ಭಾರೀ ಗಾಳಿ ಮಳೆಗೆ ಸುಳ್ಯ ತತ್ತರ: ಹಲವೆಡೆ ಹಾನಿ
ಸುಳ್ಯ, ಜೂ.27: ಸುಳ್ಯ ನಗರದಲ್ಲಿ ಸೋಮವಾರ ಸಂಜೆ ಸುಮಾರು ಅರ್ಧ ತಾಸು ಸುರಿದ ಭಾರಿ ಗಾಳಿ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದೆ.
ಸಂಜೆ ಸುಮಾರು 3:30ರ ವೇಳೆಗೆ ಭಾರೀ ಗಾಳಿ ಮಳೆ ಸುರಿದಿದೆ.
ಗಾಳಿಯ ರಭಸಕ್ಕೆ ಕಟ್ಟಡದ ಒಳಗಿದ್ದವರು ಆತಂಕಿತರಾಗಿ ಹೊರ ಬಂದರು. ಅಂಗಡಿಗಳ ಶೀಟ್, ಬೋರ್ಡ್ಗಳು ಹಾರಿ ಹೋದವು. ಬೆಟ್ಟಂಪಾಡಿ ಭಜನಾ ಮಂದಿರದ ಬಳಿ ಭೂ ಕುಸಿತ ಉಂಟಾಗಿದೆ.
ಸುಳ್ಯ ನಗರ ಪಂಚಾಯತ್ ಬಳಿ ಮರಗಳು ಮುರಿದುಬಿದ್ದಿವೆ. ಜೂನಿಯರ್ ಕಾಲೇಜು ಬಳಿ ಮನೆಗೆ ಮರ ಉರುಳಿದ್ದು, ವ್ಯಾಪಕ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.
Next Story