Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಜನಸಂಖ್ಯಾಧಾರಿತ ಮೀಸಲಾತಿ

ಜನಸಂಖ್ಯಾಧಾರಿತ ಮೀಸಲಾತಿ

ವಾರ್ತಾಭಾರತಿವಾರ್ತಾಭಾರತಿ28 Jun 2016 11:57 PM IST
share

ಸಾಮಾಜಿಕವಾಗಿ, ಆರ್ಥಿಕವಾಗಿ ಅನ್ಯಾಯಕ್ಕೊಳಗಾದ ಜನವರ್ಗಗಳಿಗೆ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದ ನಂತರ ಅದರ ವಿರುದ್ಧ ಹುನ್ನಾರಗಳು ನಡೆಯುತ್ತಲೇ ಬಂದಿವೆ. ಹಿಂದುಳಿದ ವರ್ಗಗಳಿಗೆ ಮೀಸಲು ಒದಗಿಸುವ ಮಂಡಲ ಆಯೋಗದ ವರದಿ ಜಾರಿಗೆ ವಿ.ಪಿ ಸಿಂಗ್ ಸರಕಾರ ಮುಂದಾದಾಗ ಅದನ್ನು ವಿರೋಧಿಸಿ ದೇಶದಲ್ಲಿ ಭಾರೀ ಹಿಂಸಾಚಾರವನ್ನೇ ನಡೆಸಲಾಯಿತು. ಅಮಾಯಕ ತರುಣರ ಮೈಗೆ ಬೆಂಕಿ ಹಚ್ಚಿ ಆತ್ಮಾಹುತಿ ಎಂದು ಬಿಂಬಿಸಲಾಯಿತು.


ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ ಅದು ಹಕ್ಕು ಎನ್ನುವುದನ್ನು ಈ ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಅರ್ಥ ಮಾಡಿಕೊಳ್ಳಲೇ ಇಲ್ಲ. ಶತಮಾನಗಳಿಂದ ಶೋಷಣೆಗೊಳಗಾದ ಬಹುಸಂಖ್ಯಾತ ಸಮುದಾಯದ ನೋವಿಗೆ ಸ್ಪಂದಿಸಲೇ ಇಲ್ಲ. ನೂರಾರು ವರ್ಷಗಳಿಂದ ಎಲ್ಲಾ ಸವಲತ್ತುಗಳನ್ನು ಅನುಭವಿಸಿದ ಶೇ.2ರಷ್ಟಿರುವ ಜನವರ್ಗ ಶೇ.ತೊಂಬತ್ತೊಂಬತ್ತರಷ್ಟು ಇರುವ ಸಮುದಾಯವನ್ನು ಶೋಷಿಸುತ್ತಲೇ ಬಂದಿದೆ. ಹಾಗೆಂದೇ ಸಮಾಜವಾದಿ ನಾಯಕ ಡಾ. ರಾಮ ಮನೋಹರ ಲೋಹಿಯಾ ಅವರು ಜನಸಂಖ್ಯೆ ಆಧಾರಿತ ಮೀಸಲಾತಿ ಅಗತ್ಯ ಎಂದು ಪ್ರತಿಪಾದಿಸಿದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಜನಸಂಖೆಕ್ಕೆ ಆಧಾರಿತ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಾತಿವಾರು ಜನಗಣತಿಯನ್ನು ಕರ್ನಾಟಕ ಸರಕಾರ ಯಶಸ್ವಿಯಾಗಿ ಪೂರೈಸಿದೆ. ಜಾತಿವಾರು ಜನಗಣತಿಯನ್ನು ಸ್ವಾಗತಿಸಿರುವ ಗದುಗಿನ ತೋಂಟದಾರ್ಯ ಮಠದ ಸ್ವಾಮೀಜಿ, ‘‘ಸಿದ್ದರಾಮಯ್ಯನವರು ಸೂಕ್ತಕ್ರಮಕೈಗೊಂಡಿದ್ದಾರೆ. ತಾವು ಬಹುಸಂಖ್ಯಾತರು ಎಂದು ಬೀಗುತ್ತಿದ್ದ ಮೇಲ್ಜಾತಿಗಳ ಸೊಕ್ಕು ಮುರಿದಿದ್ದಾರೆ.’’ ಎಂದು ಹೇಳಿದ್ದಾರೆ. ಸಮಾಜದ ಪ್ರಗತಿ ಶೀಲ ಪ್ರಜ್ಞಾವಂತರೆಲ್ಲ ಸರಕಾರದ ಈ ಕ್ರಮವನ್ನು ಸ್ವಾಗತಿಸುತ್ತಾರೆ.
ಮೀಸಲಾತಿಗೆ ಅರ್ಹತೆಯೇ ಮಾನದಂಡವಾಗಬೇಕೆಂದು ವಾದಿಸುವ ಜನವರ್ಗವೊಂದು ಈ ದೇಶದಲ್ಲಿ ಇದೆ. ಅಧಿಕ ಸಂಖ್ಯೆ ಜನರು ಕಡಿಮೆ ಜನಸಂಖ್ಯೆ ಇರುವವರ ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆಂದು ಬೊಬ್ಬೆ ಹಾಕಲಾಗುತ್ತಿದೆ. ಬಿಜೆಪಿಯಂತಹ ಕೋಮುವಾದಿ ಪಕ್ಷಗಳು ಇದಕ್ಕೆ ಕುಮ್ಮಕ್ಕು ನೀಡುತ್ತಿವೆ.
  ಮೀಸಲಾತಿ ಎನ್ನುವುದು ಸ್ವಾತಂತ್ರ ಬಂದ ನಂತರದ ಜಾರಿಗೊಂಡ ವ್ಯವಸ್ಥೆಯಲ್ಲ. ಈ ದೇಶದಲ್ಲಿ ಐದು ಸಾವಿರ ವರ್ಷಗಳಿಂದ ಅಘೋಷಿತ ಮೀಸಲಾತಿ ವ್ಯವಸ್ಥೆ ಯೊಂದು ಜಾರಿಯಲ್ಲಿದೆ. ಕಸಗುಡಿಸುವ, ಸೆಗಣಿ ಎತ್ತುವ, ದನ ಮೇಯಿಸುವ, ಬಟ್ಟೆ ತೊಳೆಯುವ ಕೆಲಸಕ್ಕೆ ಅನೇಕರನ್ನು ನೇಮಿಸಿ ವಿದ್ಯೆ ಯನ್ನು ಶೇ.2ರಷ್ಟು ಜನ ಗುತ್ತಿಗೆ ಹಿಡಿದಿದ್ದಾರೆ.
ಶತಮಾನಗಳಿಂದ ಅಕ್ಷರದಿಂದ ವಂಚಿಸಲ್ಪಟ್ಟ ಈ ಜನ ವರ್ಗ ಸಮಾನತೆಗಾಗಿ ಧ್ವನಿ ಎತ್ತಿದರೆ ಸಮಾಜದ ತುಳಿಯುವ ವರ್ಗಗಳು ಅದನ್ನು ಓಟ್ ಬ್ಯಾಂಕ್ ರಾಜಕಾರಣ ಎಂದು ವರ್ಣಿಸುತ್ತವೆ. ಅಸ್ಪಶ್ಯ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿರುವ ಡಾ. ಅಂಬೇಡ್ಕರ್ ಅವರನ್ನು ಖಳನಾಯಕ ಎಂಬಂತೆ ಬಿಂಬಿಸುತ್ತಿವೆ.
 ಮೀಸಲಾತಿಗಾಗಿ ಅಂಬೇಡ್ಕರ್ ಅವರನ್ನು ದೂಷಿಸುತ್ತಾ ಬಂದ ಪಟ್ಟಭದ್ರ ಜಾತಿವಾದಿ ಶಕ್ತಿಗಳೇ ಈಗ ಜನಸಂಖ್ಯೆ ಆಧಾರಿತ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ್ನು ದ್ವೇಷಿಸುತ್ತಿವೆ. ಶತಮಾನಗಳಿಂದಲೂ ಇಂತಹ ಒಳಸಂಚುಗಳೂ ನಡೆಯುತ್ತಲೇ ಇವೆ. ದೇಶದಲ್ಲಿ ಜಾಗತೀಕರಣ, ಖಾಸಗೀಕರಣದ ಅನಿಷ್ಟ ವಕ್ಕರಿಸಿದ ನಂತರ ಮೀಸಲಾತಿಗೆ ಗಂಡಾಂತರ ಬಂದಿದೆ. ಅದರಂತೆ ಸಿದ್ದರಾಮಯ್ಯ ಅವರು ಖಾಸಗೀ ರಂಗದಲ್ಲಿ ಮೀಸಲಾತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದನ್ನು ಸಹಿಸಲು ಈ ಜಾತಿವಾದಿ ಶಕ್ತಿಗಳಿಗೆ ಆಗುತ್ತಿಲ್ಲ.
ಕರ್ನಾಟಕದಲ್ಲಿ ನಡೆದಂತೆ ಇಡೀ ದೇಶದಲ್ಲಿ ಜಾತಿವಾರು ಜನಗಣತಿ ನಡೆಯಬೇಕಾಗಿದೆ. ಯಾವ ಜನಸಮುದಾಯಗಳಿಗೆ ಶತಮಾನಗಳಿಂದ ಅನ್ಯಾಯವಾಗಿದೆಯೋ ಆ ಸಮುದಾಯಗಳಿಗೆ ಈಗಲಾದರೂ ನ್ಯಾಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಕ್ರಮ ಶ್ಲಾಘನೀಯವಾಗಿದೆ.
 
  ಭಾರತದ ಜಾತಿ ವ್ಯವಸ್ಥೆ ಎಷ್ಟು ಕ್ರೂರವಾಗಿದೆಯೆಂದರೆ ರಾಷ್ಟ್ರ ಕವಿ ಕುವೆಂಪುರವರು ಇದರಿಂದ ತುಂಬಾ ನೊಂದುಕೊಂಡು ಬ್ರಿಟಿಷರು ಈ ದೇಶಕ್ಕೆ ಬರದಿರುತ್ತಿದ್ದರೆ ನಾನು ದನದ ತೊಟ್ಟಿಯಲ್ಲಿ ಸೆಗಣಿ ಬಾಚುತ್ತಿದ್ದೆ ಎಂದು ನೋವಿನಿಂದ ಹೇಳಿದ್ದರು. ಸ್ವಾತಂತ್ರಾನಂತರ ಕೆಲ ನಿರ್ಲಕ್ಷಿತ ಸಮುದಾಯಗಳಿಗೆ ಮೀಸಲಾತಿ ಸೌಕರ್ಯ ದೊರಕಿದ ಪರಿಣಾಮವಾಗಿ ಲಾಲುಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಕರುಣಾನಿಧಿ, ನಿತೀಶ್ ಕುಮಾರ್, ಸಿದ್ದರಾಮಯ್ಯ ನಂತಹವರು ರಾಜಕೀಯ ಅಧಿಕಾರದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು. ಅಂದರೆ ಸಮಾಜದ ಎಲ್ಲಾ ಜನ ವರ್ಗಗಳಿಗೆ ಸಹಜ ನ್ಯಾಯ ಲಭಿಸಬೇಕಾದರೆ ಜಾತಿವಾರು ಜನಸಂಖ್ಯಾಧಾರಿತ ಮೀಸಲಾತಿ ನೀಡಲೇಬೇಕು. ಅದೇ ರೀತಿ ನ್ಯಾಯಮೂರ್ತಿ ಸಾಚಾರ್ ಆಯೋಗದ ಶಿಫಾರಸು ಪ್ರಕಾರ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯಕ್ಕೂ ಮೀಸಲಾತಿಯ ಸೌಕರ್ಯ ದೊರೆಯಬೇಕು. ಆವಾಗ ಮಾತ್ರ ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯ ಈಡೇರಿದಂತಾಗುತ್ತದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಒಮ್ಮತವೊಂದು ಮೂಡಿಬರಬೇಕಾಗಿದೆ. ಆದರೆ ಮೀಸಲಾತಿಯನ್ನೇ ದ್ವೇಷಿಸುವ ಪ್ರತಿಗಾಮಿ ಶಕ್ತಿಗಳು ರಾಜಕೀಯ ಪ್ರಾಬಲ್ಯ ಗಳಿಸುತ್ತಿರುವುದರಿಂದ ರಾಷ್ಟ್ರೀಯ ಒಮ್ಮತ ಕೂಡಿ ಬರುವುದು ಸುಲಭವಲ್ಲ. ಅಂತಲೇ ರಾಷ್ಟ್ರಮಟ್ಟದ ಜಾತಿವಾರು ಜನಸಂಖ್ಯೆ ನಡೆದು ಆಯಾ ಸಮುದಾಯಗಳ ಜನಸಂಖ್ಯಾ ಬಲವನ್ನು ಆಧರಿಸಿ ಮೀಸಲು ಸೌಕರ್ಯ ಒದಗಿಸುವುದು ಸೂಕ್ತವಾಗಿದೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾನ ಮನಸ್ಕ ರಾಷ್ಟ್ರಮಟ್ಟದ ಸಂಘಟನೆಗಳೊಂದಿಗೆ ಮತ್ತು ನಿತೀಶ್ ಕುಮಾರ್, ಲಾಲುಪ್ರಸಾದ್ ಯಾದವ್, ಮಾಯಾವತಿ ಅವರಂತಹ ನಾಯಕರೊಂದಿಗೆ ಸಮಾಲೋಚಿಸಿ ರಾಜಕೀಯ ಒತ್ತಡವನ್ನು ಕೇಂದ್ರ ಸರಕಾರದ ಮೇಲೆ ಹೇರುವುದು ಅಗತ್ಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರಮಟ್ಟದಲ್ಲಿ ಜಾತಿವಾರು ಜನಗಣತಿ ನಡೆಯಬೇಕಾಗಿದೆ. ಅದರ ಆಧಾರದ ಮೇಲೆ ಮೀಸಲಾತಿಯನ್ನು ನಿಗದಿಪಡಿಸಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X