ಕ್ಷಯರೋಗ ಮಾಹಿತಿ ಕಾರ್ಯಾಗಾರ

ಕಾರ್ಕಳ, ಜೂ.26: ಉಡುಪಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ಕಾರ್ಕಳ ಕ್ಷಯ ರೋಗ ಘಟಕದ ವತಿಯಿಂದ ತಾಲೂಕಿನ ಇನ್ನದ ಎ.ಬಿ.ಎಂ.ವಿ ಶಾಸ್ತ್ರೀ ಪ್ರೌಢಶಾಲೆಯಲ್ಲಿ ಕ್ಷಯ ರೋಗದ ಬಗ್ಗೆ ಮಾಹಿತಿ ಕಾರ್ಯಾ ಗಾರ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿ ಕಾರಿಗಳ ಕಚೇರಿಯ ಪಿಪಿಎಂಸಿ ಸುರೇಶ್ ಮಾತನಾಡಿ, ಕ್ಷಯ ರೋಗದ ಲಕ್ಷಣ, ಹರಡುವ ವಿಧಾನ, ಪತ್ತೆ ಹಚ್ಚುವ ವಿಧಾನ, ಚಿಕಿತ್ಸಾ ವಿಧಾನ ಹಾಗೂ ನಿಯಂತ್ರಿಸುವ ಕುರಿತು ಹಾಗೂ ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮದ ಡಾಟ್ ಚಿಕಿತ್ಸೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
Next Story





