Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ನಾನು ಹುಟ್ಟಿದ್ದೇ ಪೊಲೀಸ್ ಆಗೋಕೆ ಎನ್ನುವ...

ನಾನು ಹುಟ್ಟಿದ್ದೇ ಪೊಲೀಸ್ ಆಗೋಕೆ ಎನ್ನುವ ಭ್ರಮೆ ಇತ್ತು.

ವಾರ್ತಾಭಾರತಿವಾರ್ತಾಭಾರತಿ27 Jun 2016 12:38 AM IST
share
ನಾನು ಹುಟ್ಟಿದ್ದೇ ಪೊಲೀಸ್ ಆಗೋಕೆ ಎನ್ನುವ ಭ್ರಮೆ ಇತ್ತು.

ನಾನು ಹುಟ್ಟಿದ್ದೇ ಪೊಲೀಸ್ ಆಗೋಕೆ ಎನ್ನುವ ಭ್ರಮೆ ಇತ್ತು.
                                              -ಅನುಪಮಾ ಶೆಣೈ, ಮಾಜಿ ಡಿವೈಎಸ್ಪಿ
  ರಾಜಕಾರಣಿಯಾಗೋಕೆ ಎನ್ನುವುದನ್ನು ಆರೆಸ್ಸೆಸ್‌ನೋರು ಮನವರಿಕೆ ಮಾಡಿಸಿರಬೇಕು.

  ಅಂಬರೀಷ್ ಮಂತ್ರಿ ಸ್ಥಾನ ಕಳೆದುಕೊಳ್ಳಲು ಒಬ್ಬಳು ಹೆಂಗಸು ಕಾರಣ.
                                                            -ಜಗ್ಗೇಶ್, ಸಿನೆಮಾ ನಟ
  ಸೋನಿಯಾಗಾಂಧಿಯ ವಿರುದ್ಧ ಆರೋಪವೇ?

ಇತರರಿಗೆ ಅರ್ಥವಾಗದೇ ಇರುವಂತಹ ಬದುಕು ಬದುಕುವುದು ತಪ್ಪೇನಲ್ಲ
                                                -ಅಮಿತಾಭ್ ಬಚ್ಚನ್, ಸಿನೆಮಾ ನಟ
 ಕನಿಷ್ಠ ನೆಲದ ಕಾನೂನಿಗೆ ಅದರಲ್ಲೂ ತೆರಿಗೆ ಇಲಾಖೆಗೆ ಅರ್ಥವಾಗುವ ಹಾಗಿರಬೇಕು.

 ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಧಿಕಾರದ ಅಮಲು ಏರಿದೆ
                                              -ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
  ನಿಮಗೆ ಇಳಿದಿದೆ.

ಸದ್ಯದ ಸ್ಥಿತಿ ನೋಡಿದರೆ ಕಾಂಗ್ರೆಸ್‌ಗೆ ಕೇಡು ಕಾಲ ಬಂದಿದೆ.
                                         -ಶೋಭಾ ಕರಂದ್ಲಾಜೆ, ಸಂಸದೆ
  ಯಡಿಯೂರಪ್ಪ ಅವರಿಗೆ ಕೋಡು ಕಾಲ ಬಂದಿದೆ ಎಂಬ ಸಂಭ್ರಮವೇ?

ಭಾರತ ಮುಂದಿನ ದಿನಗಳಲ್ಲಿ ತಯಾರಿಕಾ ವಲಯದ ಅಗ್ರಗಣ್ಯ ರಾಷ್ಟ್ರವಾಗಲಿದೆ.
                                             -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಯಾವುದನ್ನು ತಯಾರಿಸುವುದು ಎಂಬ ಬಗ್ಗೆಯೂ ವಿವರಗಳನ್ನು ನೀಡಿ.

 ಸಂಪುಟ ಪುನಾರಚನೆಯಿಂದ ಕಾಂಗ್ರೆಸ್‌ಗೆ ಹಾನಿಯಾಗಲಿದೆ.
                                             -ಬಿ.ಕೆ ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
  ಬಹುಶಃ ಅದಕ್ಕಾಗಿಯೇ ಪುನಾರಚನೆಯ ಸಲಹೆ ನೀಡಿರಬೇಕು ತಾವು.

ಕಾಂಗ್ರೆಸ್‌ನಿಂದಲೇ ಕಾಂಗ್ರೆಸ್ ಮುಕ್ತ ಕರ್ನಾಟಕ
                            -ಖಮರುಲ್ ಇಸ್ಲಾಂ, ಮಾಜಿ ಸಚಿವ
  ಸದ್ಯಕ್ಕೆ ತಾವಂತೂ ಅಧಿಕಾರ ಮುಕ್ತರಾದರಲ್ಲ, ಜನ ಅದರ ಸಂಭ್ರಮದಲ್ಲಿದ್ದಾರೆ.

ನನ್ನ ಸಂಗಡಿಗರು ಕಾಂಗ್ರೆಸ್ ಸೇರಿ ಈಗ ಆಡಳಿತ ನಡೆಸುತ್ತಿದ್ದಾರೆ.
                                      -ದೇವೇಗೌಡ, ಮಾಜಿ ಪ್ರಧಾನಿ
  ತಾವೂ ಸೇರಿಕೊಳ್ಳುವ ಉದ್ದೇಶವಿದೆಯೋ?

ನನಗೆ ಅಧಿಕಾರ ದಾಹವಿಲ್ಲ.
                           -ಅಂಬರೀಷ್, ಮಾಜಿ ಸಚಿವ
  ಸದ್ಯಕ್ಕೆ ಸರಕಾರಿ ಖಜಾನೆಯಿಂದ ಹಾಸ್ಪಿಟಲ್ ಬಿಲ್ ಪಾವತಿ ಮಾಡಿದರೆ ಸಾಕು ಅಂತೀರಾ?

ದೇಶಕ್ಕಿನ್ನೂ ಅಚ್ಛೇದಿನ್ ಬಂದಿಲ್ಲ.
                       -ನ್ಯಾ.ಸಂತೋಷ್ ಹೆಗ್ಡೆ, ನಿವೃತ್ತ ಲೋಕಾಯುಕ್ತ
  ಮೋದಿ ಭಕ್ತರು ಮಾತ್ರ ಬಂದಿದೆ ಎಂದು ಸಂಭ್ರಮಿಸುತ್ತಿದ್ದಾರೆ.

ಎಲ್ಲಕ್ಕಿಂತ ಪಕ್ಷ ದೊಡ್ಡದು.
                              -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  ಯಾವ ಪಕ್ಷ ಎನ್ನುವುದನ್ನು ಹೇಳಲಿಲ್ಲ.

ಅತೃಪ್ತ ಶಾಸಕರು ಬಿಜೆಪಿ ಸೇರುವುದಾದರೆ ನಮ್ಮದೇನೂ ಅಭ್ಯಂತರವಿಲ್ಲ.
                            -ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
  ತಮ್ಮ ಬಗ್ಗೆ ಅತೃಪ್ತಿ ಇರುವ ಬಿಜೆಪಿ ಶಾಸಕರು ಬಿಜೆಪಿಯನ್ನು ತೊರೆಯಲು ಸೂಚನೆಯೇ?

ಯೋಗವು ಬಡವರ ಮತ್ತು ಶ್ರೀಮಂತರ ನಡುವೆ ಭೇದ ಮಾಡುವುದಿಲ್ಲ.
                             -ನರೇಂದ್ರ ಮೋದಿ, ಪ್ರಧಾನಿ
  ಬಾಬಾ ರಾಮ್‌ದೇವ್ ಶಿಬಿರಕ್ಕೆ ಬಡವರಿಗೂ ಪ್ರವೇಶವಿದೆಯೇ?

ಎಲ್ಲಾ ಬಯಕೆಗಳೂ ಅಪ್ರಜ್ಞ್ಞಾ ಪೂರ್ವಕವಾದ ಮನಸ್ಸಿನಿಂದ ಬರುವಂತಹವು.
                                     -ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸ್ಥಾಪಕ
  ರಾಘವೇಶ್ವರ ಸ್ವಾಮೀಜಿಯನ್ನು ತಮ್ಮ ಶಿಬಿರಕ್ಕೇಕೆ ಸೇರಿಸಬಾರದು? ನಿಮ್ಮಂತೆ ಅವರೂ ಬದುಕಲು ಕಲಿಯಲಿ.


  ಕಾಂಗ್ರೆಸ್ ಖರ್ಗೆ, ಸಿದ್ದು ಅಪ್ಪನ ಆಸ್ತಿಯಲ್ಲ.
                                -ಮಾಲಿಕಯ್ಯ ಗುತ್ತೇದಾರ್, ಶಾಸಕ
 ಮಾಲಿಕಯ್ಯ ಎಂಬ ಹೆಸರಿರುವ ಮಾತ್ರಕ್ಕೆ ನೀವೇ ಕಾಂಗ್ರೆಸ್ ಮಾಲಿಕರೆ?

 ಕಾರ್ಯಾಧ್ಯಕ್ಷ ಸ್ಥಾನ ರಬ್ಬರ್ ಸ್ಟಾಂಪ್ ಅಲ್ಲ.
                                  -ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
  
ಬರೇ ಪೋಸ್ಟಲ್ ಕಾರ್ಡ್‌ನ ಸ್ಟಾಂಪ್ ಇರಬೇಕು.

 ಸಿಎಂ ಸಿದ್ದರಾಮಯ್ಯ ಇನ್ನೂ ಚಿಕ್ಕ ಹುಡುಗ.
                               -ಸಿ.ಕೆ. ಜಾಫರ್ ಶರೀಫ್, ಮಾಜಿ ಸಚಿವ
  ಬಹುಶಃ ನಿಮ್ಮ ಮಗ ಮಾತ್ರ ರಾಜಕೀಯವಾಗಿ ತುಂಬಾ ಹಿರಿಯನಿರಬೇಕು ಅಲ್ಲವೇ?

 ಸಚಿವ ಸಂಪುಟದಲ್ಲಿ ಎಲ್ಲರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ.
                                                      -ಕಾಗೋಡು ತಿಮ್ಮಪ್ಪ, ಸಚಿವ
  ಇಷ್ಟು ಗೊತ್ತಿದ್ದೂ ಸಂಪುಟಕ್ಕೆ ಸೇರಲು ಅದೇನೇನೋ ಸರ್ಕಸ್ ಮಾಡಿ ನೀವು ಯಶಸ್ವಿಯಾಗಿಲ್ಲವೇ?  

ಕ್ಷೇತ್ರದ ಜನತೆ ಬಯಸಿದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧ.

                                               -ಬಾಬೂರಾವ್ ಚಿಂಚನಸೂರ, ಮಾಜಿ ಸಚಿವ

  ಬಯಸಿದ್ದಾರೋ, ಇಲ್ಲವೋ ಎಂದು ತಿಳಿದುಕೊಳ್ಳಲು ಪ್ರತ್ಯೇಕ ಮತದಾನ ಮಾಡಬೇಕೇ?

  ಉತ್ತರ ಪ್ರದೇಶ ದೇಶದಲ್ಲೇ ಅತ್ಯಂತ ಅಸುರಕ್ಷಿತ ರಾಜ್ಯ.
                                            -ಉಮಾಭಾರತಿ, ಕೇಂದ್ರ ಸಚಿವೆ
  
ಉಳಿದ ರಾಜ್ಯಗಳನ್ನು ಅಸುರಕ್ಷಿತಗೊಳಿಸಲು ತಮ್ಮ ಅನುಯಾಯಿಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಚಿಂತೆ ಬಿಡಿ.

  ಜನಸೇವೆಗೆ ಸಚಿವ ಸ್ಥಾನ ಅನಿವಾರ್ಯವಲ್ಲ.

                                              -ಅಭಯ ಚಂದ್ರ ಜೈನ್, ಮಾಜಿ ಸಚಿವ

ಮನೆ ಸೇವೆಗೆ ಕೆಲವೊಮ್ಮೆ ಸಚಿವ ಸ್ಥಾನ ಬೇಕಾಗುತ್ತದೆ.

  ರಮ್ಯಾರಂತಹ ಯುವ ರಾಜಕೀಯ ನಾಯಕಿಯನ್ನು ನಾವು ಸಂಸತ್‌ನಲ್ಲಿ ನೋಡಲು ಬಯಸುತ್ತೇವೆ.
                                                  -ಡಿ.ಕೆ ಶಿವಕುಮಾರ್, ಇಂಧನ ಸಚಿವ
  ಅಂದರೆ ವಿಧಾನಸಭೆಗೆ ಆಗಮಿಸದಂತೆ ಮುಂಜಾಗರೂಕತೆಯೇ?

 ಸಂಪುಟ ಪುನಾರಚನೆ ಗಜ ಪ್ರಸವ ಇದ್ದಂತೆ. ಹೆರಿಗೆ ಸಂದರ್ಭ ಚೀರಾಟ, ಕಿರುಚಾಟ ಸಹಜ
                                          -ರಮೇಶ್ ಕುಮಾರ್, ಆರೋಗ್ಯ ಸಚಿವ
  
ಅಂತಿಮವಾಗಿ ಹೆಗ್ಗಣಗಳ ಪ್ರಸವವಾಗದಿದ್ದರೆ ಸಾಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X