ಯುರೋ ಕಪ್: ಫ್ರಾನ್ಸ್ ಕ್ವಾ.ಫೈನಲ್‌ಗೆ

ಲಿಯೊನ್(ಫ್ರಾನ್ಸ್), ಜೂ.26: ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಆತಿಥೇಯ ಫ್ರಾನ್ಸ್ ತಂಡ ಐರ್ಲೆಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಮಣಿಸಿ ಯುರೋ ಕಪ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ.
ರವಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಪಂದ್ಯ ಆರಂಭವಾದ ಎರಡೇ ನಿಮಿಷದಲ್ಲಿ ಐರ್ಲೆಂಡ್ ತಂಡ ರಾಬ್ಬಿ ಬ್ರಾಡಿ ಬಾರಿಸಿದ ಮಿಂಚಿನ ಗೋಲಿನ ನೆರವಿನಿಂದ 1-0 ಮುನ್ನಡೆ ಸಾಧಿಸಿತು. ಈ ಗೋಲು ಈವರ್ಷದ ಟೂರ್ನಿಯಲ್ಲಿ ದಾಖಲಾದ ವೇಗದ ಗೋಲಾಗಿತ್ತು.
ದ್ವಿತೀಯಾರ್ಧದ 56 ಹಾಗೂ 61ನೆ ನಿಮಿಷದಲ್ಲಿ ಡಬಲ್ ಗೋಲು ಬಾರಿಸಿದ ಆ್ಯಂಟೊನಿ ಗ್ರಿಝ್‌ಮನ್ ಫ್ರಾನ್ಸ್ ತಂಡ 16 ವರ್ಷಗಳ ಬಳಿಕ ಯುರೋ ಕಪ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಲು ನೆರವಾದರು. ಫ್ರಾನ್ಸ್ ರವಿವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಅಥವಾ ಐಸ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ.
Next Story





