Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಡಲ್ಕೊರೆತಕ್ಕೆ ಆಗಿಲ್ಲ ಶಾಶ್ವತ ಪರಿಹಾರ

ಕಡಲ್ಕೊರೆತಕ್ಕೆ ಆಗಿಲ್ಲ ಶಾಶ್ವತ ಪರಿಹಾರ

ಕಾಸರಗೋಡು ಜಿಲ್ಲೆಯಲ್ಲಿ ಕಡಲ್ಕೊರೆತ ಸಮಸ್ಯೆಯಲ್ಲಿ 40 ಕಿ.ಮೀ. ತೀರ ಪ್ರದೇಶ

ಸ್ಟೀಫನ್ ಕಯ್ಯರ್ಸ್ಟೀಫನ್ ಕಯ್ಯರ್27 Jun 2016 12:08 AM IST
share
ಕಡಲ್ಕೊರೆತಕ್ಕೆ ಆಗಿಲ್ಲ ಶಾಶ್ವತ ಪರಿಹಾರ

ಕಾಸರಗೋಡು, ಜೂ.26: ಪ್ರತೀ ವರ್ಷ ಮಳೆಗಾಲ ಬಂತೆಂ ದರೆ ಸಮುದ್ರತೀರವು ಅಲೆಗಳ ಅಬ್ಬರಕ್ಕೆ ಕೊರೆತಕ್ಕೊಳಗಾಗು ವುದು ಸಾಮಾನ್ಯ ಸಮಸ್ಯೆಯಾ ಗಿದೆ. ಈ ಕಾರಣದಿಂದ ತಲಪಾಡಿ ಯಿಂದ ವಲಿಯಪರಂಬ ತನಕ ನೂರಾರು ತೀರವಾಸಿ ಕುಟುಂಬಗಳು ಪ್ರತೀ ಮಳೆಗಾಲದಲ್ಲೂ ಜೀವಕೈಯಲ್ಲಿ ಹಿಡಿದು ಬದುಕು ಸಾಗಿಸುತ್ತಿದ್ದಾರೆ. ಆದರೆ ಕಡಲ್ಕೊರೆತ ತಡೆಗೆ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ಕಲ್ಪಿಸದಿರುವುದರಿಂದ ಕಳೆದ ಒಂದೆರಡು ದಶಕಗಳಿಂದ ಕಿಲೋ ಮೀಟರ್‌ಗಳಷ್ಟು ತೀರವನ್ನು ಕಡಲು ಆಕ್ರಮಿಸಿಕೊಂಡಿದೆ.

       ಕಾಸರಗೋಡು ಜಿಲ್ಲೆಯಲ್ಲಿರುವ 87.65 ಕಿ.ಮೀ. ಉದ್ದದ ಕಡಲ ತೀರದಲ್ಲಿ 10 ಕಿ. ಮೀ.ಗಳಷ್ಟು ಮಾತ್ರ ತಡೆಗೋಡೆ ನಿರ್ಮಿಸಲಾಗಿದೆ. ಉಳಿದೆಡೆ ಕಡಲ್ಕೊರೆತ ಸಾಮಾನ್ಯವಾಗಿದ್ದು, ಮಳೆಗಾಲದಲ್ಲಿ ತೀರವಾಸಿಗಳು ಭಯಭೀತರಾಗಿ ಬದುಕು ಸಾಗಿಸುವಂತಾಗಿದೆ. ಪ್ರತಿವರ್ಷ ಮನೆಗಳು, ಕಟ್ಟಡ, ತೆಂಗು, ಮರಗಳು ಸೇರಿದಂತೆ ತೀರವನ್ನು ಸಮುದ್ರ ಸೆಳೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ 40 ಕಿ.ಮೀ.ನಷ್ಟು ತೀರವು ಕಡಲ್ಕೊರೆತ ಸಮಸ್ಯೆಗೊಳಗಾಗುತ್ತಿದೆ. ಈ ಪೈಕಿ ಹತ್ತು ಕಿ.ಮೀ.ನಷ್ಟು ತೀರ ಪ್ರದೇಶ ಗಂಭೀರ ಕಡಲ್ಕೊರೆತಕ್ಕೊಳಗಾಗುತ್ತಿದೆ. ಈ ಪೈಕಿ ಚೆಂಬರಿಕ (800 ಮೀ.), ಚೇರಂಗೈ (3 ಕಿ.ಮೀ.), ತೈಕಡಪ್ಪುರ (1.65 ಕಿ.ಮೀ.), ಚಿತ್ತಾರಿ (2 ಕಿ.ಮೀ.), ನಾಂಗಿ ಕೊಪ್ಪಳ(1.2 ಕಿ.ಮೀ.) ಹಾಗೂ ಬೇರಿಕೆ ಮಣಿಮುಂಡ(1.5 ಕಿ.ಮೀ.) ತೀರದಲ್ಲಿ ತಡೆಗೋಡೆ ನಿರ್ಮಿಸುವಂತೆ ಜಲ ಸಂಪನ್ಮೂಲ ಇಲಾಖೆ 2 ವರ್ಷಗಳ ಹಿಂದೆಯೇ ಯೋಜನೆ ಸಿದ್ಧಪಡಿಸಿ ಸಲ್ಲಿಸಿದ್ದರೂ ಅದಿನ್ನೂ ನನೆಗುದಿಗೆ ಬಿದ್ದಿದೆ. ಶಾಶ್ವತ ತಡೆ ಗೋಡೆ ಇಲ್ಲದಿರುವುದು ಕಡಲ್ಕೊರೆತ ಪ್ರತಿ ವರ್ಷ ಮರುಕಳಿಸಲು ಕಾರಣವಾಗುತ್ತಿದೆ. ಕುಂಬಳೆಯ ಕೊಯಿಪ್ಪಾಡಿ, ಆರಿಕ್ಕಾಡಿ, ಚೇರಂಗೈ, ಚೆಂಬರಿಕ, ಕೀಯೂರು, ಚಿತ್ತಾರಿ, ಅಜನೂರು, ತೈಕಡಪ್ಪುರ ಮೊದಲಾದೆಡೆ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗುತ್ತಿದೆ. ಈ ಸ್ಥಳಗಳಲ್ಲಿ ಹೆಕ್ಟೇರ್ ಪ್ರಮಾಣದಲ್ಲಿ ತೀರವನ್ನು ಕಡಲು ಸೆಳೆದುಕೊಂಡಿದೆ. ಇದಲ್ಲದೆ ಹಲವು ಮನೆಗಳು, ತೆಂಗು ಸೇರಿ ದಂತೆ ಮರಗಳು ಪ್ರತಿವರ್ಷ ಸಮುದ್ರಪಾಲಾ ಗುತ್ತಿವೆ. ಹಲವೆಡೆ ರಸ್ತೆಗಳೂ ಕಡಲೊಡಲು ಸೇರಿವೆ.
ಬೇಕಲ, ಕೋಟಿಕುಳಂ, ತೃಕ್ಕನ್ನಾಡ್ ಮೊದಲಾದೆಡೆ ಸಮುದ್ರ ತೀರದಲ್ಲಿ ತಡೆಗೋಡೆಗಳಿಲ್ಲ. ಆದ್ದರಿಂದ ಈ ಪ್ರದೇಶಗಳಲ್ಲಿ ಕಡಲಿನಬ್ಬರಕ್ಕೆ ನೀರು ಮನೆಗಳಿಗೆ ನುಗ್ಗುತ್ತಿದೆ. ಮೊಗ್ರಾಲ್, ಉಪ್ಪಳ, ಶಿರಿಯಾ, ಕುಂಬಳೆ ಮೊದಲಾದೆಡೆಗಳಲ್ಲಿ ಮಳೆಗಾಲದ ಆರಂಭದಲ್ಲೇ ಕಡಲ್ಕೊರೆತ ಕಾಣಿಸಿಕೊಂಡಿದೆ.
 ಜಿಲ್ಲೆಯಲ್ಲಿ ನಿರ್ಮಿಸಲಾದ ಬಹುತೇಕ ತಡೆಗೋಡೆ ಕಡಲ್ಕೊರೆತದ ತೀವ್ರತೆಗೆ ಸಮುದ್ರಪಾಲಾಗಿವೆ. ತಾತ್ಕಾಲಿಕ ತಡೆಗೋಡೆ ಹಲವೆಡೆಗಳಲ್ಲಿ ನಿರ್ಮಿಸಿದ್ದರೂ ಅದು ಪ್ರಯೋ ಜನಕ್ಕೆ ಬರುತ್ತಿಲ್ಲ. ತೀರಪ್ರದೇಶದ ಸಂರಕ್ಷಣೆಗಾಗಿ ತಡೆ ಗೋಡೆ ನಿರ್ಮಾಣಕ್ಕೆ ಪ್ರತ್ಯೇಕ ಯೋಜನೆಗಳನ್ನು ಸರಕಾರ ಕೈಗೊಂಡಿಲ್ಲ. ಸಣ್ಣ ಯೋಜ ನೆಗಳ ಮೂಲಕ ಬಿಡುಗಡೆಗೊಂಡ ಹಣದಿಂದ ಅರ್ಧಂಬರ್ಧ ತಡೆಗೋಡೆ ನಿರ್ಮಾಣವಾಗಿದೆ. ಅಲೆಗಳ ತೀವ್ರತೆಗೆ ಇದು ಕೂಡ ಸಮುದ್ರಪಾಲಾಗುತ್ತಿದೆ. ಕಡಲ್ಕೊರೆತ ಸಮಸ್ಯೆಯ ತೀವ್ರತೆ ಮನಗಂಡು ಕೇಂದ್ರ, ರಾಜ್ಯ ಸರಕಾರಗಳು ತಡೆಗೋಡೆ ನಿರ್ಮಾ ಣಕ್ಕಾಗಿ ಹಲವು ಬಾರಿ ಅನುದಾನ ಬಿಡುಗಡೆ ಮಾಡಿವೆ. ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

      ಕಳೆದ ಮೂರು ದಶಕಗಳನ್ನು ಅವಲೋಕಿ ಸಿದಾಗ ಸಾವಿರಾರು ಹೆಕ್ಟೇರ್ ತೀರವನ್ನು ಕಡಲು ಸೆಳೆದುಕೊಂಡಿದೆ. ನೂರಾರು ಮನೆಗಳು, ಆಸ್ತಿಪಾಸ್ತಿ ಸಮುದ್ರಪಾಲಾಗಿವೆ. ಕೋಟ್ಯಂತರ ರೂ. ವಿನಿಯೋಗಿಸಿ ನಿರ್ಮಿ ಸಿರುವ ರಸ್ತೆಗಳು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿವೆ. ಆದರೆ ತೀರವಾಸಿಗಳು ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿ ಹರಿಸಲು ಸರಕಾರಗಳು ಸಕಾರಾತ್ಮಕ ವಾಗಿ ಕ್ರಮ ಕೈಗೊಂಡಿಲ್ಲ. ಇದ ರಿಂದಾಗಿ ಕಡಲ ತೀರ ನಿವಾಸಿಗಳ ಬದುಕು ಇಂದಿಗೂ ಅತಂತ್ರ ವಾಗಿಯೇ ಮುಂದುವರಿದಿದೆ.

share
ಸ್ಟೀಫನ್ ಕಯ್ಯರ್
ಸ್ಟೀಫನ್ ಕಯ್ಯರ್
Next Story
X