ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟು ಹಾಕುವವರ ಬಗ್ಗೆ ಎಚ್ಚರವಾಗಿರಿ
ಅರಮನೆ ಮೈದಾನದಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಸಿದ್ದರಾಮಯ್ಯ

ಬೆಂಗಳೂರು, ಜೂ.26: ಧರ್ಮ ಧರ್ಮಗಳೊಡನೆ ಸಂಘರ್ಷ ಹುಟ್ಟು ಹಾಕುವ ದುಷ್ಟಶಕ್ತಿಗಳ ವಿರುದ್ಧ ಎಚ್ಚರಿಕೆ ವಹಿಸಿ ಸಮಾಜದಲ್ಲಿ ಸೌಹಾರ್ದ ವಾತಾವರಣವನ್ನು ಕಾಪಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲದುಷ್ಟಶಕ್ತಿಗಳು ಧರ್ಮ ಧರ್ಮಗಳೊಡನೆ ವೈರುಧ್ಯವನ್ನು ಬಿತ್ತುತ್ತಿವೆ. ಈ ದುಷ್ಟಶಕ್ತಿಗಳು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸು ತ್ತಿದ್ದಾರೆ. ಈ ರೀತಿಯಾದ ಯಾವುದೇ ಪ್ರಚೋದನೆಗಳಿಗೆ ಕಿವಿಗೊ ಡಬಾರದು. ಬದಲಾಗಿ ನೆರೆಹೊರೆಯ ಅನ್ಯ ಧರ್ಮದವರನ್ನು ಸೋದರತ್ವದಿಂದ ಕಾಣಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಎಲ್ಲ ಧರ್ಮಗಳು ಸೌಹಾರ್ದತೆಯ ಸಿದ್ಧಾಂತಗಳನ್ನು ಪ್ರತಿಪಾ ದಿಸುತ್ತವೆ. ಇಲ್ಲಿ ಯಾರೂ ಹುಟ್ಟುವಾಗ ನಾನು ಈ ಧರ್ಮದಲ್ಲಿ, ಆ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟುವುದಿಲ್ಲ. ನಾವು ಹುಟ್ಟುವಾಗ ಧರ್ಮವಿರುವುದಿಲ್ಲ. ಬದಲಾಗಿ ಮಾನವೀ ಯತೆ ಇರುತ್ತದೆ. ಈ ಮಾನವೀಯತೆಯನ್ನು ದೇಹದಲ್ಲಿ ಉಸಿರಿ ರುವರೆಗೂ ಕಾಪಾಡಬೇಕು ಮತ್ತು ಐಕ್ಯತೆಯನ್ನು ಪ್ರದರ್ಶಿಸಬೇಕು ಎಂದು ಉಲ್ಲೇಖಿಸಿದರು. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಸ ವಿಂಗಡನೆ ಮತ್ತು ಫ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ರೋಷನ್ ಬೇಗ್, ತನ್ವೀರ್ ಸೇಠ್, ರಮಾನಾಥ ರೈ, ಕೆ.ಜೆ.ಜಾರ್ಜ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಶಾಸಕರಾದ ರಫೀಕ್ ಅಹ್ಮದ್, ಎನ್.ಎ.ಹ್ಯಾರಿಸ್ ಉಪಸ್ಥಿತರಿದ್ದರು.
ಕೆಲ ದುಷ್ಟಶಕ್ತಿಗಳ ಧರ್ಮ ಧರ್ಮಗಳೊಡನೆ ವೈರುಧ್ಯವನ್ನು ಬಿತ್ತುತ್ತಿವೆ. ಈ ದುಷ್ಟಶಕ್ತಿಗಳ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಈ ರೀತಿಯಾದ ಯಾವುದೇ ಪ್ರಚೋದನೆಗಳಿಗೆ ಕಿವಿಗೊಡಬಾರದು. ಬದಲಾಗಿ ನೆರೆಹೊರೆಯ ಅನ್ಯ ಧರ್ಮದವರನ್ನು ಸೋದರತ್ವದಿಂದ ಕಾಣಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಸಂರಕ್ಷಿಸಬೇಕು
-ಮುಖ್ಯಮಂತ್ರಿ ಸಿದ್ದರಾಮಯ್ಯ







