ಕರಾವಳಿ ಮೋದಿ ಭಕ್ತರಿಂದ ಸಾಮಾಜಿಕ ಜಾಲತಾಣ ದುರುಪಯೋಗ!

ಮಾನ್ಯರೆ,
ನಮ್ಮ ಕರಾವಳಿಯಲ್ಲಿರುವ ಮೋದಿ ಭಕ್ತ ಸಂಘಿ ಗುಂಪುಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಚ್ಚುಚ್ಚಾಗಿ ಏನೇನೋ ಸರ್ಕಸ್ ಮಾಡಿ ನಗೆಪಾಟಲಿಗೀಡಾಗುವುದು ಮಾತ್ರವಲ್ಲ ಜನರಲ್ಲಿ ಹೇಸಿಗೆ, ಆಕ್ರೋಶ ಹುಟ್ಟಿಸುತ್ತಿವೆ. ಕುಂದಾಪುರದ ತ್ರಾಸಿಯಲ್ಲಿ ಶಾಲಾ ವಾಹನ ಅಘಾತವಾಗಿ ಎಂಟು ಕ್ರೈಸ್ತ ಮಕ್ಕಳು ಬಲಿಯಾಗಿದ್ದಕ್ಕೆ ‘‘ಸಮಾಧಾನ’’ ವ್ಯಕ್ತ ಪಡಿಸಿ ಪ್ರಜ್ಞಾವಂತರಿಂದ ಛೀ ಥೂ ಅನ್ನಿಸಿಕೊಂಡ ಮೇಲೆ ಈ ಸಂಘಿಗಳು ತಾವು ರಕ್ತದಾನ ಮಾಡುತ್ತಿರುವ ಮೊರ್ಫಿಂಗ್ ಮಾಡಿದ ಫೋಟೊ ಫೇಸ್‌ಬುಕ್‌ನಲ್ಲಿ ಹಾಕಿ ಮೂರ್ಖತನ ತೋರಿಸಿದವು. ನಂತರ ಪ್ರಧಾನಿ ಮೋದಿಗೆ ಜಗತ್ತಿನ ಅತ್ಯುತ್ತಮ ಪ್ರಧಾನಿ ಎಂಬ ಪ್ರಶಸ್ತಿಯನ್ನು ಯುನೆಸ್ಕೊ ಕೊಟ್ಟಿದೆಯೆಂದು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿಯ ಸುಳ್ಳು ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ಪ್ರಚಾರ ಮಾಡಿ ಇಡೀ ಜಗತ್ತಿನಲ್ಲಿ ಭಾರತವನ್ನು ನಗೆಪಾಟಲಿಗೀಡು ಮಾಡಲಾಯಿತು. ಇದರಿಂದ ಸಂಘಿಗಳು ಬುದ್ಧಿ ಕಲಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ನಾಯಿಬಾಲ ಯಾವಾಗಲೂ ಡೊಂಕು.
ಈಗ ದಿಲ್ಲಿಯ ಆಪ್ ಪಕ್ಷದ ವಿಷಯದಲ್ಲಿ ತನ್ನ ತಿಕ್ಕಲುತನ ತೋರಿ ನಮ್ಮದೇ ಕರಾವಳಿಯ ಸಂಘಿಗಳು ಮತ್ತೆ ರೇಜಿಗೆ ಹುಟ್ಟಿಸಿದ್ದಾರೆ. 2013 ರಲ್ಲಿ ಆಪ್ ಪಕ್ಷ ದಿಲ್ಲಿಯ ಚುನಾವಣೆಯಲ್ಲಿ ಗೆದ್ದಾಗ ಸಂಭ್ರಮಾಚರಣೆ ಮಾಡಿರುವ ಫೋಟೊವನ್ನು ಈಗ ಸಂಘಿಗಳು ಬಳಸಿ ಅದಕ್ಕೆ ಕೊಟ್ಟ ಕ್ಯಾಪ್ಶನ್ ಏನೆಂದರೆ- ಭಾರತಕ್ಕೆ ಎನ್‌ಎಸ್‌ಜಿ ಸದಸ್ಯತ್ವ ಸಿಗದಿದ್ದುದಕ್ಕೆ ದಿಲ್ಲಿಯ ಆಪ್ ಪಕ್ಷದವರು ಸಂಭ್ರಮಾಚರಿಸಿ ತಮ್ಮ ದೇಶದ್ರೋಹಿ ಮುಖ ತೋರಿಸಿವೆ ಎಂಬುದಾಗಿ. ಇದನ್ನು ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿದವನ ಹೆಸರು ಜನಾರ್ದನ ಪೂಜಾರಿ (ವೇಣೂರು) ಎಂಬುದಾಗಿದೆ. ಅದಕ್ಕೆ ಪೂರಕ ಕಮೆಂಟ್ ವ್ಯಕ್ತ ಮಾಡಿದ ಮೂವರ ಹೆಸರು ವಿನೋದ್ ಶೆಟ್ಟಿ, ಹರೀಶ್ ಶೆಟ್ಟಿ ಮತ್ತು ನವಿನ್ ರಾಜ್ ಶೆಟ್ಟಿ. ಈ ಮೂವರೂ ಅತೀ ಕೆಟ್ಟ ಭಾಷೆಯಲ್ಲಿ ಬರೆದು, ಸಂಭ್ರಮ ಆಚರಿಸುತ್ತಿರುವ ಆಪ್ ಪಕ್ಷದ ಮಹಿಳಾ ಕಾರ್ಯಕರ್ತರನ್ನು ಭೀಕರ ರೇಪ್ ಮಾಡಿ ಸಮುದ್ರಕ್ಕೆ ಎಸೆಯಬೇಕು ಎಂದಿದ್ದಾರೆ. ಶೆಟ್ಟಿ-ಪೂಜಾರಿಯೆಂಬ ನಾಲ್ಕೂ ಹೆಸರು ನಕಲಿ ಹೆಸರುಗಳು ಎಂದು ಟ್ರೂಕಾಲರ್ ಮುಖಾಂತರ ಗೊತ್ತಾಗಿದೆ. ಈ ನಾಲ್ಕೂ ಜನರು ಯುವ ಬ್ರಿಗೇಡಿನ ಕೆಲವು ಕೊಂಕಣಿಗಳು ಎಂದು ಗೊತ್ತಾಗಿದೆ. ಬೇಕೆಂದೇ ಬೇರೆ ಯಾವ್ಯಾವುದೋ ಕೆಳಜಾತಿಯವರ ಹೆಸರು ಬಳಸಿ ಜನರಲ್ಲಿ ಆ ಕೆಳಜಾತಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮತ್ತು ದ್ವೇಷ ಹುಟ್ಟಿಸುವ ದುರುದ್ದೇಶ ಇದರ ಹಿಂದಿದೆ.





