ ಅವರ ವಾಸ್ತವ್ಯಕ್ಕೆ ಬಿಟ್ಟು ತನ್ನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದರು. ವಿಮಾನದ ಅನಾನುಕೂಲತೆಯ ವಿವರವನ್ನು ಮಂಗಳೂರು ಬಿಷಪ್ ಕಛೇರಿಗೂ ಮಾಹಿತಿ ನೀಡಿದರು.










