Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸತ್ಯವನ್ನು ತಿರುಚುವ ಸಂಚು...

ಸತ್ಯವನ್ನು ತಿರುಚುವ ಸಂಚು...

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ

ರಾಮ್ ಪುನಿಯಾನಿರಾಮ್ ಪುನಿಯಾನಿ27 Jun 2016 12:15 AM IST
share
ಸತ್ಯವನ್ನು ತಿರುಚುವ ಸಂಚು...

ಈ ಭೀಕರ ಹತ್ಯಾಕಾಂಡದ ಸಂತ್ರಸ್ತರಿಗೆ ದೊರೆತ ಭಾಗಶಃ ನ್ಯಾಯವಾಗಿದೆ. ಆರೋಪಿಗಳ ಪೈಕಿ ಕೇವಲ 24 ಮಂದಿಯನ್ನಷ್ಟೇ ಶಿಕ್ಷಿಸಲಾಗಿದೆ. 11 ಮಂದಿಗೆ ಜೀವಾವಧಿ ಹಾಗೂ ಇತರರಿಗೆ ಸಣ್ಣ ಪ್ರಮಾಣದ ಶಿಕ್ಷೆಗಳನ್ನು ನೀಡಲಾಗಿದೆ. ಆದರೆ ಈ ಹತ್ಯಾಕಾಂಡದ ಹಿಂದಿರುವ ನೈಜ ಶಕ್ತಿಗಳನ್ನು ಮುಟ್ಟಲಾಗಿಲ್ಲ ಹಾಗೂ ಗುಲ್ಬರ್ಗ್ ಸೊಸೈಟಿ ಕಟ್ಟಡದ ನಿವಾಸಿ, ಮಾಜಿ ಸಂಸದ ಎಹ್ಸಾನ್ ಜಾಫ್ರಿ ಗುಂಡು ಹಾರಾಟ ನಡೆಸಿದ್ದೇ ಹಿಂಸೆ ಭುಗಿಲೇಳಲು ಕಾರಣವಾಯಿತು ಎಂಬ ಗುಜರಾತ್ ಪೊಲೀಸರ ವಾದವನ್ನು ನ್ಯಾಯಾಧೀಶರು ಒಪ್ಪಿಕೊಂಡರು.

ಕೋಮು ಹಿಂಸಾಚಾರವು ಭಾರತೀಯ ಸಮಾಜಕ್ಕೊಂದು ದೊಡ್ಡ ಶಾಪವಾಗಿದೆ. ಕೋಮುಗಲಭೆಗಳಲ್ಲಿ ಒಂದೆಡೆ ಅಮಾಯಕರು ಹತ್ಯೆಯಾದರೆ, ಇನ್ನೊಂದೆಡೆ ಗಲಭೆಯಲ್ಲಿ ಪಾತ್ರ ವಹಿಸಿದ್ದ ಬಹುತೇಕ ಅಪರಾಧಿಗಳು ಯಾವುದೇ ಶಿಕ್ಷೆಯಾಗದೆ ಪಾರಾಗುತ್ತಾರೆ. ಕೋಮುಗಲಭೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವವರ ಪ್ರಮಾಣ ಕೂಡಾ ತೀರಾ ಕಡಿಮೆಯಾಗಿರುತ್ತದೆ. ಒಂದು ವೇಳೆ ಶಿಕ್ಷೆಯಾದರೂ, ದೊಡ್ಡ ‘ಮೀನು’ಗಳನ್ನು ಸುಮ್ಮನೆ ಬಿಟ್ಟುಬಿಡಲಾಗುತ್ತದೆ ಹಾಗೂ ಸಣ್ಣ ‘ಮೀನು’ಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ. ಈ ಎಲ್ಲ ಅಭಿಪ್ರಾಯಗಳ ಹೊರತಾಗಿಯೂ, ‘‘ಮುಸ್ಲಿಮರೇ ಗಲಭೆಯನ್ನು ಆರಂಭಿಸುತ್ತಾರೆ ಹಾಗೂ ಆನಂತರ ಅವರೇ ಕೊಲ್ಲಲ್ಪಡುತ್ತಾರೆ’’ ಎಂಬ ಭಾವನೆ ನಮ್ಮ ನಡುವೆ ವ್ಯಾಪಕವಾಗಿ ಬೆಳೆದುಬಿಟ್ಟಿದೆ ಹಾಗೂ ಅದು ‘ಸಾಮಾನ್ಯ ಸಾಮಾಜಿಕ ಪ್ರಜ್ಞೆ’ಯ ಭಾಗವಾಗಿ ಬಿಟ್ಟಿದೆ.

     ಗುಲ್ಬರ್ಗ್ ಸೊಸೈಟಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ 2016ರ ಜೂನ್ 2ರಂದು ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪು, ಈ ಭೀಕರ ಹತ್ಯಾಕಾಂಡದ ಸಂತ್ರಸ್ತರಿಗೆ ದೊರೆತ ಭಾಗಶಃ ನ್ಯಾಯವಾಗಿದೆ. ಆರೋಪಿಗಳ ಪೈಕಿ ಕೇವಲ 24 ಮಂದಿಯನ್ನಷ್ಟೇ ಶಿಕ್ಷಿಸಲಾಗಿದೆ. 11 ಮಂದಿಗೆ ಜೀವಾವಧಿ ಹಾಗೂ ಇತರರಿಗೆ ಸಣ್ಣ ಪ್ರಮಾಣದ ಶಿಕ್ಷೆಗಳನ್ನು ನೀಡಲಾಗಿದೆ. ಆದರೆ ಈ ಹತ್ಯಾಕಾಂಡದ ಹಿಂದಿರುವ ನೈಜ ಶಕ್ತಿಗಳನ್ನು ಮುಟ್ಟಲಾಗಿಲ್ಲ ಹಾಗೂ ಗುಲ್ಬರ್ಗ್ ಸೊಸೈಟಿ ಕಟ್ಟಡದ ನಿವಾಸಿ, ಮಾಜಿ ಸಂಸದ ಎಹ್ಸಾನ್ ಜಾಫ್ರಿ ಗುಂಡು ಹಾರಾಟ ನಡೆಸಿದ್ದೇ ಹಿಂಸೆ ಭುಗಿಲೇಳಲು ಕಾರಣವಾಯಿತು ಎಂಬ ಗುಜರಾತ್ ಪೊಲೀಸರ ವಾದವನ್ನು ನ್ಯಾಯಾಧೀಶರು ಒಪ್ಪಿಕೊಂಡರು. ಗೋಧ್ರಾ ರೈಲು ದಹನ ಘಟನೆ ಸಂಭವಿಸಿದ ಮಾರನೆ ದಿನವಾದ 2002ರ ಫೆಬ್ರವರಿ 28ರಂದು ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿ ವಸತಿ ಕಟ್ಟಡದ ಮೇಲೆ ದಾಳಿಯಾಗಿ ಅಲ್ಲಿನ ನಿವಾಸಿಗಳ ಭೀಕರ ನರಮೇಧ ನಡೆದು ಹೋಯಿತು. ಅಂದು ಬೆಳಗ್ಗಿನಿಂದಲೇ ಶಸ್ತ್ರಸಜ್ಜಿತವಾದ ಗುಂಪುಗಳು ಗುಲ್ಬರ್ಗ್ ಸೊಸೈಟಿಯ ಸುತ್ತಲೂ ಜಮಾಯಿಸಲು ಆರಂಭಿಸಿದ್ದವು. ಮಾಜಿ ಸಂಸತ್ ಸದಸ್ಯ ಎಹ್ಸಾನ್ ಜಾಫ್ರಿ ಕೂಡಾ ಈ ಅಪಾರ್ಟ್‌ಮೆಂಟ್‌ನಲ್ಲಿಯೇ ವಾಸವಾಗಿದ್ದರು. ಈ ಉದ್ರಿಕ್ತ ಗುಂಪುಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದವು.

ಗೋಧ್ರಾ ರೈಲು ದಹನ ಘಟನೆಗೆ ಪ್ರತಿಕ್ರಿಯೆಯಾಗಿ ದಿಢೀರನೆ ವ್ಯಕ್ತವಾದ ಆಕ್ರೋಶ ಇದೆಂಬ ರೀತಿಯಲ್ಲಿ ಇಡೀ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಘಟನೆಯನ್ನು ಬಿಂಬಿಸಲಾಗಿತ್ತು. ಜಾಫ್ರಿ ತಮ್ಮ ಮೇಲೆ ಗುಂಡು ಹಾರಿಸಿದ್ದರಿಂದಾಗಿ, ಗುಂಪು ರೊಚ್ಚಿಗೆದ್ದಿತೆಂಬ ಸಿದ್ಧಾಂತವನ್ನು ಪ್ರಾಸಿಕ್ಯೂಶನ್ ಮಂಡಿಸಿತು. ಇಲ್ಲಿ ಉದ್ಭವವಾಗುವ ಪ್ರಶ್ನೆಯೇನೆಂದರೆ, ಅಷ್ಟೊಂದು ದೊಡ್ಡ ಸಂಖ್ಯೆಯ ಗುಂಪು ಮೊದಲೇ ಯಾಕೆ ಅಲ್ಲಿ ಜಮಾಯಿಸಿತೆಂಬುದು. ಅಷ್ಟೊಂದು ದೊಡ್ಡ ಗುಂಪಿನಿಂದ ಸುತ್ತುವರಿಯಲ್ಪಟ್ಟ ಜನರಿಗೆ ಶಾಂತಿ ಹಾಗೂ ಸುರಕ್ಷತೆಯ ಭಾವನೆ ಬರಲು ಸಾಧ್ಯವೇ?. ಜಾಫ್ರಿಯವರ ಗುಂಡೆಸೆತವು ಗುಲ್ಬರ್ಗ್ ಸೊಸೈಟಿಯಲ್ಲಿ ನರಮೇಧ ನಡೆಯಲು ಪ್ರಚೋದನೆ ನೀಡಿತೆಂಬ ವಾದವನ್ನು ನ್ಯಾಯಾಲಯವು ಪುರಸ್ಕರಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರ ಪುತ್ರ ತನ್ವೀರ್, ಈ ತೀರ್ಪು ತನ್ನ ತಂದೆಯ ಬದುಕು ಹಾಗೂ ಸಾಧನೆಗೆ ಮಾಡಿದ ಅಪಮಾನವೆಂದು ಹೇಳಿದ್ದಾರೆ. ‘‘ಗುಲ್ಬರ್ಗ್ ಸೊಸೈಟಿಯಲ್ಲಿ ನರಮೇಧ ನಡೆದಾಗ ಅಲ್ಲಿದ್ದ 24 ಮಂದಿ ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದರು?. ಸುಮ್ಮನೆ ಪ್ರದರ್ಶನವನ್ನು ನೋಡುತ್ತಾ ಕೂತಿದ್ದರೇ?. ಈ ತೀರ್ಪು ಹಿಂಸೆ ನಿರ್ಮಾಣಗೊಂಡ ಬಗೆಯನ್ನು ಕಡೆಗಣಿಸಿದೆ ಮಾತ್ರವಲ್ಲ, ತನಗೆ ಸರಿಯೆಂದು ತೋಚಿದ ಕೆಲವು ಪುರಾವೆಗಳನ್ನೇ ಅವಲಂಬಿಸಿರುವ ಹಾಗೆ ಕಾಣುತ್ತದೆ.’’ ಎನ್ನುತ್ತಾರವರು.
     ಸಂತ್ರಸ್ತರನ್ನೇ ದೂಷಿಸುವಂತಹ ರೀತಿಯಲ್ಲಿ ಗುಲ್ಬರ್ಗ್ ಸೊಸೈಟಿ ಹಿಂಸಾಚಾರದ ಘಟನೆಗಳನ್ನು ನ್ಯಾಯಾಲಯದ ಮುಂದೆ ನಿರೂಪಿಸಲಾಗಿತ್ತು. ‘ಸಂತ್ರಸ್ತನೇ ದೋಷಿ’ ಎಂಬಂತೆ ವಾದ ಮಂಡಿಸಲಾಗಿತ್ತು. ಗಲಭೆಯ ಕಾರಣಗಳ ಬಗ್ಗೆ ಕೋಮುವಾದಿ ಶಕ್ತಿಗಳು ತುಂಬಾ ಚೆನ್ನಾಗಿ ಕತೆಕಟ್ಟಿದ್ದವು. ಗೋಧ್ರಾ ರೈಲು ದಹನ ಘಟನೆಯ ನೆಪದಲ್ಲಿ ಇಡೀ ಗುಜರಾತ್‌ನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಿಂಸಾಚಾರವನ್ನು ಆಯೋಜಿಸಲಾಗಿತ್ತು. ಆದರೆ ಗಲಭೆಗೆ ನೈಜ ಕಾರಣವೇನೆಂಬುದು ಮಾತ್ರ ಚರ್ಚೆಗೆ ಗ್ರಾಸವಾದ ವಿಷಯವಾಗಿದೆ.

ಗೋಧ್ರಾದಲ್ಲಿ ಕೆಲವು ಮುಸ್ಲಿಮರು ರೈಲಿಗೆ ಹೊರಗಿನಿಂದ ಬೆಂಕಿಕೊಟ್ಟರೆಂಬ ವಾದದಲ್ಲಿ ಯಾವುದೇ ಹುರುಳಿಲ್ಲ. ಯಾಕೆಂದರೆ ರೈಲಿನೊಳಗೆಯೇ ಬೆಂಕಿ ಹುಟ್ಟಿಕೊಂಡಿತ್ತೆಂಬುದು ಈಗಾಗಲೇ ಸಾಬೀತಾಗಿದೆ. ಆದರೆ ಈ ಸತ್ಯಾಂಶವು ಹೊರಬರುವುದರೊಳಗೆ, ಅಲ್ಪಸಂಖ್ಯಾತರು ನಡೆಸಿದ ಆಕ್ರಮಣವಿದು ಎಂಬಂತೆ ಜನರನ್ನು ನಂಬಿಸಲಾಯಿತು ಹಾಗೂ ಅವರ ವಿರುದ್ಧ ಹಿಂಸಾಚಾರಕ್ಕೆ ಜನರನ್ನು ಸಂಘಟಿಸಲಾಯಿತು. ಕೋಮುಹಿಂಸಾಚಾರದ ತಂತ್ರಗಾರಿಕೆಯ ಕುರಿತಾದ ಅಧ್ಯಯನ ವರದಿಯೊಂದರಲ್ಲಿ ಉತ್ತರಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ವಿ.ಎನ್.ರಾಯ್ ಹೀಗೆ ಹೇಳುತ್ತಾರೆ. ‘‘ಬಾಹ್ಯ ಟೀಕೆಗಳ ವಿರುದ್ಧ ಗಲಭೆಕೋರರನ್ನು ಸಂರಕ್ಷಿಸಲು ಹಾಗೂ ಅವರ ಚಾರಿತ್ರವನ್ನು ರಕ್ಷಿಸಲು, ಹಿಂಸಾಚಾರವು ಮುಸ್ಲಿಮರಿಂದಲೇ ಆರಂಭಗೊಂಡಿತೆಂಬುದಾಗಿ ಬಿಂಬಿಸಲಾಗುತ್ತಿದೆ. ಬಲಾಢ್ಯನೊಬ್ಬನು ದುರ್ಬಲನನ್ನು ದೂಡಿದಾಗ, ಆತ ಅನಿವಾರ್ಯವಾಗಿ ಕೈಎತ್ತಲೇಬೇಕಾಗುತ್ತದೆ. ಅದನ್ನೇ ಆಕ್ರಮಣ ಎಂಬಂತೆ ಬಿಂಬಿಸಲಾಗುತ್ತದೆ ಹಾಗೂ ಅದಕ್ಕೆ ತಕ್ಕ ಶಿಕ್ಷೆಯನ್ನು ನೀಡಬೇಕೆಂಬ ಭಾವನೆಯನ್ನು ಬಿತ್ತಲಾಗುತ್ತದೆ. ಸಾಕಷ್ಟು ಗದ್ದಲ ಹಾಗೂ ಪ್ರಚಾರದ ಬಳಿಕ ಈ ‘ಶಿಕ್ಷೆ’ಯನ್ನು ನೀಡಲಾಗುತ್ತದೆ.’’.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡವು ಪೂರ್ವ ನಿಯೋಜಿತ ಸಂಚಾಗಿತ್ತೆಂಬ ಸಿದ್ಧಾಂತವನ್ನು ನ್ಯಾಯಾಲಯ ತಿರಸ್ಕರಿಸಿದೆ. ಉದ್ರಿಕ್ತರ ಗುಂಪೊಂದು ಹಠಾತ್ತನೆ ನಡೆಸಿದ ಕೃತ್ಯವೆಂಬ ವಾದವನ್ನು ಅದು ಪುರಸ್ಕರಿಸಿದೆ. ಹಾಗಾದರೆ ಸಹಾಯ ಯಾಚಿಸಿ ಪೊಲೀಸರಿಗೆ ಹಾಗೂ ಮುಖ್ಯಮಂತ್ರಿಗೆ ಎಹ್ಸಾನ್ ಜಾಫ್ರಿ ಮಾಡಿರುವ ಕರೆಗಳ ದಾಖಲೆಗಳ ಬಗ್ಗೆ ಏನೆಂದು ವಿವರಣೆ ನೀಡಬಹುದು?. ರಕ್ಷಣೆಗಾಗಿ ಎಹ್ಸಾನ್ ಜಾಫ್ರಿ ಹತಾಶೆಯಿಂದ ಮಾಡಿದ ಕರೆಗಳಿಗೆ ಪೊಲೀಸರು ಪ್ರತಿಕ್ರಿಯಿಸದೆ ಇದ್ದುದರ ಬಗ್ಗೆ ಏನೆಂದು ಹೇಳಬೇಕು?. ಪೊಲೀಸ್ ಪಡೆಗಳು ಧಾವಿಸಿ ಬಂದು ಅಮಾಯಕರನ್ನು ರಕ್ಷಿಸಲು ಅವಕಾಶಗಳಿದ್ದರೂ, ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆಯು ನಿಷ್ಕ್ರಿಯವಾಗಿದ್ದುದು ಯಾಕೆ?. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ಶಾ ಹಾಗೂ ಗುಜರಾತ್ ಸರಕಾರದ ಉನ್ನತ ಅಧಿಕಾರಿಗಳವರೆಗೆ ಕಟ್ಟಡದ ನಿವಾಸಿಗಳ ಜೀವವನ್ನು ರಕ್ಷಿಸಬೇಕಾದ ಹೊಣೆಗಾರಿಕೆಯಿರುವವರು ಕರ್ತವ್ಯಲೋಪವೆಸಗಿದ್ದಾರೆ. ಇಡೀ ಆಡಳಿತ ವ್ಯವಸ್ಥೆ ಈ ಅಮಾಯಕ ನಾಗರಿಕರನ್ನು ಸಂಪೂರ್ಣವಾಗಿ ಕೈಬಿಟ್ಟಿತ್ತು.

 ಆದಾಗ್ಯೂ ಗುಲ್ಬರ್ಗ್ ಸೊಸೈಟಿಗೆ ಪರ್ಯಾಯವಾಗಿರುವ ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದಲ್ಲಿ ನ್ಯಾಯಾಧೀಶರು ಒಳಸಂಚಿನ ಸಿದ್ಧಾಂತವನ್ನು ಎತ್ತಿಹಿಡಿದಿದ್ದರು ಹಾಗೂ ಈ ಪ್ರಕರಣದ ಮುಖ್ಯ ಆರೋಪಿಗಳಾದ ಬಿಜೆಪಿಯ ಮಾಯಾಬೆನ್ ಕೊಡ್ನಾನಿ ಹಾಗೂ ಸಂಘಪರಿವಾರದ ಕಾರ್ಯಕರ್ತ ಬಾಬು ಬಜರಂಗಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ‘‘ಇದೊಂದು ಪೂರ್ವಯೋಜಿತ ಸಂಚಾಗಿದೆ ಹಾಗೂ ಗೋಧ್ರಾ ರೈಲು ದಹನ ಘಟನೆಗೆ ಆಗಿರುವ ಪ್ರತಿಕ್ರಿಯೆ ಇದಾಗಿದೆಯೆಂದು ಹೇಳುವ ಮೂಲಕ ಪ್ರಕರಣವನ್ನು ಕೀಳಂದಾಜಿಸಲು ಸಾಧ್ಯವಿಲ್ಲ’’ (ದಿ. ವೈರ್, 2016) ಎಂದು ಮುಖ್ಯ ನ್ಯಾಯಾಧೀಶ ಯಾಗ್ನಿಕ್ ತೀರ್ಪು ನೀಡಿದ ಸಂದರ್ಭದಲ್ಲಿ ಅಭಿಪ್ರಾಯಿಸಿದ್ದರು. ತೀರ್ಪು ಘೋಷಣೆಗೆ ಮುನ್ನ ಈ ಮೇಧಾವಿ ನ್ಯಾಯಾಧೀಶರು ವಿವಿಧ ರೀತಿಯ ಬೆದರಿಕೆಗಳನ್ನು ಸಹ ಎದುರಿಸಿದ್ದರು. ಗುಲ್ಬರ್ಗ್ ಸೊಸೈಟಿ ಹಾಗೂ ನರೋಡಾ ಪಾಟಿಯಾ, ಈ ಎರಡೂ ಪ್ರಕರಣಗಳ ಕ್ರಿಯಾತ್ಮಕತೆಯೂ ಒಂದೇ ರೀತಿಯದ್ದಾಗಿರುವಾಗ, ಗುಲ್ಬರ್ಗ್ ಸೊಸೈಟಿ ಪ್ರಕರಣದಲ್ಲಿ ಪೂರ್ವಯೋಜಿತ ಸಂಚಿನ ಸಿದ್ಧಾಂತವನ್ನು ಯಾಕೆ ತಿರಸ್ಕರಿಸಲಾಯಿತೆಂಬ ಪ್ರಶ್ನೆ ಉದ್ಭವಿಸುತ್ತದೆ.

  ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ತೀರ್ಪು, ಸಾರ್ವತ್ರಿಕವಾಗಿ ನಮ್ಮ ನ್ಯಾಯದಾನ ವ್ಯವಸ್ಥೆ ಹಾಗೂ ನಿರ್ದಿಷ್ಟವಾಗಿ ಕೋಮುಹಿಂಸಾಚಾರಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಗಮನಸೆಳೆಯುತ್ತದೆ. ಗಲಭೆ ತಡೆ ಹಾಗೂ ನಿಯಂತ್ರಣ ಮತ್ತು ನ್ಯಾಯದಾನದಂತಹ ವಿಷಯಗಳಲ್ಲಿ ಆಡಳಿತವು ಲೋಪವೆಸಗಿದೆ. 1984ರ ಸಿಖ್ಖ್ ವಿರೋಧಿ ಗಲಭೆ, ಬಾಬರಿ ಮಸೀದಿ ಧ್ವಂಸ ಆನಂತರದ ಗಲಭೆಯಂತಹ ಪ್ರಕರಣಗಳಲ್ಲಿ ಗಮನಕ್ಕೆ ಬಂದಿರುವ ಹಾಗೆ ಸಾಮೂಹಿಕ ಹಿಂಸಾಚಾರದ ಪ್ರಕರಣಗಳಲ್ಲಿ ಶಿಕ್ಷೆಯಾಗುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆೆ. ಆದರೆ ಗುಜರಾತ್ ಗಲಭೆ ಪ್ರಕರಣಗಳ ತೀರ್ಪುಗಳನ್ನು ಗಮನಿಸಿದಾಗ ಪರಿಸ್ಥಿತಿ ತುಸು ಸುಧಾರಿಸಿರುವುದು ಅರಿವಾಗುತ್ತದೆ. ಮಾನವಹಕ್ಕುಗಳ ಸಂಘಟನೆಗಳು, ಹಲವು ನ್ಯಾಯಾಧೀಶರು ಹಾಗೂ ವಿವಿಧ ನಾಗರಿಕ ಸಮುದಾಯ ಸಂಘಟನೆಳು ಅದರಲ್ಲೂ ವಿಶೇಷವಾಗಿ ತೀಸ್ತಾ ಸೆಟಲ್ವಾಡ್ ಅವರ ಎನ್‌ಜಿಒ ಈ ಪ್ರಕರಣಗಳ ಬಗ್ಗೆ ನಡೆಸಿದ ನಿರಂತರ ಹೋರಾಟದಿಂದಾಗಿ, ಸಂತ್ರಸ್ತರಿಗೆ ನ್ಯಾಯವು ಭಾಗಶಃವಾಗಿಯಾದರೂ ದೊರೆತಿದೆ. ಗುಜರಾತ್‌ನಲ್ಲಿನ ನ್ಯಾಯಸಮ್ಮತ ವ್ಯವಸ್ಥೆಯೇ ಇದಕ್ಕೆ ಕಾರಣವೆಂದು ಹಲವು ಶಕ್ತಿಗಳು ಹೇಳಿಕೊಳ್ಳುತ್ತಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಗುಜರಾತ್‌ನಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿರುವ ಸಾಮಾಜಿಕ ಹಾಗೂ ಸಾಂಸ್ಥಿಕ ಮಟ್ಟದ ಪಕ್ಷಪಾತ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಪಕ್ಷಪಾತಗಳ ಹೊರತಾಗಿಯೂ ನ್ಯಾಯವನ್ನು ಪಡೆಯಲು ಸಾಧ್ಯವಾಗಿದೆಯೆಂಬುದು ಗಮನಾರ್ಹ.

ಗುಲ್ಬರ್ಗ್ ಸೊಸೈಟಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡಲು, ಎಹ್ಸಾನ್ ಜಾಫ್ರಿ ಅವರ ವಿಧವೆ ಪತ್ನಿಯ ದೃಢಸಂಕಲ್ಪವು ನಿಜಕ್ಕೂ ಅಸಾಧಾರಣವಾದುದು. ಇದೇ ಗುಲ್ಬರ್ಗ್ ಸೊಸೈಟಿ ಹಿಂಸಾಚಾರದಲ್ಲಿ ರೂಪಾ ಮೋದಿ ಎಂಬಾಕೆ ತನ್ನ ಪುತ್ರನನ್ನು ಕಳೆದುಕೊಂಡಿದ್ದಾರೆ. 

ನಾಪತ್ತೆಯಾಗಿರುವ ಆತನನ್ನು ಪತ್ತೆಹಚ್ಚಲು ಆಕೆ ಅವಿರತ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಈ ದುರಂತ ಘಟನೆಯನ್ನು ಆಧರಿಸಿ, ನಿರ್ಮಿಸಲಾದ ಪರ್ಝಾನಿಯಾ ಚಿತ್ರವು, ಈ ವಸತಿ ಪ್ರದೇಶದಲ್ಲಿ ನಡೆದ ಬೀಭತ್ಸ ದುರಂತದ ಬಗ್ಗೆ ಬೆಳಕು ಚೆಲ್ಲಿದೆ.

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತರ ಮೇಲ್ಮನವಿಯನ್ನು ಕೈಗೆತ್ತಿಕೊಳ್ಳಲಿರುವ ಉನ್ನತ ನ್ಯಾಯಾಲಯಗಳು, ಈ ಭೀಕರ ಹಿಂಸಾಚಾರದ ಬಲಿಪಶುಗಳಿಗೆ ಸಂಪೂರ್ಣ ನ್ಯಾಯ ದೊರಕಿಸಿಕೊಡುತ್ತವೆಂದು ಆಶಿಸೋಣ.

share
ರಾಮ್ ಪುನಿಯಾನಿ
ರಾಮ್ ಪುನಿಯಾನಿ
Next Story
X