ಏಶ್ಯದಲ್ಲೇ ಅತಿ ದೊಡ್ಡ ಇಫ್ತಾರ್ ಕೂಟ
ಏಶ್ಯದಲ್ಲೇ ಅತಿ ದೊಡ್ಡ ಇಫ್ತಾರ್ ಕೂಟವನ್ನು ಆಯೋಜಿಸಿದ್ದಕ್ಕಾಗಿ ಜಮ್ಮುಕಾಶ್ಮೀರ ರಾಜ್ಯವು ಹೊಸ ದಾಖಲೆಯನ್ನು ನಿರ್ಮಿಸಿದೆ. ಶನಿವಾರ ಸುಂದರವಾದ ದಾಲ್ ನದಿಯ ದಂಡೆಯುದ್ದಕ್ಕೂ 3,500ಕ್ಕೂ ಅಧಿಕ ಮಂದಿ 5 ಸಾವಿರ ಅಡಿ ವಿಸ್ತೀರ್ಣದವರೆಗೆ ಸಾಲಾಗಿ ಕುಳಿತು ಈ ಬೃಹತ್ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದರು. ‘ಲೌಡ್ ಬೀಟಲ್’ ಎಂಬ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ವಿವಿಧ ನಾಗರಿಕ ಸಂಘಟನೆಗಳು ಹಾಗೂ ಉದ್ಯಮ ಸಂಸ್ಥೆಗಳು ಸಹಕರಿಸಿದ್ದವು.
Next Story





