ಮೆಸ್ಸಿಯ ದಿಢೀರ್ ನಿವೃತ್ತಿಗೆ ಗಾಯದ ಸಮಸ್ಯೆ ಕಾರಣ?

ಈಸ್ಟ್ ರುದರ್‌ಫೋರ್ಡ್(ಅಮೆರಿಕ), ಜೂ.27:ಕಳೆದ ವರ್ಷದಿಂದ ಕಾಡುತ್ತಿದ್ದ ಗಾಯದ ಸಮಸ್ಯೆಯೇ ಮೆಸ್ಸಿಯ ದಿಢೀರ್ ನಿವೃತ್ತಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.
ಕೋಪಾ ಅಮೆರಿಕ ಟೂರ್ನಿ ಆರಂಭಕ್ಕೆ ಮೊದಲು ಹೊಂಡುರಾಸ್ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ ಆಡಲು ಅರ್ಜೆಂಟೀನದಿಂದ ಸ್ಪೇನ್‌ಗೆ ತೆರಳಿದಾಗ ಮೆಸ್ಸಿಗೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿತ್ತು.
ಚಿಲಿ ವಿರುದ್ಧದ ಕೋಪಾ ಅಮೆರಿಕ ಟೂರ್ನಿಯ ಮೊದಲ ಗ್ರೂಪ್ ಪಂದ್ಯದಲ್ಲಿ ಮೆಸ್ಸಿ ಮತ್ತೊಮ್ಮೆ ಬೆನ್ನುನೋವಿಗೆ ತುತ್ತಾಗಿದ್ದರು.
ಮೆಸ್ಸಿ ಫ್ಯಾಕ್ಟ್‌ಫೈಲ್
ಜನನ: ಜೂ.24,1987, ರೊಸಾರಿಯೊ, ಅರ್ಜೆಂಟೀನ
ಬಾರ್ಸಿಲೋನದಲ್ಲಿ ಮೆಸ್ಸಿ ಸಾಧನೆ
*2000ರಲ್ಲಿ 13ನೆ ಹರೆಯದಲ್ಲಿ ಬಾರ್ಸಿಲೋನಕ್ಕೆ ಸೇರ್ಪಡೆ. ಕಿರಿಯರ ವಿಭಾಗದಲ್ಲಿ ಮಿಂಚಿದ ವೆುಸ್ಸಿ 2003ರಲ್ಲಿ 16ರ ಹರೆಯದಲ್ಲಿ ಪೊರ್ಟೊ ವಿರುದ್ಧ ಸೌಹಾರ್ದ ಪಂದ್ಯ ಆಡುವ ಮೂಲಕ ಹಿರಿಯರ ವಿಭಾಗಕ್ಕೆ ಪಾದಾರ್ಪಣೆ.
*2004ರ ಅಕ್ಟೋಬರ್‌ನಲ್ಲಿ ಲಾ ಲಿಗಾಕ್ಕೆ ಪಾದಾರ್ಪಣೆ. ಮೇನಲ್ಲಿ ನೌ ಕ್ಯಾಂಪ್‌ನಲ್ಲಿ ಚೊಚ್ಚಲ ಲಾಲಿಗಾ ಗೋಲು ಬಾರಿಸಿದರು.
*2005-06ರಲ್ಲಿ 17 ಪಂದ್ಯಗಳಲ್ಲಿ 6 ಗೋಲು ದಾಖಲಿಸಿದರು. ಬಾರ್ಸಿಲೋನ ಸತತ ಎರಡನೆ ವರ್ಷ ಲಾಲಿಗಾ ಪ್ರಶಸ್ತಿ ಜಯಿಸಿತು.
*2009ರ ಕ್ಯಾಲೆಂಡರ್ ವರ್ಷದಲ್ಲಿ ಬಾರ್ಸಿಲೋನ ತಂಡ ಚಾಂಪಿಯನ್ಸ್ ಲೀಗ್, ಲಾ ಲಿಗಾ, ಕಿಂಗ್ಸ್ ಕಪ್ ಹಾಗೂ ಕ್ಲಬ್ ವಿಶ್ವಕಪ್ ಸಹಿತ ಆರು ಪ್ರಮುಖ ಟ್ರೋಫಿಗಳನ್ನು ಜಯಿಸಲು ಮೆಸ್ಸಿ ಪ್ರಮುಖ ಪಾತ್ರವಹಿಸಿದರು.
* ಮೊದಲ ಬಾರಿ ಸತತ ನಾಲ್ಕು ಬಾರಿ ‘ವಿಶ್ವದ ವರ್ಷದ ಆಟಗಾರ’ ಪ್ರಶಸ್ತಿ ಜಯಿಸಿದರು.
*2010ರಲ್ಲಿ ಮತ್ತೊಮ್ಮೆ ಲಾ ಲಿಗಾ ಪ್ರಶಸ್ತಿ ಜಯಿಸಿದರು. ವಿಶ್ವದ ಆಟಗಾರ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.
*2011ರ ಚಾಂಪಿಯನ್ಸ್ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ವಿರುದ್ಧ ಬಾರ್ಸಿಲೋನ ತಂಡ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಲು ಮುಖ್ಯ ಪಾತ್ರವಹಿಸಿದರು.
*2010-11ರಲ್ಲಿ ಬಾರ್ಸಿಲೋನ ತಂಡ ಸತತ ಮೂರನೆ ಪ್ರಶಸ್ತಿ ಜಯಿಸಲು ನೆರವಾಗಿದ್ದಾರೆ. *2012ರಲ್ಲಿ ಬಾರ್ಸಿಲೋನ ಲಾಲಿಗಾ ಅಥವಾ ಚಾಂಪಿಯನ್ಸ್ ಲೀಗ್ ಟ್ರೋಫಿ ಉಳಿಸಿಕೊಳ್ಳಲು ವಿಫಲರಾದರೂ ಮೆಸ್ಸಿ ಕ್ಯಾಲೆಂಡರ್ ವರ್ಷದಲ್ಲಿ ಎಲ್ಲ ಸ್ಪರ್ಧೆಗಳಲ್ಲಿ ಒಟ್ಟು 91 ಗೋಲುಗಳನ್ನು ಬಾರಿಸಿದ್ದರು.
*2011-12ರಲ್ಲಿ 50 ಗೋಲುಗಳನ್ನು ಬಾರಿಸಿದ್ದ ಮೆಸ್ಸಿ ಲಾಲಿಗಾ ಸ್ಕೋರ್ ದಾಖಲೆಯನ್ನು ಪತನಗೊಳಿಸಿದ್ದರು.
*2014-15ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮೆಸ್ಸಿ ಬಾರ್ಸಿಲೋನ ತಂಡ ಚಾಂಪಿಯನ್ಸ್ ಲೀಗ್, ಲಾಲಿಗಾ ಹಾಗೂ ಕಿಂಗ್ಸ್ ಕಪ್ ಪ್ರಶಸ್ತಿಗಳನ್ನು ಜಯಿಸಲು ಪ್ರಮುಖ ಪಾತ್ರವಹಿಸಿದರು.
*2015-16ರಲ್ಲಿ ಬಾರ್ಸಿಲೋನ ತಂಡದ ಪರ 8ನೆ ಬಾರಿ ಲಾಲಿಗಾ ಹಾಗೂ ನಾಲ್ಕನೆ ಬಾರಿ ಸ್ಪೇನೀಶ್ ಕಪ್‌ನ್ನು ಜಯಿಸಿದ್ದರು.
ಅರ್ಜೆಂಟೀನದ ಪರ ಮೆಸ್ಸಿ ಸಾಧನೆ
* 2005ರ ವಿಶ್ವ ಯೂತ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೈಜೀರಿಯ ವಿರುದ್ಧ ಎರಡು ಗೋಲು ಬಾರಿಸಿದ ಮೆಸ್ಸಿ ಅರ್ಜೆಂಟೀನ ತಂಡ ಪ್ರಶಸ್ತಿ ಜಯಿಸಲು ನೆರವಾಗಿದ್ದರು.
*ಆಗಸ್ಟ್ 2005ರಲ್ಲಿ ಹಂಗೇರಿ ವಿರುದ್ಧ ಸೌಹಾರ್ದ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪ್ರವೇಶ. ತನ್ನ ಶರ್ಟ್‌ನ್ನು ಎಳೆದ ಎದುರಾಳಿ ಆಟಗಾರನಿಗೆ ಮೊಣಕೈಯಿಂದ ತಿವಿದ ಮೆಸ್ಸಿ ಅವರನ್ನು ಕೆಲವೇ ನಿಮಿಷದಲ್ಲಿ ಮೈದಾನದಿಂದ ಹೊರ ಕಳುಹಿಸಲಾಗಿತ್ತು.
*2006ರ ವಿಶ್ವಕಪ್‌ನಲ್ಲಿ ಮೆಸ್ಸಿ ಮಿಂಚಲಿಲ್ಲ. ಅರ್ಜೆಂಟೀನ ಕ್ವಾರ್ಟರ್‌ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಸೋತಿತ್ತು.
*ಮೆಸ್ಸಿ 2014ರ ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರರಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿ ಜಯಿಸಿದ್ದರು.
*2016ರ ಕೋಪಾ ಅವೆುರಿಕ ಟೂರ್ನಿಯಲ್ಲಿ ಅಮೆರಿಕ ವಿರುದ್ಧದ ಸೆಮಿಫೈನಲ್‌ನಲ್ಲಿ ಮೆಸ್ಸಿ ಅರ್ಜೆಂಟೀನದ ಪರ 55ನೆ ಗೋಲು ಬಾರಿಸಿದರು.
* 100ನೆ ಆವೃತ್ತಿಯ ಕೋಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲಿ ಚಿಲಿ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನ ಸೋತ ಬೆನ್ನಿಗೇ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿಯಾದರು.







