Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಎಲ್ಲ 7 ಶಿಖರಗಳನ್ನು ಏರಿದ ಪ್ರಪ್ರಥಮ...

ಎಲ್ಲ 7 ಶಿಖರಗಳನ್ನು ಏರಿದ ಪ್ರಪ್ರಥಮ ಅರಬ್ ಮಹಿಳೆ

ಫೆಲೆಸ್ತೀನ್ ಮೂಲದ ಸುಝಾನ್ ಅಲ್ ಹೂಬಿ

ವಾರ್ತಾಭಾರತಿವಾರ್ತಾಭಾರತಿ28 Jun 2016 11:52 PM IST
share
ಎಲ್ಲ 7 ಶಿಖರಗಳನ್ನು ಏರಿದ ಪ್ರಪ್ರಥಮ ಅರಬ್ ಮಹಿಳೆ

ಶಾರ್ಜಾ, ಜೂ. 28: ಫೆಲೆಸ್ತೀನ್ ಮೂಲದ ಸಾಹಸಿ ಸುಝಾನ್ ಅಲ್ ಹೂಬಿ ಇತ್ತೀಚೆಗೆ ಅಲಾಸ್ಕಾದ ವೌಂಟ್ ದೆನಾಲಿ ಶಿಖರದ ತುತ್ತ ತುದಿಯನ್ನು ತಲುಪಿದರು. ಆಗ ವೌಂಟ್ ಕಿಲಿಮಂಜಾರೋದಿಂದ ಹಿಡಿದು ವೌಂಟ್ ಎವರೆಸ್ಟ್ ತನಕದ ವಿಶ್ವದ ಎಲ್ಲ ಏಳು ಶಿಖರಗಳನ್ನು ಯಶಸ್ವಿಯಾಗಿ ಏರಿದ ಪ್ರಪ್ರಥಮ ಅರಬ್ ಮಹಿಳೆಯಾಗಿ ಅವರು ಇತಿಹಾಸ ಸೃಷ್ಟಿಸಿದರು.
ಶಾರ್ಜಾದಲ್ಲಿ ತನ್ನ ಸ್ವಂತ ಸಾಹಸ ಟ್ರಾವೆಲ್ ಕಂಪೆನಿಯೊಂದನ್ನು ಹೊಂದಿರುವ ಸುಝಾನ್ ತನ್ನಂತೆಯೇ ಇತರ ಮಹಿಳೆಯರು, ಅದರಲ್ಲೂ ಮುಖ್ಯವಾಗಿ ಅರಬ್ ಮಹಿಳೆಯರು ಇಂತಹ ಸಾಧನೆ ಮಾಡಲು ಮುಂದೆ ಬರಬೇಕೆಂದು ತಾನು ಬಯಸುತ್ತೇನೆ ಎಂದು ಹೇಳುತ್ತಾರೆ.
ಮೂರು ವಿಫಲ ಯತ್ನಗಳ ಬಳಿಕ ನಾಲ್ಕನೆ ಯತ್ನದಲ್ಲಿ ದೆನಾಲಿ ಶಿಖರವೇರಲು ಸಫಲರಾಗಿರುವ ಸುಝಾನ್ ತನ್ನ ಸಾಧನೆಯ ಬಗ್ಗೆ ಹೆಮ್ಮೆಯಿದೆ ಎಂದು ಹೇಳುತ್ತಾರೆ. ಹಿಂದಿನ ವೈಫಲ್ಯಗಳಿಂದ ತಾನು ಯಾವತ್ತೂ ಕಂಗೆಟ್ಟಿಲ್ಲವೆಂದು ಹೇಳುವ ಆಕೆ ತನ್ನ ಆತ್ಮವಿಶ್ವಾಸವೇ ತನ್ನ ಶಕ್ತಿಯಾಗಿದೆ ಎಂದು ಹೇಳಲು ಮರೆಯುವುದಿಲ್ಲ.
‘‘ಮೈನಸ್ 30 ಡಿಗ್ರಿ ಉಷ್ಣಾಂಶದಲ್ಲಿ ಮಲಗುವುದು ಯಾವತ್ತೂ ತಮಾಷೆಯಲ್ಲ; ಹಾಗೆಯೇ ಗಂಟೆಗೆ 120 ಕಿ.ಮೀ. ವೇಗದಲ್ಲಿ ಮುನ್ನುಗ್ಗುವ ಗಾಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹಾಗೂ ಬಿರುಗಾಳಿಯ ವಾತಾವರಣದಲ್ಲಿ ಟೆಂಟ್ ನಿರ್ಮಿಸುವುದು ಅಷ್ಟೇನೂ ಸುಲಭವಲ್ಲ. ಶೌಚಾಲಯವಿಲ್ಲದೆ ಹಾಗೂ ಸ್ನಾನ ಮಾಡದೆ ಇರುವುದೂ ಸುಲಭ ಸಾಧ್ಯವಲ್ಲ’’ ಎಂದು ತಮ್ಮ ಶಿಖರಾರೋಹಣದ ಅನುಭವವನ್ನು ಮೆಲುಕು ಹಾಕುತ್ತಾ ಅವರು ಹೇಳುತ್ತಾರೆ. ‘‘ನನ್ನ ಮೇಲೆ ನನಗಿದ್ದ ಬಲವಾದ ನಂಬಿಕೆಯೇ ಹಲವು ಪ್ರತಿಕೂಲ ವಾತಾವರಣಗಳಲ್ಲಿ ನನಗೆ ಸಹಾಯ ಮಾಡಿತು’’ ಎನ್ನುತ್ತಾರೆ ಸುಝಾನೆ. ಇಂತಹ ಸಾಹಸ ಕೃತ್ಯಗಳಲ್ಲಿ ನೋವಿನ ಬಳಿಕ ಸಿಗುವ ಆನಂದವನ್ನು ಅನುಭವಿಸುವುದೇ ಒಂದು ದೊಡ್ಡ ಸಂತೋಷ ಎಂದವರು ವಿವರಿಸುತ್ತಾರೆ. ‘‘ಏಳು ಶಿಖರಗಳನ್ನು ಏರಬೇಕೆಂದು ನಾನೇನೂ ಯೋಜನೆ ಹಾಕಿಕೊಂಡಿರಲಿಲ್ಲ. ಆದರೆ ಒಂದು ಶಿಖರದ ನಂತರ ಇನ್ನೊಂದು ಶಿಖರವನ್ನೇರಿದಾಗ ಹಾಗೂ ನಾನು ವೌಂಟ್ ಎವರೆಸ್ಟ್ ಏರಲು ಸಫಲಳಾದಾಗ ಎಲ್ಲ ಏಳು ಶಿಖರಗಳನ್ನು ಆರೋಹಣ ಮಾಡಬಾರದೇಕೆ ಎಂದು ಯೋಚಿಸಿದೆ. ಈಗ ನನ್ನ ಕನಸು ಸಾಕಾರಗೊಂಡಿದೆ’’ ಎನ್ನುತ್ತಾರೆ ಸುಝಾನ್.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X