ಗಾಝ ದಿಗ್ಬಂಧನ ತೆರವಿಗೆ ಶ್ರಮಿಸಿದ್ದಕ್ಕಾಗಿ ಟರ್ಕಿಗೆ ಕೃತಜ್ಞತೆ ಸಲ್ಲಿಸಿದ ಹಮಾಸ್

ಗಾಝ,ಜೂನ್ 29: ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್‌ರಿಗೆ ಗಾಝದ ಮೇಲೆ ಹೇರಲಾಗಿರುವ ದಿಗ್ಬಂಧನ ಸಡಿಲಿಕೆಗೆ ನಡೆಸಿದ ಪ್ರಯತ್ನಕ್ಕಾಗಿ ಹಮಾಸ್ ಕೃತಜ್ಞತೆ ಸೂಚಿಸಿದೆ. ಫೆಲೆಸ್ತೀನ್ ವಿಷಯದಲ್ಲಿ ಅಹಂಕಾರ ನೀಡುತ್ತಾ ಬಂದಿರುವ ಬೆಂಬಲ ಮತ್ತು ಸಹಾಯವನ್ನು ಮುಂದುವರಿಸಲಿದೆ ಹಾಗೂ ಗಾಝದ ಮೇಲೆ ಇಸ್ರೇಲ್ ಹೇರಿದ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕಲು ಅದು ಪ್ರಯತ್ನ ನಡೆಸಲಿದೆ ಎಂದು ಹಮಾಸ್ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಟರ್ಕಿ ಇಸ್ರೇಲ್‌ನೊಂದಿಗೆ ಸಂಬಂಧವನ್ನು ಮರುಸ್ಥಾಪಿಸುತ್ತಿರುವ ಕುರಿತ ಘೋಷಿಸಿರುವ ಹಿನ್ನೆಲೆಯಲ್ಲಿ ಹಮಾಸ್ ಈ ಹೇಳಿಕೆಯನ್ನು ನೀಡಿದೆ. ನಮ್ಮ ಜನತೆ, ಫೆಲೆಸ್ತೀನ್ ಭೂಮಿ, ಖುದ್ಸ್, ಮಸ್ಚಿದುಲ್ ಅಕ್ಸಾ ಮುಂತಾದ ಪವಿತ್ರ ಪ್ರದೇಶಗಳಿಂದ ಇಸ್ರೇಲ್‌ನ್ನು ಅತಿಕ್ರಮಣದಿಂದ ಹಿಂದೆಸರಿಯುವಂತೆ ಮಾಡಲು ಟರ್ಕಿ ಒತ್ತಡ ಹೇರಬಹುದು ಎಂಬ ನಿರೀಕ್ಷೆ ಹಮಾಸ್‌ಗಿದೆ. ಫೆಲೆಸ್ತೀನ್‌ಮತ್ತು ಅಲ್ಲಿನ ಜನರಿಗಾಗಿ ನೆರವು ತಲುಪಿಸಲು ಬಂದಿದ್ದ ಮತ್ತು ಇಸ್ರೇಲ್ ಸೇನೆಯ ದಾಳಿಯಲ್ಲಿ ಹುತಾತ್ಮರಾಗಿದ್ದ ಟಿರ್ಕಿಯ ಮರ್ಮರ ಎಂಬ ಹಡಗಿನ ಉದ್ಯೋಗಿಗಳನ್ನು ಹಮಾಸ್ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದೆ. ಹುತಾತ್ಮರಾದ ಮತ್ತು ಗಾಯಗೊಂಡವರ ಕುಟುಂಬಗಳು ಮತ್ತು ಟರ್ಕಿಯ ಜನರೊಂದಿಗೆ ಇರುವ ಋಣವನ್ನು ಹಮಾಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಅದೇ ವೇಳೆ ಇಸ್ರೇಲ್‌ನ ಬಗೆಗಿನ ನಿಲುವಿನಲ್ಲಿ ಯಾವುದೇ ಸಡಿಲಿಕೆಯಿಲ್ಲ ಎಂದು ಹಮಾಸ್ ಹೇಳಿದೆ.





