ಮಾಣಿ:ಸ್ಕೂಟರ್ ಗೆ ಕಂಟೈನರ್ ಢಿಕ್ಕಿ; ಮಹಿಳೆ ಗಂಭೀರ
ಓವರ್ ಟೇಕ್ ಭರದಲ್ಲಿ ಘಟನೆ; ಇಬ್ಬರಿಗೆ ಗಾಯ,

ಬಂಟ್ವಾಳ, ಜೂ. 28: ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಕಂಟೈನರ್ ಲಾರಿಯೊಂದು ಆಕ್ಟಿವಾ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನಲ್ಲಿ ಸಂಭವಿಸಿದೆ.
ಅಪಘಾತದಿಂದ ಗಾಯಗೊಂಡಿರುವ ಸವಾರರನ್ನು ಉಪ್ಪಿನಂಗಡಿ ನಿವಾಸಿಗಳೆಂದು ಹೇಳಲಾಗಿದ್ದು ಹೆಸರು, ವಿಳಾಸ ತಿಳಿದುಬಂದಿಲ್ಲ. ಸ್ಕೂಟರ್ ಹಿಂಬದಿಯಲ್ಲಿದ್ದ ಮಹಿಳೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಉಪ್ಪಿನಂಗಡಿಯಿಂದ ಕಲ್ಲಡ್ಕ ಕಡೆಗೆ ಬರುತ್ತಿದ್ದ ಸ್ಕೂಟರ್ ಗೆ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
Next Story





