ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಗೆ ಸೇರ್ಪಡೆಗೊಂಡ ಭಾರತ

ವಾಷಿಂಗ್ಟನ್ , ಜೂ.27: ಮೂರು ದಿನಗಳ ಹಿಂದೆ ಚೀನಾ ಮತ್ತಿತರ ದೇಶಗಳ ವಿರೋಧದಿಂದಾಗಿ ಎನ್‌ಎಸ್‌ಜಿ ಸದಸ್ಯತ್ವ ಪಡೆಯುವಲ್ಲಿ ವಿಫಲವಾಗಿದ್ದ ಭಾರತ ಇದೀಗ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಗೆ ಭಾರತ ಸೋಮವಾರ ಸೇರ್ಪಡೆಗೊಂಡಿದೆ.
ಇದರಿಂದಾಗಿ ಭಾರತಕ್ಕೆ ಅತ್ಯಾಧುನಿಕ ತಂತ್ರಜ್ಞಾನದ ಪ್ರಬಲ ಕ್ಷಿಪಣಿಗಳನ್ನು ಖರೀದಿಸುವ ಹಾದಿ ಸುಗಮವಾಗಿದೆ. ಭಾರತ-ಅಮೆರಿಕ ನೂಕ್ಲೀರ್ ಒಪ್ಪಂದದ ಬಳಿಕ ಭಾರತ ಎನ್‌ಎಸ್‌ಜಿ ಸದಸ್ಯತ್ವ ಮತ್ತು ಎಂಟಿಸಿಆರ‍್ ಸೇರುವ ನಿಟ್ಟಿನಲ್ಲಿ ಚಿಂತನೆ ನಡೆಸಿತ್ತು.
ಭಾರತ ಇದೀಗ ಎಂಟಿಸಿಆರ್ ಸೇರ್ಪಡೆಗೊಂಡ 34ನೆ ರಾಷ್ಟ್ರವಾಗಿದೆ.
Next Story





