ಅರ್ನಬ್ ರ ಮೋದಿ ' ನೇರ ಪ್ರಸಾರ' ಸಂದರ್ಶನದಲ್ಲಿ ಹಿಂದಿ ವಾಕ್ಯ ಮಾತನಾಡುವ ಮೊದಲೇ ಇಂಗ್ಲಿಷ್ ಅನುವಾದ ಪ್ರಸಾರ !

ಸೋಮವಾರ ಟೈಮ್ಸ್ ನೌ ನಲ್ಲಿ ಪ್ರಸಾರವಾದ ಪ್ರಧಾನಿ ಮೋದಿ ಅವರ ಎಕ್ಸ್ ಕ್ಲೂಸಿವ್ , ನೇರ ಪ್ರಸಾರ ಸಂದರ್ಶನ ಭಾರೀ ಚರ್ಚೆಯಲ್ಲಿದೆ. ಆದರೆ ಇದು ಸಂದರ್ಶನದಲ್ಲಿ ಎತ್ತಲಾದ ಪ್ರಶ್ನೆ ಹಾಗೂ ನೀಡಲಾದ ಉತ್ತರಗಳಿಗೆ ಸಂಬಂಧಿಸಿದ್ದು. ಸದಾ ತನ್ನ ಎದುರು ಕುಳಿತವರ ಮೇಲೆ ಸವಾರಿ ಮಾಡುವ ಅರ್ನಬ್ ರ ಮೋದಿ ಸಂದರ್ಶನದ ಧಾಟಿ ಬಗ್ಗೆ ಜಾಲತಾಣದಲ್ಲಿ ಭಾರೀ ಚರ್ಚೆ , ವ್ಯಂಗ್ಯ ,ತಮಾಷೆ ವ್ಯಕ್ತವಾಗಿದೆ. ಬಿಜೆಪಿ ಬೆಂಬಲಿಗರು ಇದನ್ನು ಅತ್ಯುತ್ತಮ ಸಂದರ್ಶನ ಎಂದು ಹೊಗಳಿದ್ದರೆ, ಹಲವಾರು ಇದು ಮೋದಿ ಪರ ಸಂದರ್ಶನ ಎಂದು ಟೀಕಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಫೇಸ್ ಬುಕ್ ಪೋಸ್ಟ್ ಗಮನ ಸೆಳೆದಿದೆ. ಈ ಸಂದರ್ಶನದ ' ಬಹುದೊಡ್ಡ ಲೋಪವೊಂದನ್ನು' ಅವರು ಎತ್ತಿ ತೋರಿಸಿದ್ದಾರೆ. ಅದೇನೆಂದರೆ, ಅರ್ನಬ್ ನಡೆಸಿದ್ದು ಮೋದಿ ಅವರ ' ನೇರ ಪ್ರಸಾರದ ( ಲೈವ್ ) ' ಸಂದರ್ಶನ . ಆದರೆ ಮೋದಿ ಅವರು ಹಿಂದಿಯಲ್ಲಿ ಮಾತನಾಡುತ್ತಲೇ ಅದಕ್ಕಿಂತ ಮೊದಲೇ ಅದರ ಇಂಗ್ಲಿಷ್ ಅನುವಾದದ ಸಾಲು ಕೆಳಗೆ ಪ್ರಸಾರವಾಗುತ್ತಿತ್ತು ! ಆದ್ದರಿಂದ ಇದು ನೇರ ಪ್ರಸಾರದ ಸಂದರ್ಶನ ಅಲ್ಲ, ಬದಲಾಗಿ ವ್ಯವಸ್ಥಿತವಾಗಿ ತಯಾರಿ ಮಾಡಿ ರೆಕಾರ್ಡ್ ಮಾಡಿದ ' ನೇರ ಪ್ರಸಾರ' ಸಂದರ್ಶನ ಎಂದು ಭಟ್ ಹೇಳಿದ್ದಾರೆ.
ಅವರ ಪೋಸ್ಟ್ ಇಲ್ಲಿದೆ ನೋಡಿ :





