ಎಚ್ಐಎಫ್ ಮಹಿಳಾ ವಿಭಾಗದ ವತಿಯಿಂದ ಇಫ್ತಾರ್ ಕೂಟ

ಮಂಗಳೂರು, ಜೂ.29: ಹೈಲಾಂಡ್ ಇಸ್ಲಾಮಿಕ್ ಫೋರಂ ಮಹಿಳಾ ವಿಭಾಗದ ವತಿಯಿಂದ ಇಫ್ತಾರ್ ಕೂಟವು ಅತ್ತಾವರದಲ್ಲಿರುವ ಐವರಿ ಕ್ಲಬ್‌ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಮ್ಮ್ ಹನಿ ಧಾರ್ಮಿಕ ಪ್ರವಚನ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಝೀನತ್ ರಫೀಕ್, ಎಚ್ಐಎಫ್‌ನ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್ಐಎಫ್‌ನ ಅಧ್ಯಕ್ಷೆ ಹಫ್ಸಾ ಎ.ಕೆ. ವಹಿಸಿದ್ದರು. ಇದೇ ಸಂದರ್ಭದಲ್ಲಿ ‘ನಿರ್ಲಕ್ಷ್ಯಕ್ಕೆ ಒಳಪಟ್ಟ ಅಲ್ಲಾಹನ ಭವನ’ ಎಂಬ ವೀಡಿಯೊ ಡಾಕ್ಯುಮೆಂಟರಿಯನ್ನು ರಮೀಝಾ ಬಾವ ಬಿಡುಗಡೆಗೊಳಿಸಿದರು. ರೆಹೆನಾ ಹನೀಫ್ ಕಿರಾಅತ್ ಪಠಿಸಿದರು. ನೌಶೀನ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು. ಶಿರೀನ್ ವಂದಿಸಿದರು.
Next Story





