ಪೆರ್ಲ: ವಿದ್ಯುತ್ ತಂತಿ ತುಳಿದು ವ್ಯಕ್ತಿ ಮೃತ್ಯು

ಕಾಸರಗೋಡು, ಜೂ.26: ಕಾಡು ಹಂದಿಗಿಟ್ಟ ವಿದ್ಯುತ್ ತಂತಿ ತುಳಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪೆರ್ಲದಲ್ಲಿ ನಡೆದಿದೆ. ನಾಲ್ಕು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಬಾವಿಯಲ್ಲಿ ಮೃತದೇಹ ಪತ್ತೆ ಯಾದುದರಿಂದ ಅಸಹಜ ಸಾವು ಎಂದು ಬದಿಯಡ್ಕ ಪೊಲೀಸರು ಕೇಸು ದಾಖ ಲಿಸಿಕೊಂಡಿದ್ದರು. ಆದರೆ ಮರಣೋತ್ತರ ಪರೀಕ್ಷೆ ಯಿಂದ ವಿದ್ಯುತ್ ತಗಲಿ ಮೃತಪಟ್ಟಿರುವುದಾಗಿ ಬೆಳಕಿಗೆ ಬಂದಿದ್ದು, ತನಿಖೆ ನಡೆಸಿದ ಪೊಲೀಸರು ಘಟನೆಯ ಸತ್ಯಾಸತ್ಯತೆಯನ್ನು ಪತ್ತೆಹಚ್ಚಿದ್ದಾರೆ.
ಪೆರ್ಲ ಬಜಕೂಡ್ಲುವಿನ ಸುಂದರ(42) ಮೃತಪ ಟ್ಟವರು. ಕಾಡುಹಂದಿ ದಾಳಿ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವರ ಕೃಷಿ ಸ್ಥಳದಲ್ಲಿ ವಿದ್ಯುತ್ ಬೇಲಿಯನ್ನು ಅಳವಡಿಸಲಾಗಿತ್ತು. ಜೂ.19 ರಂದು ಮನೆಯಿಂದ ತೆರಳಿದ್ದ ಸುಂದರ ನಾಪತ್ತೆಯಾಗಿದ್ದರು. ಈ ಬಗ್ಗೆ ಮನೆಯವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಶೋಧ ನಡೆಸುತ್ತಿದ್ದಂತೆ ಜೂ.22ರಂದು ಸಮೀಪದ ಬಾವಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿತ್ತು. ಸಾವಿನ ಬಗ್ಗೆ ಮನೆಯವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುತ್ ಶಾಕ್ ತಗಲಿ ಮೃತಪಟ್ಟಿರುವುದಾಗಿ ತಿಳಿದುಬಂದಿತ್ತು. ವಿದ್ಯುತ್ ಬೇಲಿಯಿಂದ ಶಾಕ್ ತಗಲಿ ಸಮೀಪದ ಬಾವಿಗೆ ಬಿದ್ದು ಈ ದುರ್ಘಟನೆ ನಡೆದಿತ್ತೆಂದು ತನಿಖೆ ಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಪಟ್ಟಂತೆ ಕೃಷಿಕನನ್ನು ಬದಿಯಡ್ಕ ಪೊಲೀಸರು ವಶಕ್ಕೆ ತೆಗೆದು ಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಪ್ರದೇಶದ ಕೃಷಿ ಸ್ಥಳಗಳಿಗೆ ಹಂದಿಗಳ ಕಾಟ ತೀವ್ರಗೊಂಡಿದ್ದು ಈ ಹಿನ್ನೆಲೆಯಲ್ಲಿ ತಂತಿಗೆ ರಾತ್ರಿ ವಿದ್ಯುತ್ ಪ್ರವಹಿಸಲಾಗಿತ್ತು. ಆದರೆ ಇದನ್ನು ಅರಿ ಯದೆ ಬೇಲಿ ದಾಟಿದ ಸಂದರ್ಭ ಈ ಘಟನೆ ನಡೆದಿ ರಬಹುದು ಎಂದು ಪೊಲೀಸರು ತಿಳಿಸಿದ್ದಾರೆ





