ಕೊಹ್ಲಿಗೆ ಉಡುಗೊರೆ ಕಳುಹಿಸಿಕೊಟ್ಟ ಜರ್ಮನಿಯ ಫುಟ್ಬಾಲ್ ಆಟಗಾರ ಕ್ರೂಸ್

ಪ್ಯಾರಿಸ್, ಜೂ.28: ಜರ್ಮನಿಯ ಮಿಡ್‌ಫೀಲ್ಡರ್ ಟೋನಿ ಕ್ರೂಸ್ ಇದೀಗ 2016ರ ಯುರೋ ಕಪ್‌ನಲ್ಲಿ ಕ್ವಾರ್ಟರ್ ಫೈನಲ್ ಪಂದ್ಯದ ತಯಾರಿಯಲ್ಲಿ ಹೆಚ್ಚು ವ್ಯಸ್ತರಾಗಿದ್ದರೂ ಭಾರತದ ಟೆಸ್ಟ್ ತಂಡದ ನಾಯಕ, ಜರ್ಮನಿ ತಂಡದ ಕಟ್ಟಾ ಅಭಿಮಾನಿ ವಿರಾಟ್ ಕೊಹ್ಲಿಗೆ ನೀಡಿದ್ದ ಭರವಸೆಯನ್ನು ಮಾತ್ರ ಮರೆತಿಲ್ಲ.
ಯುರೋ 2016ರ ಟೂರ್ನಿ ಆರಂಭಕ್ಕೆ ಮೊದಲೇ ತಾನು ಜರ್ಮನಿಗೆ ಬೆಂಬಲ ನೀಡುವೆ ಎಂದು 18 ನಂಬರ್‌ನ ಜರ್ಮನಿ ಜರ್ಸಿಯನ್ನು ಧರಿಸಿದ್ದ ಕೊಹ್ಲಿ ಟ್ವೀಟ್ ಮಾಡಿದ್ದರು. ಕೊಹ್ಲಿ ಭಾರತೀಯ ತಂಡದಲ್ಲಿ 18 ನಂಬರ್‌ನ ಜರ್ಸಿಯನ್ನೇ ಧರಿಸುತ್ತಾರೆ.
ಕೊಹ್ಲಿಯ ಜರ್ಸಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಕ್ರೂಸ್, ವಿಶೇಷ ಉಡುಗೊರೆ ಕಳುಹಿಸಿಕೊಡುವುದಾಗಿ ಕೊಹ್ಲಿಗೆ ಭರವಸೆ ನೀಡಿದ್ದರು.
26ರ ಹರೆಯದ ಮಿಡ್‌ಫೀಲ್ಡರ್ ಕ್ರೂಸ್ ನುಡಿದಂತೆ ನಡೆದುಕೊಂಡಿದ್ದು, ಅವರು ಕೊಹ್ಲಿಗೆ ತನ್ನ ಸಹಿಯಿರುವ ಜರ್ಸಿಯನ್ನು ಕಳುಹಿಸಿಕೊಟ್ಟಿದ್ದಾರೆ. ತಕ್ಷಣವೇ ಟ್ವೀಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕೊಹ್ಲಿ ಜರ್ಸಿಯನ್ನು ಸ್ವೀಕರಿಸಿ ಸಂಭ್ರಮಿಸಿದ್ದೇನೆ ಎಂದಿದ್ದಾರೆ.
Next Story





