ಕಡಲ್ಕೊರೆತಕ್ಕೆ ಕೊನೆಯಿಲ್ಲವೇ?
ಮಾನ್ಯರೆ,
ಪ್ರತೀ ವರ್ಷ ಮಳೆಗಾಲದಲ್ಲಿ ಕರ್ನಾಟಕದ ಕರಾವಳಿಗರಿಗೆ ದುಃಸ್ವಪ್ನವಾಗಿರುವ ಕಡಲ್ಕೊರೆತ ಸಮಸ್ಯೆ ಈ ಬಾರಿಯೂ ಬೆಂಬಿಡದಿರುವುದು ಕರಾವಳಿಗರ ದುರಂತ.
ಪ್ರತೀ ವರ್ಷ ಮಳೆಗಾಲದಲ್ಲಿ ಹಲವಾರು ಮಂದಿ ಮನೆ-ಜಾನುವಾರುಗಳನ್ನು ಕಳೆದು ಕೊಂಡು ನಿರ್ವಸಿತರಾಗುತ್ತಿದ್ದರೂ ಇದುವರೆಗೆ ಬಂದ ಯಾವ ಸರಕಾರವೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಿಕೊಡದಿದ್ದುದು ಕರಾವಳಿಗರ ದೌರ್ಭಾಗ್ಯ.
ಮಳೆಗಾಲದಲ್ಲಿ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಮಳೆಗಾಲ ಕಳೆದೊಡನೆ ಎಲ್ಲವನ್ನೂ ಮರೆತುಬಿಡುತ್ತಾರೆ. ಇನ್ನೂ ಹೆಚ್ಚೆಂದರೆ ಕಡಲಿಗೊಂದಿಷ್ಟು ಕಲ್ಲು ಸುರಿದು ಸಮಸ್ಯೆ ಮರೆಮಾಚಲು ಯತ್ನಿಸುತ್ತಾರೆ.
ಕರಾವಳಿಯ ಎಲ್ಲ ಜನಪ್ರತಿನಿಧಿಗಳು ಈ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆಸಿ ಮುಖ್ಯಮಂತ್ರಿಗಳಿಗೆ ಸಮಸ್ಯೆಯ ಆಳದ ಅರಿವು ಮೂಡಿಸಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಈ ಮಳೆಗಾಲದಲ್ಲಾದರೂ ದೊರಕಿಸಿಯಾರೇ?
-ಕೆ. ಎನ್. ಸಾಲ್ಯಾನ್,
ಮಂಗಳೂರು
Next Story





