ಯುರೋ ಕಪ್: ಬೆಲ್ಜಿಯಂ ಕ್ವಾರ್ಟರ್‌ಫೈನಲ್‌ಗೆ

ತೌಲೌಸ್(ಫ್ರಾನ್ಸ್), ಜೂ.27: ಯುರೋ ಕಪ್‌ನಲ್ಲಿ ಹಂಗೇರಿ ವಿರುದ್ಧ 4-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಬೆಲ್ಜಿಯಂ ತಂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ರವಿವಾರ ಇಲ್ಲಿ ನಡೆದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 10ನೆ ನಿಮಿಷದಲ್ಲಿ ಡಿಫೆಂಡರ್ ಟಾಬಿ ಅಲ್ಡರ್‌ವೆರೆಲ್ಡ್ ಹೆಡರ್‌ನ ಮೂಲಕ ಗೋಲು ಖಾತೆ ತೆರೆದರು. ಮಿಕಿ ಬಟ್ಶುಯಿ 78ನೆ ನಿಮಿಷದಲ್ಲಿ ಗೋಲು ಬಾರಿಸಿ ಬೆಲ್ಜಿಯಂನ ಮುನ್ನಡೆಯನ್ನು 2-0ಗೇರಿಸಿದರು.
ಒಂದು ನಿಮಿಷಗಳ ಬಳಿಕ(79ನೆ ನಿಮಿಷ) ಆಕರ್ಷಕ ಗೋಲು ಬಾರಿಸಿದ ಈಡನ್ ಹಝಾರ್ಡ್ ಬೆಲ್ಜಿಯಂ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಲು ನೆರವಾದರು.
ಹೆಚ್ಚುವರಿ ಸಮಯದಲ್ಲಿ(90+) ಗೋಲು ಬಾರಿಸಿದ ಯಾನಿಕ್ ಫೆರೆರಾ ಬೆಲ್ಜಿಯಂ ತಂಡ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ತಲುಪಲು ನೆರವಾದರು. ಶುಕ್ರವಾರ ನಡೆಯಲಿರುವ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂ ತಂಡ ವೇಲ್ಸ್ ತಂಡವನ್ನು ಎದುರಿಸಲಿದೆ.
ಹಂಗೇರಿ ತಂಡ ಕ್ವಾರ್ಟರ್‌ಫೈನಲ್ ಸುತ್ತಿನಲ್ಲೆ ಟೂರ್ನಿಯಿಂದ ಹೊರ ನಡೆದಿದ್ದರೂ ಗ್ರೂಪ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದೆ.





