ಹಾಲಿ ಬ್ರಿಟನ್ ಸಂಪುಟ ಮುಂದುವರಿಕೆ
ಲಂಡನ್, ಜೂ.26: ನೂತನ ಪ್ರಧಾನಿ ಅಧಿಕಾರಕ್ಕೆ ಬರುವವರೆಗೆ ಬ್ರಿಟನ್‌ನ ಹಾಲಿ ಸಚಿವ ಸಂಪುಟ ಅಧಿಕಾರದಲ್ಲಿರುತ್ತದೆ ಎಂದು ವಿದೇಶ ಕಾರ್ಯದರ್ಶಿ ಫಿಲಿಪ್ ಹ್ಯಾಮಂಡ್ ಇಂದು ಹೇಳಿದ್ದಾರೆ.ೂತನ ಪ್ರಧಾನಿ ತನ್ನದೇ ಆದ ಸಚಿವ ಸಂಪುಟವನ್ನು ಆಯ್ಕೆ ಮಾಡುತ್ತಾರೆ ಹಾಗೂ ಅಲ್ಲಿಯವರೆಗೆ ನಾವು ಅಧಿಕಾರದಲ್ಲಿರುತ್ತೇವೆ. ಬಳಿಕ ನೂತನ ಪ್ರಧಾನಿ ತನ್ನ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ’’ ಎಂದು ಐಟಿವಿ ಟೆಲಿವಿಶನ್‌ಗೆ ಹ್ಯಾಮಂಡ್ ಹೇಳಿದರು.
ಹಣಕಾಸು ಸಚಿವ ಜಾರ್ಜ್ ಓಸ್‌ಬಾರ್ನ್ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
Next Story





