ತಪ್ಪಿಸಿಕೊಂಡ ಬಾಲಕರು ಮತ್ತೆ ಬಾಲಮಂದಿರಕ್ಕೆ
ಮಂಗಳೂರು, ಜೂ.28: ಸೋಮವಾರ ಬಾಲಮಂದಿರಕ್ಕೆ ಸೇರಿಸಲಾಗಿದ್ದ ಬಾಲಕರಿಬ್ಬರು ಮಂಗಳವಾರ ಬೆಳಗ್ಗೆ ತಪ್ಪಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪೊಲೀಸರು ಪತ್ತೆ ಹಚ್ಚಿ ಮತ್ತೆ ಬಾಲಮಂದಿಕ್ಕೆ ಸೇರಿಸಿದ ಘಟನೆ ಬೋಂದೆಲ್‌ನಲ್ಲಿ ನಡೆದಿದೆ.
ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಅಪ್ರಾಪ್ತ ಬಾಲಕರು ಕೂಲಿಕೆಲಸ ಮಾಡುತ್ತಿದ್ದು ಅವರನ್ನು ಚೈಲ್ಡ್‌ಲೈನ್ ಸಿಬ್ಬಂದಿ ಸೋಮವಾರ ಬೋಂದೆಲ್‌ನ ಬಾಲಮಂದಿರಕ್ಕೆ ಸೇರಿಸಿದ್ದರು. ಮಂಗಳವಾರ ಬೆಳಗ್ಗೆ ಇಬ್ಬರೂ ಬಾಲಕರು ತಪ್ಪಿಸಿಕೊಂಡಿದ್ದರು. ಮಾಹಿತಿ ಪಡೆದ ಕಾವೂರು ಪೊಲೀಸ್ ಇನ್‌ಸ್ಪೆಕ್ಟರ್ ನಟರಾಜ್ ಹಾಗೂ ಸಿಬ್ಬಂದಿ ಮಕ್ಕಳಿಬ್ಬರನ್ನು ದೇರಳಕಟ್ಟೆಯ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
Next Story





