ಅಂಧ ಮಕ್ಕಳ ಶಾಲೆಯಲ್ಲಿ ಇಫ್ತಾರ್ ಕೂಟ

ಚಿಕ್ಕಮಗಳೂರು, ಜೂ.28: ಕರ್ನಾಟಕ ರಾಜ್ಯ ಹಝರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ವತಿಯಿಂದ ನಗರದ ಅಂಧ ಮಕ್ಕಳ ಶಾಲೆಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಂಶೀದ್ ಖಾನ್ ಮಾತನಾಡಿ, ಇಫ್ತಾರ್ ಕೂಟವನ್ನು ಏರ್ಪಡಿಸುವುದು ರಮಝಾನ್ ತಿಂಗಳಲ್ಲಿ ಶ್ರೇಷ್ಟವಾದುದು. ಈ ಶಾಲೆಯ ಮಕ್ಕಳು ತಮ್ಮ ಅಂಧಕಾರದಿಂದ ಹೊರಬಂದು ಬೆಳಕಿನ ಪ್ರಪಂಚವನ್ನು ನೋಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಹಾಗೆಯೇ ಪ್ರಪಂಚದ ಎಲ್ಲಾ ಜನರೂ ಸೌಹಾರ್ದತೆಯಿಂದ ಬಾಳಬೇಕು. ಮೇಲು ಕೀಳು ಎಂಬ ಭೇದವಿಲ್ಲ. ಎಲ್ಲ ಧರ್ಮದ ಜನರ ಕಷ್ಟಗಳೂ ಒಂದೇ.ರಮಝಾನ್ ತಿಂಗಳ ಉಪವಾಸದಿಂದ ಸರ್ವಜನರ ಕಷ್ಟಗಳು ನಶಿಸಿ ಸುಖ ಸಂತೋಷದಿಂದ ಬಾಳುವಂತಾಗಲಿ. ದೇಶದಾದ್ಯಂತ ಉತ್ತಮ ಮಳೆ-ಬೆಳೆಗಳು ಆಗಿ ಜನರಿಗೆ ಸುಖ ಸಂತೋಷವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಝರತ್ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆಯ ನಗರಾಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷ ವೌಸೀನ್, ನಗರ ಉಪಾದ್ಯಕ್ಷ ಸಜೀಲ್, ಅಶ್ರಪ್, ನಾಸೀರ್ ಹಾಗೂ ಸರ್ದಾರ್ ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.





