ದೇಶ ಮಾರಲು ಮುಂದಾಗಿರುವ ಪ್ರಧಾನಿ: ಅನಂತಸುಬ್ಬರಾವ್

ಬೆಂಗಳೂರು, ಜೂ.26: ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ದೇಶದ ನೆಲ, ಜಲವನ್ನು ಮಾರಲು ಮುಂದಾಗಿದ್ದಾರೆ ಎಂದು ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಆಪಾದಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ವಕೀಲರ ಸಂಘ ಆಯೋಜಿಸಿದ್ದ ಉದ್ದೇಶಿತ ಕಾರ್ಮಿಕ ಕಾನೂನು ಗಳ ತಿದ್ದುಪಡಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಸ್ಟ್ ಇಂಡಿಯಾ ಕಂಪೆನಿ ದೇಶದ ಜನರನ್ನು ಗುಲಾ ಮರನ್ನಾಗಿ ಮಾಡಿತ್ತು. ಅವರನ್ನು ದೇಶದಿಂದ ತೊಲಗಿ ಸಲು ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿ ನಡೆಸಿ ದರು. ಆದರೆ, ಈಗ ಸಾವಿರಾರು ಈಸ್ಟ್ ಇಂಡಿಯಾ ಕಂಪೆನಿಗಳಿಗೆ ಅವಕಾಶ ಮಾಡಿಕೊಡುತ್ತಿರುವ ಪ್ರಧಾನಿ ದೇಶದ ನೆಲ, ಜಲ, ಕಾರ್ಮಿಕರ ಬೆವರು ಉಚಿತ ವಾಗಿ ಸಿಗುತ್ತದೆ ಎಂದು ರತ್ನಗಂಬಳಿ ಹಾಸುತ್ತಿದ್ದಾರೆ. ಅವರ ವಿರುದ್ಧ ದೇಶದ ಜನ ಪ್ರಕರಣ ದಾಖಲಿಸಬೇ ಕಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರ ಅನೇಕ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಸಾರ್ವಜನಿಕ ವಲಯದ ಕಂಪೆನಿಗಳನ್ನು ಸಾಯಿಸಿ ಖಾಸಗಿಯವರಿಗೆ ಅವಕಾಶ ಮಾಡಿಕೊಡುತ್ತಿದೆ. ಅಲ್ಲದೆ, ಅಂಪ್ರಟೈಸ್, ಟ್ರೈನೀಸ್, ಗುತ್ತಿಗೆ ಹೆಸರಲ್ಲಿ ನೌಕರರನ್ನು ಶೋಷಣೆ ಮಾಡಲಾಗು ತ್ತಿದೆ. ಆ ಮೂಲಕ ದರೋಡೆ ಮಾಡುವವನಿಗೆ ತಿಜೋರಿಯ ಕೀ ಕೊಟ್ಟಂತಾಗಿದೆ ಎಂದು ಕಿಡಿಕಾರಿದರು. ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕ ಮೂಲಭೂತ ಹಕ್ಕುಗಳ ವಿರುದ್ಧ ದಾಳಿ ಮಾಡಲಾಗುತ್ತಿವೆ. ಹೆಣ್ಣು ಮಕ್ಕಳಿಗೆ ರಾತ್ರಿ ಪಾಳಿ ಯಲ್ಲಿ ಕೆಲಸ ಮಾಡುವ ಅವಕಾಶವನ್ನೂ ಕಲ್ಪಿಸ ಲಾಗಿದೆ. ಕೆಲಸ ಮಾಡದಿದ್ದವರನ್ನು ಕೆಲಸದಿಂದ ತೆಗೆ ಯುವ ಬೆದರಿಕೆ ಹಾಕಲಾಗುತ್ತಿದೆ ಇವೆಲ್ಲಾ ಮಾಲಕರ ಪರವಾಗಿ ಇರುವ ಕಾಯ್ದೆಗಳು ಇಂತಹುಗಳ ವಿರುದ್ಧ ಮತ್ತಷ್ಟು ಹೋರಾಟ ಮಾಡುವ ಅಗತ್ಯವಿದೆ ಎಂದರು.
ಪ್ರಧಾನಿ ಕಳೆದೆರಡು ವರ್ಷಗಳಲ್ಲಿ ಮಾತನಾಡುವು ದರಲ್ಲಿ, ದೇಶ ಸುತ್ತುವುದರಲ್ಲಿ ದಾಖಲೆ ಮಾಡಿದ್ದಾರೆ. ಇದನ್ನು ಎಂತವರೂ ಒಪ್ಪುತ್ತಾರೆ ಎಂದು ಕುಹಕವಾಡಿದ ಅವರು ಕಾರ್ಮಿಕ ವಿರೋಧಿ ನಿಲುವನ್ನು ಅನುಸರಿಸು ತ್ತಿದ್ದಾರೆ ಎಂದು ದೂರಿದರು. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಕೊಲಿನ್ ಗೋನ್ಸಾಲ್ವೆಸ್, ಕಾರ್ಮಿಕ ಮುಖಂಡ ರಾದ ವಿಲಾಸ್‌ಕುಮಾರ್, ವಿಶ್ವನಾಥ್‌ನಾಯಕ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಭಾರತೀಯ ವಕೀಲರ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರ್ ಉಪಸ್ಥಿತರಿದ್ದರು.
ಈಸ್ಟ್ ಇಂಡಿಯಾ ಕಂಪೆನಿ ದೇಶದ ಜನರನ್ನು ಗುಲಾಮರನ್ನಾಗಿ ಮಾಡಿತ್ತು. ಅದನ್ನು ದೇಶದಿಂದ ತೊಲಗಿಸಲು ಗಾಂಧೀಜಿ ಕ್ವಿಟ್ ಇಂಡಿಯಾ ಚಳುವಳಿ ನಡೆಸಿದರು. ಆದರೆ, ಈಗ ಸಾವಿರಾರು ಈಸ್ಟ್ ಇಂಡಿಯಾ ಕಂಪೆನಿಗಳಿಗೆ ಅವಕಾಶ ಮಾಡಿಕೊಡುತ್ತಿರುವ ಪ್ರಧಾನಿ ದೇಶದ ನೆಲ, ಜಲ, ಕಾರ್ಮಿಕರ ಬೆವರು ಉಚಿತವಾಗಿ ಸಿಗುತ್ತದೆ ಎಂದು ರತ್ನಗಂಬಳಿ ಹಾಸುತ್ತಿದ್ದಾರೆ. ಅವರ ವಿರುದ್ಧ ದೇಶದ ಜನ ಪ್ರಕರಣ ದಾಖಲಿಸಬೇಕಾಗಿದೆ.
-ಎಚ್.ವಿ. ಅನಂತ ಸುಬ್ಬರಾವ್, ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ







