Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬೆಟ್ಟಗಾತ್ರದ ವಿವಾದ ಸೃಷ್ಟಿಸಿದ ಪುಟ್ಟ ...

ಬೆಟ್ಟಗಾತ್ರದ ವಿವಾದ ಸೃಷ್ಟಿಸಿದ ಪುಟ್ಟ ಕುಲಾಂತರಿ ಸಾಸಿವೆ!

ವಾರ್ತಾಭಾರತಿವಾರ್ತಾಭಾರತಿ27 Jun 2016 12:20 AM IST
share
ಬೆಟ್ಟಗಾತ್ರದ ವಿವಾದ ಸೃಷ್ಟಿಸಿದ ಪುಟ್ಟ  ಕುಲಾಂತರಿ ಸಾಸಿವೆ!

ಈ ಹೈಬ್ರಿಡ್ ತಳಿ ಸಾಮಾನ್ಯ ತಳಿಗಿಂತ ಶೇಕಡಾ 25ರಿಂದ 30ರಷ್ಟು ಅಧಿಕ ಇಳುವರಿ ನೀಡುತ್ತದೆ ಎನ್ನುವುದು ಇದರ ಪರವಾಗಿರುವವರ ವಾದ. ಆರು ವರ್ಷಗಳ ಹಿಂದೆ ಬಿಟಿ ಬದನೆ ಬೆಳೆಯುವ ಪ್ರಸ್ತಾವವನ್ನು ಹಿಂದಿನ ಯುಪಿಎ ಸರಕಾರ ಶೈತ್ಯಾಗಾರಕ್ಕೆ ತಳ್ಳಿದ ಬಳಿಕ, ಕುಲಾಂತರಿ ಆಹಾರಧಾನ್ಯವನ್ನು ವಾಣಿಜ್ಯವಾಗಿ ಬೆಳೆಯಲು ಅನುಮತಿ ನೀಡುವ ಸಂಬಂಧ ಸರಕಾರಿ ಹಂತದಲ್ಲಿ ಪರಿಶೀಲನೆ ನಡೆಯುತ್ತಿರುವುದು ಇದೇ ಮೊದಲು.

ದೇಶದ ಕೇಂದ್ರೀಯ ತಳಿಶಾಸ್ತ್ರ ಇಂಜಿನಿಯರಿಂಗ್ ನಿಯಂತ್ರಣ ಸಂಸ್ಥೆ, ದೇಶದಲ್ಲಿ ಮೊಟ್ಟಮೊದಲ ಕುಲಾಂತರಿ ಆಹಾರಧಾನ್ಯ ಬೆಳೆಯಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸುತ್ತಿದ್ದರೆ, ಈ ಕುಲಾಂತರಿ ಸಾಸಿವೆ ಅಡುಗೆಮನೆ ಪ್ರವೇಶಿಸುವ ಬಗ್ಗೆ ರೈತಾಪಿ ವರ್ಗ ಹಾಗೂ ಸ್ವಯಂಸೇವಾ ಸಂಸ್ಥೆಗಳು ವಿಭಿನ್ನ ನಿಲುವು ಹೊಂದಿವೆ.

ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿ (ಜಿಇಎಸಿ) ಸೋಮವಾರ ದಿಲ್ಲಿಯಲ್ಲಿ ಸಭೆ ಸೇರಿ, ರೈತರು ದೇಶೀಯವಾಗಿ ಅಭಿವೃದ್ಧಿಪಡಿಸಿದ ಕುಲಾಂತರಿ ಸಾಸಿವೆ ಬೆಳೆಯಲು ಅವಕಾಶ ನೀಡಬಹುದೇ ಎಂಬ ಬಗ್ಗೆ ಚರ್ಚೆ ನಡೆಸಿದೆ. ಈ ಹೈಬ್ರಿಡ್ ತಳಿ ಸಾಮಾನ್ಯ ತಳಿಗಿಂತ ಶೇಕಡಾ 25ರಿಂದ 30ರಷ್ಟು ಅಧಿಕ ಇಳುವರಿ ನೀಡುತ್ತದೆ ಎನ್ನುವುದು ಇದರ ಪರವಾಗಿರುವವರ ವಾದ. ಆರು ವರ್ಷಗಳ ಹಿಂದೆ ಬಿಟಿ ಬದನೆ ಬೆಳೆಯುವ ಪ್ರಸ್ತಾವವನ್ನು ಹಿಂದಿನ ಯುಪಿಎ ಸರಕಾರ ಶೈತ್ಯಾಗಾರಕ್ಕೆ ತಳ್ಳಿದ ಬಳಿಕ, ಕುಲಾಂತರಿ ಆಹಾರಧಾನ್ಯವನ್ನು ವಾಣಿಜ್ಯವಾಗಿ ಬೆಳೆಯಲು ಅನುಮತಿ ನೀಡುವ ಸಂಬಂಧ ಸರಕಾರಿ ಹಂತದಲ್ಲಿ ಪರಿಶೀಲನೆ ನಡೆಯುತ್ತಿರುವುದು ಇದೇ ಮೊದಲು.

ಹೆಚ್ಚಿನ ಇಳುವರಿ ಸಾಧಿಸಲು, ಬಿಸಿ ಅಥವಾ ಬರ ಪರಿಸ್ಥಿತಿಯನ್ನು ತಡೆದುಕೊಳ್ಳಲು, ಉತ್ತಮ ಔಷಧೀಯ ಗುಣಗಳನ್ನು ರೂಢಿಸಿಕೊಳ್ಳಲು ಹಾಗೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದುವ ಸಲುವಾಗಿ ವಂಶವಾಹಿಗಳನ್ನು ಕೃತಕವಾಗಿ ವಿವಿಧ ಗಿಡಗಳಿಗೆ ಸೇರಿಸಿ, ಅವುಗಳಿಂದ ಉತ್ಪಾದಿಸಲಾದ ಬೀಜಗಳನ್ನು ಈ ಕುಲಾಂತರಿ ಬೆಳೆಯಲ್ಲಿ ಬಳಸಲಾಗುತ್ತದೆ.

ನಿರ್ಧಾರ ಇಲ್ಲ

ವಾಣಿಜ್ಯ ಉದ್ದೇಶದಿಂದ ಕುಲಾಂತರಿ ಸಾಸಿವೆ ಬೆಳೆಯಲು ಅನುಮತಿ ನೀಡುವ ಸಂಬಂಧ ಜಿಇಎಸಿ ಸೋಮವಾರ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ ಎಂದು ಪರಿಸರ ಹಾಗೂ ಅರಣ್ಯ ಇಲಾಖೆಯ ವಕ್ತಾರರು ಹೇಳಿದ್ದಾರೆ. ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾದ ಈ ತಜ್ಞರ ಸಮಿತಿ ಅಪಾಯ ಸಾಧ್ಯತೆಗಳನ್ನು ಇನ್ನಷ್ಟು ವಿಸ್ತೃತವಾಗಿ ಪರಿಶೀಲಿಸುವ ಸಾಧ್ಯತೆ ಇದೆ.

ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯ ಹಿಂದಿನ ಸಭೆಯ ಬಳಿಕ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರು ನೀಡಿದ ಆಶ್ವಾಸನೆಗೆ ಅನುಗುಣವಾಗಿ, ಕುಲಾಂತರಿ ಆಹಾರ ಧಾನ್ಯಗಳ ಬಗೆಗಿನ ಚರ್ಚೆಯಲ್ಲಿ ಸಾರ್ವಜನಿಕರ ಧ್ವನಿಗಳನ್ನೂ ಆಲಿಸಲು ನಿರ್ಧರಿಸಲಾಗಿದೆ. ಇಂಥ ಆಹಾರಧಾನ್ಯಗಳ ಬಗ್ಗೆ ಪರ ಹಾಗೂ ವಿರೋಧ ಅಭಿಪ್ರಾಯಗಳನ್ನು ಸಮಿತಿ, ರೈತರು ಹಾಗೂ ಸ್ವಯಂಸೇವಾ ಸಂಸ್ಥೆಗಳಿಂದ ಆಹ್ವಾನಿಸಿತ್ತು. ಸೋಮವಾರದ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ನೀಡಿತ್ತು.

ಸಾಮಾಜಿಕ ಹೋರಾಟಗಾರರು, ವಿಜ್ಞಾನಿಗಳು ಹಾಗೂ ರೈತ ಸಂಘಟನೆಗಳು ಕುಲಾಂತರಿ ಮುಕ್ತ ಭಾರತಕ್ಕಾಗಿ ಮೈತ್ರಿಕೂಟ ಎಂಬ ವಿಸ್ತೃತ ಕೂಟ ರಚಿಸಿಕೊಂಡಿವೆ. ಕುಲಾಂತರಿ ಆಹಾರಧಾನ್ಯಗಳ ಜೈವಿಕ ಸುರಕ್ಷತೆ ಹಾಗೂ ಅಧಿಕ ಇಳುವರಿಯನ್ನು ಬಿಂಬಿಸುವ ಸಲುವಾಗಿ, ಅಂಕಿ ಅಂಶಗಳನ್ನು ತಿರುಚಲಾಗಿದೆ ಎಂದು ಕುಲಾಂತರಿ ವಿರೋಧಿಗಳು ಆಪಾದಿಸಿದರು. ಆದಾಗ್ಯೂ ಈ ಏಳು ಮಂದಿಯ ನಿಯೋಗಕ್ಕೆ ತಮ್ಮ ವಾದ ಮಂಡಿಸಲು ಕೇವಲ ಅರ್ಧ ಗಂಟೆ ಕಾಲಾವಕಾಶ ನೀಡಲಾಯಿತು. ಇದನ್ನು ಪ್ರತಿಭಟಿಸಿ, ಜಿಇಎಸಿ ಸಭೆೆಯಿಂದ ಹೊರನಡೆದ ಕುಲಾಂತರಿ ವಿರೋಧಿ ಹೋರಾಟಗಾರರು, ತಮ್ಮ ಆಕ್ಷೇಪಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡರು.

ಇದು ವೈಜ್ಞಾನಿಕ ವಂಚನೆ ಎಂದು ಕೃಷಿ ವಿಜ್ಞಾನ ಅಕಾಡಮಿಯ ಸದಸ್ಯ ಹಾಗೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಶರದ್ ಪವಾರ್ ಆಕ್ಷೇಪಿಸಿದರು. ಡಿಎಂಎಚ್-11 ಎಂಬ ಕುಲಾಂತರಿ ಸಾಸಿವೆ ತಳಿಯನ್ನು ಸೃಷ್ಟಿಸಿದ ದಿಲ್ಲಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು, ತಮ್ಮ ಪ್ರಯೋಗದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಇದರ ಜತೆಗೆ ಹೋಲಿಕೆಗೆ ಮೂಲ ತಳಿಯಾಗಿ ಅಪ್ರಸ್ತುತವಾದ ಹಳೆಯ ತಳಿಗಳನ್ನು ಹೆಸರಿಸಿದ್ದಾರೆ. ಈ ಮೂಲಕ ಶೇ. 7.5ರಷ್ಟು ಅಧಿಕ ಇಳುವರಿ ಬರುತ್ತದೆ ಎಂಬ ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಕುಲಾಂತರಿ ಬೆಳೆಯ ವೈಫಲ್ಯ ಸಾಧ್ಯತೆ ಶೇಕಡ 25ರಷ್ಟು ಇರುವುದನ್ನು ವಿಜ್ಞಾನಿಗಳು ಮುಚ್ಚಿಟ್ಟಿದ್ದಾರೆ ಎಂದು ಖ್ಯಾತ ಪರಿಸರವಾದಿ, ದೇವಲ್‌ದೇವ್ ಅವರು ಪ್ರತಿಪಾದಿಸಿದರು. ಇಲ್ಲಿ ಕೇವಲ ಪಾರದರ್ಶಕತೆಯ ಕೊರತೆ ಹಾಗೂ ಅಂಕಿ ಅಂಶಗಳನ್ನು ತಿರುಚಿರುವುದು ಮಾತ್ರವಲ್ಲದೇ, ಅವರ ತಂತ್ರಜ್ಞಾನವೇ ಕುಸಿದಿದೆ ಎಂದು ಅವರು ಹೇಳಿದರು.

ಈ ಗುಂಪಿನಲ್ಲಿದ್ದ ರೈತರ ಪ್ರತಿಪಾದನೆಯಂತೆ, ಈ ಕುಲಾಂತರಿ ಸಾಸಿವೆಯಿಂದ ಬೀಜೋತ್ಪಾದನಾ ಕಂಪೆನಿಗಳಿಗೆ ಮತ್ತು ರಾಸಾಯನಿಕಗಳ ಉತ್ಪಾದಕರಿಗಷ್ಟೇ ಲಾಭವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಇದನ್ನು ಬೆಳೆಯುವ ರೈತಸಮೂಹ ಸಂಕಷ್ಟಕ್ಕೆ ಒಳಗಾಗುತ್ತದೆ. ಇಷ್ಟಾಗಿಯೂ ಈ ಕುರಿತ ಚರ್ಚೆಯಲ್ಲಿ ನಮ್ಮ ಧ್ವನಿ ಎತ್ತಲು ಅವಕಾಶ ನೀಡಿಲ್ಲ ಎಂದು ರಾಜಸ್ಥಾನದ ಕಿಸಾನ್ ಮಹಾಪಂಚಾಯತ್‌ನ ರಾಮ್‌ಪಾಲ್ ಜಾಟ್ ವಿವರಿಸಿದರು. ಈ ಕುಲಾಂತರಿ ತಳಿಗಳಿಂದಾಗಿ ನಮ್ಮ ಸಾಂಪ್ರದಾಯಿಕ ಜೀವವೈವಿಧ್ಯತೆ ನಾಶವಾಗುತ್ತದೆ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಯದುವೀರ ಸಿಂಗ್ ಹೇಳಿದರು. ಇಂಥ ಕುಲಾಂತರಿ ಹತ್ತಿ ಬೆಳೆದ ರೈತರ ಸ್ಥಿತಿ ಈಗ ಏನಾಗಿದೆ ಎಂದು ಅವರು ಪ್ರಶ್ನಿಸಿದರು. ನಮ್ಮ ಸಾಂಪ್ರದಾಯಿಕ ಸಾಸಿವೆ ತಳಿಗಳನ್ನೇ ಸುಧಾರಿಸುವ ಹಾಗೂ ಸಂರಕ್ಷಿಸಬೇಕು ಎಂದು ಅವರು ಪ್ರತಿಪಾದಿಸಿದರು. ಭಾರತದಲ್ಲಿ ಕುಲಾಂತರಿ ಸಾಸಿವೆ

ಈ ವಾದವನ್ನು ಎಲ್ಲ ರೈತರೂ ಒಪ್ಪುವುದಿಲ್ಲ. ಜಿಇಎಸಿ ಸಮಿತಿ ಸಭೆಯಲ್ಲಿ, ಭಾರತೀಯ ರೈತರ ಸಂಘಗಳ ಒಕ್ಕೂಟ ಹಾಗೂ ಮಹಾರಾಷ್ಟ್ರ ಮತ್ತು ರಾಜಸ್ಥಾನ ರೈತರ ಗುಂಪುಗಳು ಅರ್ಧ ಗಂಟೆ ಕಾಲ ವಾದ ಮಂಡಿಸಿ, ಕುಲಾಂತರಿ ಸಾಸಿವೆ ತಳಿಯ ಪರವಾಗಿ ಮಾತನಾಡಿದರು. ದೇಶದಲ್ಲಿ ಸಾಸಿವೆ ಫಲವತ್ತತೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಉತ್ಪಾದನೆ ಹೆಚ್ಚಿಸಲು ಕುಲಾಂತರಿ ತಳಿ ಅನಿವಾರ್ಯ ಎಂದು ಪ್ರತಿಪಾದಿಸಿದರು. ಆಗ ಮಾತ್ರ ದೇಶ ಸಾಸಿವೆ ಎಣ್ಣೆ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಸಾಧ್ಯ ಎಂದರು.

ನಾವು ಈಗಾಗಲೇ ಕೆನಡಾದಿಂದ ಕುಲಾಂತರಿ ಸಾಸಿವೆಯ ಎಣ್ಣೆ ಆಮದು ಮಡಿಕೊಳ್ಳುತ್ತಿದ್ದೇವೆ. 2014-15ರಲ್ಲಿ ಸುಮಾರು 3.55 ಲಕ್ಷ ಟನ್ ಸಾಸಿವೆ ಎಣ್ಣೆ ಆಮದು ಮಾಡಿಕೊಳ್ಳಲಾಗಿದೆ ಎಂದು ರೈತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ. ಚೆಂಗಲರೆಡ್ಡಿ ಹೇಳಿದರು. ಪರಿಸ್ಥಿತಿ ಹೀಗಿದ್ದ ಮೇಲೆ ಭಾರತೀಯ ರೈತರು ಕುಲಾಂತರಿ ಸಾಸಿವೆ ಬೆಳೆಯುವುದನ್ನು ನಾವು ಏಕೆ ತಡೆಯಬೇಕು ಎಂದು ಅವರು ಪ್ರಶ್ನಿಸಿದರು. ದೇಶದಲ್ಲಿ ಸಾಸಿವೆ ಉತ್ಪಾದಕತೆ ಪ್ರತೀ ಹೆಕ್ಟೇರ್‌ಗೆ 1000 ಕೆ.ಜಿ. ಆಗಿದ್ದರೆ, ಕೆನಡಾದಲ್ಲಿ ಹೆಕ್ಟೇರ್‌ಗೆ 1800 ಕೆ.ಜಿ. ಬೆಳೆಯಲಾಗುತ್ತಿದೆ ಎಂದು ಹೇಳಿದರು.

ಜೈವಿಕ ಸುರಕ್ಷತೆ ಬಗೆಗಿನ ಆತಂಕವನ್ನೂ ಅವರು ತಳ್ಳಿ ಹಾಕಿ, ಜಾಗತಿಕವಾಗಿ ಕುಲಾಂತರಿ ಸಾಸಿವೆ ಬಳಸಲಾಗುತ್ತಿದೆ. ಬಿಟಿ ಹತ್ತಿ ಹಾಗೂ ಬಿಟಿ ಬದನೆಯ ಅನುಭವದ ಹಿನ್ನೆಲೆಯಲ್ಲಿ ಇದು ಬಹುರಾಷ್ಟ್ರೀಯ ಕಂಪೆನಿಗಳ ಹುನ್ನಾರ ಎಂದು ಹೋರಾಟಗಾರರು ಆಪಾದಿಸುತ್ತಿದ್ದಾರೆ ಎಂದು ರೆಡ್ಡಿ ವಿವರಿಸಿದರು. ಇದು ಸಾರ್ವಜನಿಕ ವಲಯದ ಸಂಶೋಧನೆ. ಇದಕ್ಕೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಅನುದಾನ ನೀಡಿದೆ. ಎನ್‌ಡಿಡಿಬಿ ಈ ಯೋಜನೆಯನ್ನು ಸುಮಾರು 15 ವರ್ಷಗಳಿಂದ ಮೇಲ್ವಿಚಾರಣೆ ಮಾಡುತ್ತಾ ಬಂದಿದೆ. ಇದಕ್ಕಿಂತ ಹೆಚ್ಚು ಇವರಿಗೆ ಏನು ಬೇಕು ಎಂದು ಪ್ರಶ್ನಿಸಿದರು.

‘‘ಸಾರ್ವಜನಿಕ ವಲಯ ಅನುದಾನ ನೀಡಿದ ಸಂಶೋಧನೆ ಎಂಬ ಕಾರಣಕ್ಕೆ ಕುಲಾಂತರಿ ಸಾಸಿವೆಯನ್ನು ಸುರಕ್ಷಿತ ಎಂದು ಹೇಳುವುದು ಅಪಾಯಕಾರಿ ಆಟದ ಕುದುರೆ. ಇದು ಇತರ ಕುಲಾಂತರಿ ಬೆಳೆಗಳಿಗೂ ದಾರಿ ಮಾಡಿಕೊಡುತ್ತದೆ’’ ಎಂದು ಒಕ್ಕೂಟದ ಕವಿತಾ ಕುರುಗಂಟಿ ಎಚ್ಚರಿಸುತ್ತಾರೆ. ಇಂಥ ಕೃತಕ ಪರಾಗಸ್ಪರ್ಶದಿಂದ ಜೈವಿಕ ಕೃಷಿ ಹಾಗೂ ಜೇನು ಉತ್ಪಾದನೆಗೂ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದು ಅವರು ಹೇಳಿದರು.

ಕೇಂದ್ರ ಮಾಹಿತಿ ಆಯೋಗವು ಎಪ್ರಿಲ್‌ನ ಆದೇಶದಲ್ಲಿ ಸೂಚಿಸಿರುವಂತೆ ಜೈವಿಕ ಸುರಕ್ಷತೆ ಕುರಿತ ಅಂಕಿ ಅಂಶಗಳನ್ನು ಹೇಗೆ ಪ್ರಸಾರ ಮಾಡಬೇಕು ಎಂಬ ಬಗ್ಗೆಯೂ ಮೊನ್ನೆಯ ಜೆಇಎಸಿ ಸಭೆಯಲ್ಲಿ ಚರ್ಚಿಸಲಾಯಿತು. ಕುಲಾಂತರಿ ತಳಿಯ ಪರ ಹಾಗೂ ವಿರೋಧದ ಚರ್ಚೆಯಲ್ಲಿ ಹಲವು ಅಪಾಯಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಇದರ ಪರಿಣಾಮ ರೈತರು, ಪರಿಸರವಾದಿಗಳು, ವಿಜ್ಞಾನಿಗಳ ವ್ಯಾಪ್ತಿಯನ್ನು ಮೀರಿ ಬೆಳೆಯಲಿದೆ. ಈ ಹಿನ್ನೆಲೆಯಲ್ಲಿ ಪರ ಹಾಗೂ ವಿರೋಧ ಚರ್ಚೆಗಳಲ್ಲಿ ಪಾರದರ್ಶಕತೆಯನ್ನು ತರುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಚೆಂಡನ್ನು ಗ್ರಾಹಕರ ಅಂದರೆ ಜನಸಾಮಾನ್ಯರ ಕೋರ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಜೊತೆಗೆ ಸಾರ್ವಜನಿಕರಿಂದಲೂ ಈ ಬಗ್ಗೆ ಅಭಿಪ್ರಾಯ ಪಡೆದು, ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

►ವಿಸ್ಮಯ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X