ಅಪ್ರಾಪ್ತ ವಯಸ್ಕ ಬಾಲಕಿಯಿಂದ ಎಳೆಯ ಬಾಲಕನ ಮೇಲೆ ಅತ್ಯಾಚಾರಕ್ಕೆ ಯತ್ನ!
ಲಕ್ನೋ,ಜೂ.27: ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳು 10ರ ಹರೆಯದ ಬಾಲಕನನ್ನು ಬಲವಂತದಿಂದ ತನ್ನೊಂದಿಗೆ ಲೈಂಗಿಕ ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದ ವಿಲಕ್ಷಣ ಘಟನೆಯೊಂದು ಕಾನಪುರ ಬಳಿಯ ಗ್ರಾಮದಲ್ಲಿ ನಡೆದಿದೆ. ಬಾಲಕಿಯ ಲೈಂಗಿಕ ಹಲ್ಲೆಯಿಂದ ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾನಪುರದ ಬಿಧ್ನು ಪ್ರದೇಶದ ಕುಲ್ಹಾವಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 16ರ ಹರೆಯದ ಬಾಲಕಿ ತನ್ನ ನೆರೆಕರೆಯ 10ರ ಹರೆಯದ ಬಾಲಕನೊಂದಿಗೆ ಮುದ್ದುಮಾತುಗಳನ್ನಾಡಿ ಬಲವಂತದಿಂದ ಆತ ತನ್ನೊಂದಿಗೆ ಲೈಂಗಿಕ ಕೃತ್ಯದಲ್ಲಿ ತೊಡಗುವಂತೆ ಮಾಡಲು ಪ್ರಯತ್ನಿಸಿದ್ದಾಳೆ. ಈ ಪ್ರಯತ್ನದಲ್ಲಿ ಬಾಲಕನ ಗುಪ್ತಾಂಗಕ್ಕೆ ಗಂಭೀರ ಗಾಯವಾಗಿದ್ದು, ವಿಪರೀತ ರಕ್ತಸ್ರಾವದೊಂದಿಗೆ ಮನೆಗೆ ಓಡಿ ಬಂದ ಆತನನ್ನು ಹೆತ್ತವರು ಕಾನಪುರದ ಹ್ಯಾಲೆಟ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಘಟನೆಯಲ್ಲಿ ಇಬ್ಬರೂ ಅಪ್ರಾಪ್ತ ವಯಸ್ಕರಾಗಿರುವುದು ಪೊಲೀಸರಿಗೆ ತಲೆನೋವನ್ನುಂಟು ಮಾಡಿದೆ. ಇಂತಹುದೊಂದು ಘಟನೆ ನಡೆಯಬಹುದು ಎಂದು ಕಲ್ಪನೆಯನ್ನೂ ಮಾಡಿರದ ಅವರಿಗೆ ಐಪಿಸಿಯ ಯಾವ ಕಲಮ್ನಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎನ್ನುವುದು ತೋಚುತ್ತಿಲ್ಲ. ಸ್ವತಃ ಕಾನಪುರ ಎಸ್ಎಸ್ಪಿ ಶಲಭ್ ಮಾಥೂರ್ ಅವರೇ ಈ ಸಂದಿಗ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
ಪೋಕ್ಸೊ ಕಾಯ್ದೆಯ ಕಲಂ 8ರಡಿ ಪ್ರಕರಣವನ್ನು ದಾಖಲಿಸಿಕೊಳ್ಳಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.