ಕಲಬುರಗಿ ಕಿರುಕುಳ ಪ್ರಕರಣ: ಕಿರುಕುಳ ನಡೆದಿಲ್ಲ, ಅದು ಆತ್ಮಹತ್ಯೆ ಯತ್ನ ವಿಶ್ವವಿದ್ಯಾನಿಲಯ ದ್ವಿಸದಸ್ಯ ಸಮಿತಿಯ ವರದಿ

ತಿರುವನಂತಪುರಂ, ಜೂನ್ 29: ಕಾಲೇಜ್ ಹಾಸ್ಟೆಲ್‌ನಲ್ಲಿ ಕಿರುಕುಳ ನಡೆದಿಲ್ಲ ಕೌಟುಂಬಿಕ ಸಮಸ್ಯೆಯಿಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಘಟನೆಯ ಕುರಿತು ತನಿಖೆಗೆ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ನೇಮಿಸಿದ ಇಬ್ಬರ ಸಮಿತಿಯು ವರದಿ ನೀಡಿದೆ. ಘಟನೆಯ ಕುರಿತು ರಾಜೀವ್ ಗಾಂಧಿಯುನಿವರ್ಸಿಟಿಯ ವೈಸ್ ಚಾನ್ಸಲರ್ ನೇಮಿಸಿದ ಎರಡು ಮಂದಿ ಸದಸ್ಯರ ಸಮಿತಿ ತನಿಖೆ ಮಾಡಿ ಈ ವರದಿಯನ್ನು ಸಲ್ಲಿಸಿದೆ.
ಕಾಲೇಜ್ ಹಾಸ್ಟೆಲ್‌ನಲ್ಲಿ ರ್ಯಾಗಿಂಗ್ ನಡೆದಿಲ್ಲ. ಕುಟುಂಬ ಸಮಸ್ಯೆಯಿಂದಾಗಿ ಹುಡುಗಿ ಆತ್ಮಹತ್ಯೆಗೆ ಶ್ರಮಿಸಿದ್ದಾಳೆ ಎಂಬುದು ವರದಿಯಲ್ಲಿದೆ ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕೆ,ಎಸ್. ರವೀಂದ್ರನಾಥ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಲಬುರಗಿಯ ಅಲ್‌ಕಮರ್ ನರ್ಸಿಂಗ್ ಕಾಲೇಜ್‌ನಲ್ಲಿ ಕೇರಳದ ವಿದ್ಯಾರ್ಥಿನಿ ಅಶ್ವತಿ ರ್ಯಾಗಿಂಗ್‌ಗೆ ತುತ್ತಾದ ಘಟನೆಯನ್ನು ಪೊಲೀಸ್ ತನಿಖೆ ನಡೆಸುವ ಎರಡು ದಿವಸ ಮೊದಲು ಇಬ್ಬರು ಸದಸ್ಯರಿದ್ದ ವಿಶ್ವವಿದ್ಯಾನಿಲಯದ ಸಮಿತಿಯನ್ನು ತನಿಖೆಗೆ ನೇಮಿಸಲಾಗಿತ್ತು. ಅದೇ ಕಾಲೇಜ್‌ನ ಚೇರ್‌ಮೆನ್ ಮಾಜಿ ಸಚಿವ ಖಮರುಲ್ ಇಸ್ಲಾಮ್ ಅಶ್ವತಿ ರ್ಯಾಗಿಂಗ್ ಗುರಿಯಾದ್ದನ್ನು ಸಮ್ಮತಿಸಿದ್ದರು. ಆದರೆ ಕಾಲೇಜ್‌ನ ಆಡಳಿತಾಧಿಕಾರಿಗಳು ಆರಂಭದಿಂದಲೇ ಆತ್ಮಹತ್ಯೆ ಶ್ರಮ ಎಂದು ವಾದಿಸುತ್ತಾ ಬಂದಿದ್ದರು. ರ್ಯಾಗಿಂಗೀಡಾದ ಕೇರಳ ಎಡಪ್ಪಾಲದ ಅಶ್ವತಿ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾಳೆ.





