2017ರ ಇರಾನ್ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಹ್ಮದಿ ನಜಾದ್

ಟೆಹರಾನ್, ಜೂ. 29: ದೇಶದ ಹಾಲಿ ಅಧ್ಯಕ್ಷ ಹಸನ್ ರೂಹಾನಿಯನ್ನು ಅಸಮರ್ಥ ಎಂದು ಟೀಕಿಸಿರುವ ಇರಾನ್‌ನ ಮಾಜಿ ಅಧ್ಯಕ್ಷ ಮಹ್ಮೂದ್ ಅಹ್ಮದಿ ನಜಾದ್, ಎಪ್ರಿಲ್‌ನಲ್ಲಿ ರಾಜಕೀಯಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
2017ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಹ್ಮದಿ ನಜಾದ್ ಘೋಷಿಸಿದ್ದಾರೆ ಎಂದು ‘ಶರ್ಗ್’ ದೈನಿಕ ಮಂಗಳವಾರ ವರದಿ ಮಾಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಹ್ಮದಿ ನಜಾದ್ರ ಇಂಗಿತವನ್ನು ಅಹ್ಮದಿ ನಜಾದ್ ಸರಕಾರದಲ್ಲಿ ಸ್ಪೀಕರ್ ಆಗಿದ್ದ ಗುಲಾಮ್ ಹುಸೈನ್ ಇಲ್ಹಮ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸೋಮವಾರ ಟೆಹರಾನ್‌ನ ನರ್ಮಕ್ ಮಸೀದಿಯಲ್ಲಿ ಭಾಷಣ ಮಾಡುವ ಮೂಲಕ ಅಹ್ಮದಿ ನಜಾದ್ ಈ ವರ್ಷ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಕಂಡಬಂದರು. ಆದರೆ, ತಾನು ರಾಜಕಾರಣಕ್ಕೆ ಮರಳುವ ಸುದ್ದಿಯನ್ನು ಅವರು ಖಚಿತಪಡಿಸಲೂ ಇಲ್ಲ ನಿರಾಕರಿಸಲೂ ಇಲ್ಲ.
2005ರಿಂದ 2013ರವರೆಗೆ ಇರಾನ್‌ನ ಅಧ್ಯಕ್ಷರಾಗಿದ್ದ ಅಹ್ಮದಿ ನಜಾದ್, ಹಾಲಿ ಅಧ್ಯಕ್ಷ ಹಸನ್ ರೂಹಾನಿಯನ್ನು ಅಸಮರ್ಥ ಎಂದು ಟೀಕಿಸಿದರು.





