Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಧಾನಿ ಮೋದಿಯಿಂದ ಅರ್ನಬ್ ಮುಖವಾಡ...

ಪ್ರಧಾನಿ ಮೋದಿಯಿಂದ ಅರ್ನಬ್ ಮುಖವಾಡ ಕಳಚಿದ ಯಶಸ್ವಿ ಸಂದರ್ಶನ !

ಸತೀಶ್ ಕುಮಾರ್ , ತುಮಕೂರುಸತೀಶ್ ಕುಮಾರ್ , ತುಮಕೂರು27 Jun 2016 9:27 PM IST
share
ಪ್ರಧಾನಿ ಮೋದಿಯಿಂದ ಅರ್ನಬ್ ಮುಖವಾಡ ಕಳಚಿದ ಯಶಸ್ವಿ ಸಂದರ್ಶನ !

ಸೋಮವಾರದ 'ಇಡೀ ದೇಶದ ವಕೀಲ ' ಅರ್ನಬ್ ಗೋಸ್ವಾಮಿ ಅವರು ನಡೆಸಿದ  ಪ್ರಧಾನಿ ನರೇಂದ್ರ ಮೋದಿ ಅವರ 'ಐತಿಹಾಸಿಕ' ಸಂದರ್ಶನದಲ್ಲಿ ಮೂಡಿಬಂದ ಮುಖ್ಯಅಂಶ ಏನು ? ದೇಶಾದ್ಯಂತ ಎಲ್ಲ ಪತ್ರಿಕಾ ಸಂಪಾದರಿಗೆ ಇಂದು ಬಹುದೊಡ್ಡ ತಲೆನೋವಾಗಿರುವ ಪ್ರಶ್ನೆ ಇದು. ಇಂದಿನ ಸಂದರ್ಶನದ  ಪ್ರಧಾನಿಯ ಯಾವ ಹೇಳಿಕೆಯನ್ನು ನಾಳಿನ ಪತ್ರಿಕೆಗೆ ಹೆಡ್ ಲೈನ್ ಮಾಡಬೇಕೆಂದು ಪತ್ರಿಕಾ ಸಂಪಾದಕರು ತಲೆಕೆರೆದುಕೊಳ್ಳುತ್ತಿದ್ದಾರೆ. ಪ್ರಧಾನಿಯಂತಹ ಪ್ರಧಾನಿಯನ್ನೇ ಸಂದರ್ಶನ ಮಾಡಿಯೂ ಒಂದು ಮುಖ್ಯ ಹೆಡ್ ಲೈನ್ ಸಿಗಲು ಕಷ್ಟವಾಗುವಂತೆ ಮಾಡಿರುವ 'ಹೆಗ್ಗಳಿಕೆ' ಅರ್ನಬ್ ಅವರದ್ದು. ಹೌದು , ಪ್ರಧಾನಿ ಸಂದರ್ಶನದಲ್ಲಿ  ಸುಬ್ರಮಣ್ಯನ್ ಸ್ವಾಮಿಗೆ ಪರೋಕ್ಷವಾಗಿ ಕುಟುಕಿದ್ದಾರೆ. ಇದು ಬಹಳ ಸಮಯದಿಂದ ಜನರು ನಿರೀಕ್ಷಿಸುತ್ತಿದ್ದ ಹೇಳಿಕೆ. ಆದರೆ ಪ್ರಧಾನಿಯ ಪ್ರಪ್ರಥಮ ಸಂದರ್ಶನದಲ್ಲಿ ದೇಶದ ಜನತೆ ಬಹಳಷ್ಟು ವಿಷಯಗಳ ಬಗ್ಗೆ ಪ್ರಧಾನಿಯ ಮಾತು ಕೇಳಲು ಕಾತರರಾಗಿರುತ್ತಾರೆ. ಆದರೆ ಅದ್ಯಾವುದನ್ನೂ ' ದೇಶದ ಜನತೆಗೆ' ತೆಗೆದುಕೊಡಲು ವಿಫಲವಾಗಿದ್ದಾರೆ ಅರ್ನಬ್ ! 

ಹಾಗಾದರೆ ಇಂದಿನ ಸಂದರ್ಶನದಲ್ಲಿ ಬಹಿರಂಗವಾದ ಬಹುದೊಡ್ಡ ವಿಷಯ ಯಾವುದು ? ಅದೇನೆಂದರೆ ಅರ್ನಬ್ ಕೂಡ ಸಾಮಾನ್ಯ ಮನುಷ್ಯರಂತೆ ಮಾತುಕತೆ ನಡೆಸಬಲ್ಲರು. ಅವರು ಮನಸ್ಸು ಮಾಡಿದರೆ ಪ್ರಶ್ನೆಯನ್ನು ಮಾತ್ರ ಕೇಳಿ ಉತ್ತರ ನೀಡಲು ಎದುರು ಕುಳಿತವರಿಗೂ ಅವಕಾಶ ಬಿಡಬಲ್ಲರು. 

ಇಷ್ಟು ಮಹತ್ವದ ಒನ್ ಟು ಒನ್ ಸಂದರ್ಶನದಲ್ಲಿ ಒಂದೇ ಒಂದು ಬಹುಚರ್ಚಿತ ವಿಷಯ ಮೂಡಿ ಬರಲಿಲ್ಲ, ಮಹತ್ವದ ಹೇಳಿಕೆ ಸಿಗಲಿಲ್ಲ. ಇದಕ್ಕೆ ಪ್ರಧಾನಿಯನ್ನು ದೂರಿ ಪ್ರಯೋಜನವಿಲ್ಲ. ಏಕೆಂದರೆ ನೀವು ಸರಿಯಾದ ಪ್ರಶ್ನೆ ಕೇಳಿದರೆ ಮಾತ್ರ ಸರಿಯಾದ ಉತ್ತರ ಸಿಗುತ್ತದೆ. ಪ್ರಶ್ನೆಗೆ ತಕ್ಕ ಉತ್ತರ ಸಿಗುತ್ತದೆ. ಹಾಗಾಗಿ ಇಂದಿನ ಸಂದರ್ಶನದಲ್ಲಿ ದೂರಿಗೆ ಅರ್ಹ ಅರ್ನಬ್ ಮಾತ್ರ ! 

ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಸಂದರ್ಶನ ಮಾಡಿದ ಅರ್ನಬ್ ಇಂದು ನಾಪತ್ತೆಯಾಗಿದ್ದರು. ಅಲ್ಲಿ ಆಕ್ರೋಶ , ಆರ್ಭಟ, ಬೊಬ್ಬೆ, ಸಿಟ್ಟು, ಸೆಡವು, ಬೋಧನೆ ಯಾವುದೂ ಇರಲಿಲ್ಲ. ಏಕೆಂದರೆ ಅರ್ನಬ್ ಇಂದು ನಡೆಸಿದ್ದು ಹಾಲಿ ಪ್ರಧಾನಿಯೊಬ್ಬರು ಖಾಸಗಿ ಚಾನಲ್ ಒಂದಕ್ಕೆ ನೀಡಿದ್ದ ' ಪ್ರಪ್ರಥಮ ಐತಿಹಾಸಿಕ ಸಂದರ್ಶನವನ್ನು'.  ಹಾಗಾಗಿ , ಇಂದು ಇದ್ದದ್ದು ಸ್ವಲ್ಪ ನಾಚಿಕೊಂಡ, ಪುಳಕಿತರಾಗಿದ್ದ, ರೋಮಾಂಚನಗೊಂಡಿದ್ದ 'ಸ್ವಾಮಿ'. ಅವರ ಪ್ರತಿ ಪ್ರಶ್ನೆಯಲ್ಲೂ ಸೌಜನ್ಯ ತುಂಬಿ ತುಳುಕುತ್ತಿತ್ತು. ನಯ, ವಿನಯ ಪ್ರತಿ ಪದದಲ್ಲೂ ಎದ್ದು ಕಾಣುತ್ತಿತ್ತು. ಯಾವುದೇ ಕಾರಣಕ್ಕೂ ಸಂಯಮ ಕಳೆದುಕೊಳ್ಳದೆ ನಾನು ಈ ಸಂದರ್ಶನ ಪಾಸಾಗಿಯೇ ಸಿದ್ದ ಎಂದು ರೆಡಿಯಾಗಿ ಬಂದಿದ್ದ ವಿನೀತ ವಿದ್ಯಾರ್ಥಿಯಾಗಿದ್ದರು ಗೋಸ್ವಾಮಿ. 

ಹಾಗಾದರೆ, ಅರ್ನಬ್ ಗೂ ಸಂದರ್ಶನ ನಡೆಸಲು ಗೊತ್ತಿದೆ ಎಂದಾಯಿತು ! ಸಾಮಾನ್ಯವಾಗಿ ಅಧಿಕಾರದಲ್ಲಿರುವವರ ಮುಖವಾಡ ಕಳಚುವಂತಹ ಸಂದರ್ಶನ ನಡೆಸುವುದು ಒಬ್ಬ ಯಶಸ್ವಿ ಪತ್ರಕರ್ತನ ಸಾಮರ್ಥ್ಯ, ಹೆಗ್ಗಳಿಕೆ. ಅಂತಹ ಯಶಸ್ವಿ ಸಂದರ್ಶನವನ್ನು ಇಂದು ನಡೆಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ! ಈ ದೇಶದ ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವ ಮಾಧ್ಯಮ ದೊರೆಯೊಬ್ಬನ ಅಸಲಿ ಮುಖವಾಡವನ್ನು ಇಂದಿನ ಸಂದರ್ಶನದಲ್ಲಿ ಅವರು ಕಳಚಿದ್ದಾರೆ. ಅಲ್ಲಿಗೆ ಅವರು ಅತ್ಯುತ್ತಮ ವಾಗ್ಮಿ, ಮಾತುಗಾರ ಮಾತ್ರವಲ್ಲ  ಅದ್ಭುತ ಸಂದರ್ಶನಕಾರ ಕೂಡ ಹೌದು ಎಂದು ಸಾಬೀತು ಪಡಿಸಿದ್ದಾರೆ.

ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು . 

share
ಸತೀಶ್ ಕುಮಾರ್ , ತುಮಕೂರು
ಸತೀಶ್ ಕುಮಾರ್ , ತುಮಕೂರು
Next Story
X