Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಇಶ್ರತ್ ಜಹಾನ್ ಪ್ರಕರಣ:ಪಿ ಚಿದಂಬರಂರನ್ನು...

ಇಶ್ರತ್ ಜಹಾನ್ ಪ್ರಕರಣ:ಪಿ ಚಿದಂಬರಂರನ್ನು ದೂರದ ಸರಕಾರದ ನೂತನ ವರದಿ

ವಾರ್ತಾಭಾರತಿವಾರ್ತಾಭಾರತಿ27 Jun 2016 9:01 PM IST
share
ಇಶ್ರತ್ ಜಹಾನ್ ಪ್ರಕರಣ:ಪಿ ಚಿದಂಬರಂರನ್ನು ದೂರದ ಸರಕಾರದ ನೂತನ ವರದಿ

ಹೊಸದಿಲ್ಲಿ,ಜೂ.27: ಗುಜರಾತ್‌ನಲ್ಲಿ ಪೊಲೀಸರ ಗುಂಡುಗಳಿಗೆ ಬಲಿಯಾದ 19ರ ಹರೆಯದ ಕಾಲೇಜು ವಿದ್ಯಾರ್ಥಿನಿ ಇಶ್ರತ್ ಜಹಾನ್ ಭಯೋತ್ಪಾದಕಿಯಾಗಿದ್ದಳೇ ಎನ್ನುವ ಕುರಿತು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ ನಿಲುವನ್ನು ಬದಲಿಸಿದ್ದು ಹೇಗೆ ಎನ್ನುವದರ ಮೇಲೆ ಬೆಳಕು ಚೆಲ್ಲಬಹುದಾಗಿದ್ದ ನಿರ್ಣಾಯಕ ದಾಖಲೆಗಳನ್ನು ಪತ್ತೆ ಹಚ್ಚಲು ಮೂರು ತಿಂಗಳ ಕಾಲ ನಿರಂತರವಾಗಿ ನಡೆಸಿದ ಹುಡುಕಾಟ ವಿಫಲಗೊಂಡಿದೆ.
2004ರಲ್ಲಿ ಅಹ್ಮದಾಬಾದ್‌ನ ಹೊರವಲಯದಲ್ಲಿ ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಯ ಉದ್ದೇಶ ಹೊಂದಿದ್ದರೆಂಬ ಆರೋಪದಲ್ಲಿ ಇಶ್ರತ್ ಮತ್ತು ಇತರ ಮೂವರನ್ನು ಪೊಲೀಸರು ಎನ್‌ಕೌಂಟರ್‌ನಡೆಸಿ ಕೊಂದು ಹಾಕಿದ್ದರು. ಈ ನಾಲ್ವರೂ ಪಾಕಿಸ್ತಾನದ ಲಷ್ಕರ್-ಎ-ತಯ್ಯಬಾದ ಸದಸ್ಯರಾಗಿದ್ದರೇ ಎಂಬ ಬಗ್ಗೆ 2009ರಲ್ಲಿ ಆಗಿನ ಗೃಹಸಚಿವ ಪಿ.ಚಿದಂಬರಂ ಅವರು ಮೊದಲು ಸಲ್ಲಿಸಿದ್ದ ಅಫಿದಾವತ್‌ಗೆ ವ್ಯತಿರಿಕ್ತವಾದ ಎರಡನೇ ಅಫಿದಾವತ್‌ನ್ನು ಗುಜರಾತ್‌ನ ನ್ಯಾಯಾಲಯಕ್ಕೆ ಸಲ್ಲಿಸಿ ಅದರ ದಾರಿ ತಪ್ಪಿಸಿದ್ದರು ಎನ್ನುವುದನ್ನು ಸಾಬೀತುಗೊಳಿಸುವಲ್ಲಿ ಐದು ದಾಖಲೆಗಳನ್ನು ನಿರ್ಣಾಯಕವೆಂದು ಸರಕಾರವು ಗುರುತಿಸಿತ್ತು.
ಜುಲೈ 2009ರಲ್ಲಿ ಸಲ್ಲಿಸಿದ್ದ ಮೊದಲ ಅಫಿದಾವತ್‌ನಲ್ಲಿ ಗೃಹ ಸಚಿವಾಲಯವು ಇಶ್ರತ್ ಮತ್ತು ಸಹಚರರು ಲಷ್ಕರ್ ಉಗ್ರರಾಗಿದ್ದರು ಎಂದು ತಿಳಿಸಿತ್ತು. ಎರಡು ತಿಂಗಳ ಬಳಿಕ ಲಷ್ಕರ್ ಹೆಸರನ್ನು ತೆಗೆದು ಹಾಕಲು ಅಫಿದಾವತ್‌ನ್ನು ಬದಲಿಸಲಾಗಿತ್ತು.
ಅಫಿದಾವತ್‌ನಿಂದ ಲಷ್ಕರ್ ಹೆಸರನ್ನು ತೆಗೆದು ಹಾಕಿದ್ದು ಮೋದಿಗೆ ಬೆದರಿಕೆಯನ್ನು ಕಡೆಗಣಿಸುವ ಮತ್ತು ಇಶ್ರತ್ ಹಾಗೂ ಸಹಚರರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿತ್ತು ಎಂದು ಹೇಳುವ ಮೂಲಕ ಅವರ ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವ ಉದ್ದೇಶದಿಂದ ಕಾಂಗ್ರೆಸ್ ನಡೆಸಿದ್ದ ಪಿತೂರಿಯಾಗಿತ್ತು ಎಂದು ಆಡಳಿತ ಬಿಜೆಪಿ ಸುದೀರ್ಘ ಕಾಲದಿಂದ ಪ್ರತಿಪಾದಿಸುತ್ತಿದೆ.
ಗೃಹ ಕಾರ್ಯದರ್ಶಿಗಳು ಅಟಾರ್ನಿ ಜನರಲ್‌ಗೆ ಬರೆದಿದ್ದ ಪತ್ರ,ಅಟಾರ್ನಿ ಜನರಲ್ ಸಿದ್ಧಪಡಿಸಿದ್ದ ಕರಡು,ಇದಕ್ಕೆ ಚಿದಂಬರಂ ಅವರು ಮಾಡಿದ್ದ ತಿದ್ದುಪಡಿಗಳು ಮತ್ತು ಎರಡನೇ ಅಫಿದಾವತ್‌ನ ಅಂತಿಮ ಪ್ರತಿ ಇವು ನಾಪತ್ತೆಯಾಗಿರುವ ದಾಖಲೆಗಳಲ್ಲಿ ಸೇರಿವೆ.
 ಗೃಹ ಸಚಿವಾಲಯವು ಈಗ ಸಿದ್ಧಗೊಳಿಸಿರುವ 50 ಪುಟಗಳ ವರದಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿದಾವತ್‌ನ ಬದಲಾವಣೆಯನ್ನು ಚಿದಂಬರಂ ಒಬ್ಬರೇ ಮಾಡಿದ್ದಲ್ಲ. ಆಗಿನ ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಅವರೂ ಸಾಥ್ ನೀಡಿದ್ದರು ಎಂದು ಪ್ರತಿಪಾದಿಸಿದೆ.
ದಾಖಲೆಗಳನ್ನು ತಿದ್ದಿದ್ದಕ್ಕೆ ನೂತನ ವರದಿಯು ಯಾರನ್ನೂ ದೂರಿಲ್ಲ. ಆದರೆ ಆಗ ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ದೀಪ್ತಿ ವಿಲಾಸ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದೆ.
2009ರಲ್ಲಿಯೇ ಕೆಲವು ದಾಖಲೆಗಳು ನಾಪತ್ತೆಯಾಗಿದ್ದನ್ನು ವಿಲಾಸ ಗಮನಿಸಿದ್ದರು ಮತ್ತು ಈ ಬಗ್ಗೆ ಅವರು ಪ್ರಶ್ನಿಸಬೇಕಾಗಿತ್ತು. ಯಾವುದೇ ಸಂದರ್ಭದಲ್ಲಿಯೂ ಜಂಟಿ ಕಾರ್ಯದರ್ಶಿಯಾದವರು ಅಪೂರ್ಣ ಕಡತಗಳನು ಸ್ವೀಕರಿಸುವಂತಿಲ್ಲ ಎಂದು ವರದಿಯು ಬೆಟ್ಟು ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X