ಜೆಡಿಎಸ್‌ಗೆ 11 ಕ್ಷೇತ್ರಗಳಲ್ಲಿ ಗೆಲುವು
ಸೊರಬ ತಾಪಂ ಚುನಾವಣೆ

ಸೊರಬ, ಜೂ. 28: ತೀವ್ರ ಕುತೂಹಲ ಕೆರಳಿಸಿದ್ದ ಸೊರಬ ತಾಲೂಕು ಪಂಚಾಯತ್ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಜೆಡಿಎಸ್ 11 ಕ್ಷೇತ್ರಗಳಲ್ಲಿ ವಿಜಯಗಳಿಸುವುದರೊಂದಿಗೆ ಸ್ಪಷ್ಟ ಬಹುಮತ ಪಡೆದಿದ್ದರೆ, ಬಿಜೆಪಿ 5 ಸ್ಥಾನಗಳನ್ನು ಗೆದ್ದು, ವಿರೋಧ ಪಕ್ಷದಲ್ಲಿದ್ದರೆ, ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ತಾಲೂಕಿನಲ್ಲಿ ತನ್ನ ಅಸ್ತಿತ್ವ ತೋರಿಸಿದೆ. ಜೆಡಿಎಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಶಾಸಕ ಮಧುಬಂಗಾರಪ್ಪನವರ ಕೀರೀಟಕ್ಕೆ ಮತ್ತೊಂದು ಗರಿ ಬಂದಂತಾಗಿದೆ. ಜೆಡಿಎಸ್‌ನ ವಿಜಯಿ ಅಭ್ಯರ್ಥಿಗಳು: ಶಕುನವಳ್ಳಿ ಕ್ಷೇತ್ರ: ಅಂಜಲಿ ಸಂಜೀವ್ ಲಕ್ಕವಳ್ಳಿ, ಅಗಸನಹಳ್ಳಿ ಕ್ಷೇತ್ರ: ಡಿ.ನರೇಂದ್ರ ಒಡೆಯರ್, ಭಾರಂಗಿ ಕ್ಷೇತ್ರ:
ಲತಾ ಸುರೇಶ್, ಚಂದ್ರಗುತ್ತಿ ಕ್ಷೇತ್ರ: ನಾಗರಾಜ ಎನ್.ಜೆ., ಎಣ್ಣೆಕೊಪ್ಪ ಕ್ಷೇತ್ರ: ಸುರೇಶ್ ಎಚ್., ಹಳೇಸೊರಬ ಕ್ಷೇತ್ರ: ಇಂದಿರಾ ಕೃಷ್ಣಪ್ಪ, ಕುಬಟೂರು ಕ್ಷೇತ್ರ: ರೇಣುಕಾ ಮಂಜುನಾಥ, ಉಳವಿ ಕ್ಷೇತ್ರ: ನಯನ ಶ್ರೀಪಾದ ಹೆಗಡೆ, ಹೊಸಬಾಳೆ ಕ್ಷೇತ್ರ:
ಜ್ಯೋತಿ ನಾರಾಯಣಪ್ಪ, ಹರೀಶಿ ಸುನೀಲ ಗೌಡ, ಗುಡವಿ ಕ್ಷೇತ್ರ:
ಮಂಜಮ್ಮ ರಾಮಪ್ಪಆಯ್ಕೆಯಾಗಿದ್ದಾರೆ. ಬಿಜೆಪಿ ವಿಜಯಿ ಅಭ್ಯರ್ಥಿಗಳು: ಉದ್ರಿ ಕ್ಷೇತ್ರ: ಬಂಗಾರಪ್ಪ ಗೌಡ ಕೆ.ಎಸ್., ಮಾವಲಿ ಕ್ಷೇತ್ರ: ಮೀನಾಕ್ಷಿ ನಿರಂಜನ್, ತೆಲಗುಂದ ಕ್ಷೇತ್ರ: ಕಮಲಾ ಕುಮಾರ್, ಜಡೆ ಕ್ಷೇತ್ರ: ವಿಜಯ ಕುಮಾರ್ ಹೊಸಕೊಪ್ಪ, ಕುಪ್ಪಗಡ್ಡೆ ಕ್ಷೇತ್ರ: ಪುರುಷೋತ್ತಮ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ವಿಜಯಿ ಅಭ್ಯರ್ಥಿಗಳು:
ತತ್ತೂರು ಕ್ಷೇತ್ರ: ಮೀನಾಕ್ಷಿ ಆರ್., ಅನವಟ್ಟಿ ಕ್ಷೇತ್ರ: ಪಿ.ಹನುಮಂತಪ್ಪ, ಶಿಗ್ಗಾ ಕ್ಷೇತ್ರ: ನಾಗರಾಜ ಚಿಕ್ಕಸವಿ ಆಯ್ಕೆಯಾಗಿದ್ದಾರೆ. ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿ ಕಾರಿಗಳು ಪ್ರಮಾಣ ಪತ್ರ ವಿತರಿಸಿದರು. ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಕವಿತಾ ಯೋಗಪ್ಪನವರ್, ಜಿಪಂ ಎಇಇ ಎನ್.ನಂಜುಂಡಸ್ವಾಮಿ ಸಹಾಯಕ ಚುನಾವಣಾಧಿಕಾರಿಗಳಾಗಿ ಸಂತೋಷ್ ಕುಮಾರ್ ಹಾಗೂ ಟಿ.ಅಂಬಾಜಿ ಕಾರ್ಯನಿರ್ವಹಿಸಿದರು.
ಚುನಾವಣೆಯ ಮತ ಎಣಿಕೆ ಕಾರ್ಯವು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆ 8ರಿಂದ ಆರಂಭವಾಗುತ್ತಿದ್ದಂತೆ ವಿವಿಧ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರು ತಂಡೋಪತಂಡವಾಗಿ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಕುತೂಹಲದಿಂದ ಫಲಿತಾಂಶ ವೀಕ್ಷಿಸಿದರು. ತಾಪಂ ಚುನಾವಣೆಯ ಫಲಿತಾಂಶ ಜನರ ನಿರೀಕ್ಷೆಯಂತೆ ಮಧ್ಯಾಹ್ನ 12:30ರ ವರೆಗೆ ನಡೆದು ಅಂತಿಮ ಫಲಿತಾಂಶ ಹೊರಬಿದಿದ್ದೆ. ವಿಶೇಷ ಎಂಬಂತೆ ತಾಲೂಕಿನ ಜನರು ಈ ಮೊದಲೆ ಊಹಿಸಿದಂತೆ ಫಲಿತಾಂಶ ಬಂದಿದೆ. 19 ತಾಪಂ ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಸಾಧಿಸಿದ್ದು, ಕಳೆದ ಬಾರಿಗಿಂತ ಹೆಚ್ಚುವರಿಯಾಗಿ 5 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಶಾಸಕ ಮಧು ಬಂಗಾರಪ್ಪ ರಾಜಕೀಯ ಚಾಣಾಕ್ಷತನ ಮೆರೆದಿದ್ದಾರೆ. ಬಿಜೆಪಿ ಕೇವಲ 5 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಕಳೆದ ಬಾರಿಗಿಂತ ಒಂದು ಕ್ಷೇತ್ರವನ್ನು ಕಳೆದುಕೊಂಡು ತುಸು ಚಿಂತೆಯನ್ನು ಉಂಟುಮಾಡಿದೆ. ಕಾಂಗ್ರೆಸ್ 3 ಕ್ಷೇತ್ರಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕಳೆದ ಬಾರಿಗಿಂತ 3 ಕ್ಷೇತ್ರಗಳನ್ನು ಕಳೆದುಕೊಂಡು ಶೇ. 50ರಷ್ಟು ತಾಪಂ ಕ್ಷೇತ್ರಗಳನ್ನು ಕಳೆದುಕೊಂಡಿದೆ.
ತಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಈಗಾಗಲೇ ಪ್ರಕಟಗೊಂಡಿದ್ದು, ಅದರನ್ವಯ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆ ಅಲಂಕರಿಸಲಿದ್ದಾರೆ. ಪ್ರಸ್ತುತ ಫಲಿತಾಂಶವನ್ನು ಗಮನಿಸಿದಾಗ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಅಲಂಕರಿಸುವುದು ಬಹುತೇಕ ನಿಶ್ಚಿತವಾಗಿದೆ. ಆದರೆ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಜೆಡಿಎಸ್‌ನಲ್ಲಿ ಯಾವುದೇ ಮಹಿಳಾ ಚುನಾಯಿತ ಪ್ರತಿನಿಧಿಗಳು ಇಲ್ಲದೇ ಇರುವುದು ಆತಂಕಕ್ಕೀಡು ಮಾಡಿದೆ. ಈ ಸ್ಥಾನವನ್ನು ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಸೂಕ್ತ ಅಭ್ಯರ್ಥಿಗಳಿದ್ದು, ಅವರಲ್ಲಿ ಬಿಜೆಪಿ ಅಭ್ಯರ್ಥಿ ಉಪಾಧ್ಯಕ್ಷರಾಗಬಹುದು ಎಂಬ ಊಹೆ ಇದೆ. ಅಧ್ಯಕ್ಷ ಸ್ಥಾನವನ್ನು ಬಹು ನಿರೀಕ್ಷಿತ ಉಳಿವಿ ಕ್ಷೇತ್ರದ ಜೆಡಿಎಸ್ ವಿಜೇತ ಅಭ್ಯರ್ಥಿ ನಯನ ಶ್ರೀಪಾದ ಹೆಗಡೆ ಅಧ್ಯಕ್ಷ ಗಾದಿ ಏರುವ ಸಾಧ್ಯತೆ ಹೆಚ್ಚಿದೆ.







