ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್: ಶೂಟರ್ ಸಂಜೀವ್‌ಗೆ ರಜತ

ಹೊಸದಿಲ್ಲಿ, ಜೂ.28: ಐಎಸ್‌ಎಸ್‌ಎಫ್ ವರ್ಲ್ಡ್‌ಕಪ್‌ನಲ್ಲಿ ಭಾರತದ ಶೂಟರ್ ಸಂಜೀವ್ ರಾಜ್‌ಪೂತ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಮಂಗಳವಾರ ನಡೆದ ಪುರುಷರ 50 ಮೀ. ರೈಫಲ್ 3 ಪೊಶಿಶನ್ ಸ್ಪರ್ಧೆಯಲ್ಲಿ 456.9 ಅಂಕವನ್ನು ಗಳಿಸಿದ್ದ ರಾಜ್‌ಪೂತ್ ಬೆಳ್ಳಿ ಪದಕ ಜಯಿಸಿದರು. ರಿಯೋ ಒಲಿಂಪಿಕ್ ಗೇಮ್ಸ್‌ಗೆ ಮೊದಲು ನಡೆದ ಕೊನೆಯ ಶೂಟಿಂಗ್ ವಿಶ್ವಕಪ್ ಇದಾಗಿತ್ತು.
ಕ್ರೊಯೇಷಿಯಾದ ಪೀಟರ್ ಗ್ರಾಸಾ 457.5 ಅಂಕ ಗಳಿಸುವುದರೊಂದಿಗೆ ಚಿನ್ನದ ಪದಕವನ್ನು ಜಯಿಸಿದ್ದರು. ಕೊರಿಯಾದ ಹಿಯೊನ್‌ಜುನ್ ಕಿಮ್ 455.5 ಅಂಕ ಗಳಿಸಿ ಕಂಚಿನ ಪದಕ ಗಳಿಸಿದರು.
ರಾಜ್‌ಪೂತ್ ಅರ್ಹತಾ ಸುತ್ತಿನಲ್ಲಿ 1167 ಅಂಕ ಗಳಿಸಿ ಏಳನೆ ಸ್ಥಾನ ಪಡೆದಿದ್ದರು. ಗಗನ್ ನಾರಂಗ್(1161) 23ನೆ ಹಾಗೂ ಚೈನ್ ಸಿಂಗ್(1159) 32ನೆ ಸ್ಥಾನ ಪಡೆದಿದ್ದರು.
Next Story





