ಭ್ರಷ್ಟಅಧಿಕಾರಿಗಳನ್ನುಯಾವ ಕಾರಣಕ್ಕೂಸಹಿಸುವುದಿಲ್ಲ: ಪಿಣರಾಯಿ ವಿಜಯನ್
ತಿರುವನಂತಪುರಂ, ಜೂ.26: ಲಂಚ ಕೇಳುವವರಿಗೆ ಮೊದಲು ಬುದ್ಧಿವಾದ ಹೇಳಬೇಕು. ಅದನ್ನು ಪುನರಾವರ್ತಿಸಿದರೆ ಅವರ ರಕ್ಷಣೆಗೆ ನಿಲ್ಲಬೇಡಿ. ಲಂಚ ಕೊಟ್ಟರೆ ಮಾತ್ರ ಕೆಲಸ ಎಂಬ ನೀತಿ ಬದಲಾಗಬೇಕು ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಎನ್‌ಜಿಒ ಯೂನಿಯನ್ ಸಂಘಟಿಸಿದ್ದ ತರಬೇತಿ ಕಮ್ಮಟದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.
ಭ್ರಷ್ಟಾಚಾರ ರಹಿತ ದಕ್ಷವಾದ ಸಿವಿಲ್ ಸರ್ವೀಸ್ ಎಂಬ ಘೋಷಣೆಗೆ ಕಾಲುಶತಮಾನ ಆಗಿದ್ದರೂ ಅದನ್ನು ಜಾರಿಗೆ ತರಲು ಸಾಧ್ಯವಾಗಿಲ್ಲ. ಸಾರ್ವಜನಿಕ ಸೇವೆಯಲ್ಲಿ ಪರಿವರ್ತನೆಯನ್ನು ತರುವುದು ಕೇವಲ ಅಧಿಕಾರಿಗಳಿಂದಮಾತ್ರ ಆಗುವ ಕೆಲಸವಾಗಿದೆ. ಆಡಳಿತ ರಂಗದಲ್ಲಿ ದೊಡ್ಡ ಮಟ್ಟದ ಪುನರ್‌ಕ್ರಮೀಕರಣ ನಡೆಯಬೇಕಾಗಿದೆ. ಹೊಸದಾದ ಕೇರಳ ಮಾದರಿ ಎಂಬುದಕ್ಕೆ ಇಂತಹದೊಂದು ಬದಲಾವಣೆ ಅಗತ್ಯವಾಗಿದೆ. ಇತರ ಸಂಘಟನೆಗಳ ಅಭಿಪ್ರಾಯವನ್ನು ಪಡೆದು ಈ ದಿಸೆಯಲ್ಲಿ ಹೆಜ್ಜೆಯಿಡಲಾಗುವುದು ಎಂದ ಪಿಣರಾಯಿ ವಿಜಯನ್, ಸರಕಾರದ ಸೇವೆಗಳು ವಿಳಂಬವಿಲ್ಲದೆ ಜನರಿಗೆ ತಲುಪಬೇಕು ಎಂದಿದ್ದಾರೆ.
Next Story





