ಬಾವಿಗೆ ಬಿದ್ದು ಮಗು ಮೃತ್ಯು
ಮಲ್ಪೆ, ಜೂ.26: ಆಟ ಆಡುತ್ತಿದ್ದ ಮಗು ಬಾವಿಗೆ ಬಿದ್ದು ಮೃತಪಟ್ಟ ಘಟನೆ ತೆಂಕನಿಡಿಯೂರು ಗ್ರಾಮದ ಗರಡಿ ಮಜಲು ಎಂಬಲ್ಲಿ ನಡೆದಿದೆ.
ಗರಡಿಮಜಲು ಗರಡಿಮಠ ನಿವಾಸಿ ರಾಘವೇಂದ್ರ ಭಟ್ ಎಂಬವರ ಪುತ್ರ ಸಮರ್ಥ(5) ಮೃತ ಬಾಲಕ. ಶನಿವಾರ ಬೆಳಗ್ಗೆ ಮಗು ಮನೆ ಸಮೀಪ ಆಟ ಆಡುತ್ತಿದ್ದಾಗ ಅಲ್ಲೇ ಸಮೀಪದ ಬಾವಿಗೆ ಬಿತ್ತೆನ್ನಲಾಗಿದೆ. ನಂತರ ಮಗು ಬಾವಿಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಮಗುವನ್ನು ಬಾವಿಯಿಂದ ಎತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಪರಾಹ್ನ 2:20ಕ್ಕೆೆ ಮಗು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿತು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





