ಫೆಡರರ್, ಮುಗುರುಝ ದ್ವಿತೀಯ ಸುತ್ತಿಗೆ ಪ್ರವೇಶ
ವಿಂಬಲ್ಡನ್ ಚಾಂಪಿಯನ್‌ಶಿಪ್

ಲಂಡನ್, ಜೂ.28: ಏಳು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಎರಡನೆ ಸುತ್ತಿಗೆ ತಲುಪಿದ್ದಾರೆ.
ಸೋಮವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಫೆಡರರ್ ಅರ್ಜೆಂಟೀನದ ಗುಡೊ ಪೆಲ್ಲಾ ವಿರುದ್ಧ 7-6(7/5), 7-6(7/3) ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ಈ ವರ್ಷ ವಿಪರೀತ ಗಾಯದ ಸಮಸ್ಯೆಯನ್ನು ಎದುರಿಸಿರುವ ಫೆಡರರ್ ಈವರ್ಷ ಗ್ರಾಸ್-ಕೋರ್ಟ್‌ನ ಗ್ರಾನ್‌ಸ್ಲಾಮ್‌ನಲ್ಲಿ ಆಡಿದ್ದ ತನ್ನ ಮೊದಲ ಪಂದ್ಯದಲ್ಲಿ ಲಯ ಹಾಗೂ ಆತ್ಮವಿಶ್ವಾಸದ ಕೊರತೆಯಿತ್ತು.
ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಗಾರ್ಬೈನ್ ಮುಗುರುಝ ಇಟಲಿಯ ಕಾಮಿಲಾ ಜಿಯೊರ್ಗಿ ಅವರನ್ನು 6-2, 5-7, 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.
2015ರ ಟೂರ್ನಿಯಲ್ಲಿ ರನ್ನರ್-ಅಪ್ ಆಗಿದ್ದ ಸ್ಪೇನ್ ಆಟಗಾರ್ತಿ ಮುಗುರುಝ ಮುಂದಿನ ಸುತ್ತಿನಲ್ಲಿ ಸ್ಲೊವಾಕಿಯದ ಜಾನಾ ಸೆಪೆಲೊವ್‌ರನ್ನು ಎದುರಿಸಲಿದ್ದಾರೆ.
Next Story





