ಪಾಲ್ತಾಡು: ಸ್ಕೂಟರ್ ಬೆಂಕಿಗೆ ಆಹುತಿ
ಪುತ್ತೂರು, ಜೂ.26: ಚಾಲಕನ ನಿಯಂತ್ರಣ ತಪ್ಪಿಎಂ80 ಸ್ಕೂಟರೊಂದು ಸ್ಕಿಡ್ ಆಗಿ ರಸ್ತೆಯಲ್ಲಿ ಉರುಳಿ ಬಿದ್ದು ಬೆಂಕಿ ಗಾಹುತಿಯಾದ ಘಟನೆ ರವಿವಾರ ಪುತ್ತೂರು ತಾಲೂಕಿನ ಪಾಲ್ತಾಡು ಎಂಬಲ್ಲಿ ನಡೆದಿದೆ. ಪಾಲ್ತಾಡು ತಾರಿಪಡ್ಪು ನಿವಾಸಿ ಗೋಪಾಲಕೃಷ್ಣ ಮಣಿಯಾಣಿ ತನ್ನ ಸ್ಕೂಟರ್‌ನಲ್ಲಿ ಕಾಪುತಕಾಡು ಎಂಬಲ್ಲಿಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಗೋಪಾಲಕೃಷ್ಣ ಮಣಿಯಾಣಿ ಚಲಾಯಿಸುತ್ತಿದ್ದ ಸ್ಕೂಟರ್ ಮಳೆಯ ಕಾರಣದಿಂದ ಸ್ಕಿಡ್ ಆಗಿ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡು ವಾಹನ ಭಾಗಶಃ ಸುಟ್ಟುಹೋಗಿದೆ.
ಈ ಸಂದಭರ್ದಲ್ಲಿ ಇಲ್ಲಿನ ಶ್ರೀವಿಷ್ಣುಮಿತ್ರ ವೃಂದದವರು ಮನೆಮನೆ ಸಸಿ ನೆಡುವ ಕಾರ್ಯಕ್ರಮ ನಡೆಸುತ್ತಿದ್ದು, ವಾಹನಬಿದ್ದ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಸಹಕರಿಸಿದರು
Next Story





