ಗೋವಿನ ಮೂತ್ರದಲ್ಲಿ ಚಿನ್ನ ಪತ್ತೆ ಹಚ್ಚಿದ ವಿಜ್ಞಾನಿಗಳು!

ಜುನಗಢ, ಜೂ.28: ಗಿರ್ ಗೋವಿಗೆ ಈಗ ಚಿನ್ನದ ಬೆಲೆ ಬಂದಿದೆ. ಜುನಗಢ ಕೃಷಿ ವಿಶ್ವ ವಿದ್ಯಾಲಯದ(ಜೆಎಯು) ವಿಜ್ಞಾನಿಗಳು ಕಳೆದ ನಾಲ್ಕು ವರ್ಷಗಳಿಂದ ನಡೆಸಿದ ಸಂಶೋಧನೆಯಲ್ಲಿ ಗಿರ್ ಗೋವುಗಳ ಮೂತ್ರಗಳಲ್ಲಿ ಚಿನ್ನ ಇರುವುದನ್ನು ದೃಢಪಡಿಸಿದ್ದಾರೆ.
400 ಗಿರ್ ಗೋವುಗಳ ಮೂತ್ರಗಳ ಮಾದರಿಯನ್ನು ಜೆಎನ್‌ಯು ಆಹಾರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಿದಾಗ ಒಂದು ಲೀಟರ್ ಮೂತ್ರದಲ್ಲಿ ಮೂರರಿಂದ 10 ಮಿಲಿ ಗ್ರಾಂನಷ್ಟು ಚಿನ್ನದ ಅಂಶವಿರುವುದು ಪತ್ತೆಯಾಗಿದೆ.
‘‘ಗೋವಿನ ಮೂತ್ರದಲ್ಲಿ ಚಿನ್ನದ ಅಂಶವಿದೆ ಎಂದು ಪೂರ್ವಜರು ಹೇಳುತ್ತಿರುವುದನ್ನು ನಾವೆಲ್ಲಾ ಕೇಳಿದ್ದೇವೆ. ಆದರೆ, ಇದು ವೈಜ್ಞಾನಿಕವಾಗಿ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ನಾವು ಗೋವಿನ ಮೂತ್ರದ ಬಗ್ಗೆಯೇ ಸಂಶೋಧನೆ ನಡೆಸಲು ನಿರ್ಧರಿಸಿದೆವು. ನಾವು ಗಿರ್ ಗೋವಿನ 400 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಿದ್ದೇವೆ. ಇದರಲ್ಲಿ ಚಿನ್ನದ ಕುರೂಹನ್ನು ಪತ್ತೆ ಹಚ್ಚಿದ್ದೇವೆ’’ ಎಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಡಾ. ಬಿ.ಐ. ಗೊಲಾಕಿಯಾ ಹೇಳಿದ್ದಾರೆ.
‘‘ಸಂಶೋಧಕರು ಒಂಟೆ, ಕೋಣಗಳು, ಕುರಿ ಹಾಗೂ ಆಡುಗಳ ಮೂತ್ರಗಳ ಮಾದರಿಯನ್ನು ಪರೀಕ್ಷೆ ನಡೆಸಿದ್ದು, ಇದರಲ್ಲಿ ಯಾವುದೇ ರೋಗ ನಿರೋಧಕ ಅಂಶಗಳಿಲ್ಲ. ಗಿರ್ ಗೋವಿನ ಮೂತ್ರದಲ್ಲಿ 388 ಔಷಧೀಯ ಗುಣಗಳಿವೆ’’ ಎಂದು ಡಾ.ಬಿ.ಐ. ಗೊಲಾಕಿಯಾ ಹೇಳಿದ್ದಾರೆ.





