ಟ್ರಂಪ್‌ಗೆ ವಿಸ್ತೃತ ಬೆಂಬಲ ನೆಲೆಯಿಲ್ಲ: ಒಬಾಮ

ವಾಶಿಂಗ್ಟನ್, ಜೂ. 29: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ದೇಶದಲ್ಲಿ ವಿಸ್ತೃತ ನೆಲೆಯ ಬೆಂಬಲ ಹೊಂದಿಲ್ಲ ಎನ್ನುವುದನ್ನು ಅವರ ದಾಖಲೆಯ ಕನಿಷ್ಠ ರೇಟಿಂಗ್ ತೋರಿಸಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ನ್ಯಾಶನಲ್ ಪಬ್ಲಿಕ್ ರೇಡಿಯೊಗೆ ನೀಡಿದ ಸಂದರ್ಶನವೊಂದರಲ್ಲಿ ಒಬಾಮ, ತನ್ನ ಹೇಳಿಕೆಯನ್ನು ಸಾಬೀತುಪಡಿಸಲು ಟ್ರಂಪ್‌ರ ಭಾರೀ ನಕಾರಾತ್ಮಕ ರೇಟಿಂಗನ್ನು ಉಲ್ಲೇಖಿಸಿದರು.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಟ್ರಂಪ್ ತನ್ನ ಎದುರಾಳಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ಗಿಂತ ರೇಟಿಂಗ್‌ನಲ್ಲಿ 10 ಅಂಶಗಳಿಗಿಂತಲೂ ಹೆಚ್ಚು ಹಿಂದಿದ್ದಾರೆ.
ವಾಶಿಂಗ್ಟನ್ ಪೋಸ್ಟ್/ಎಬಿಸಿ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ, ಮೂವರು ಅಮೆರಿಕನ್ನರ ಪೈಕಿ ಇಬ್ಬರು, ದೇಶವನ್ನು ಮುನ್ನಡೆಸಲು ಟ್ರಂಪ್ ಅನರ್ಹ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Next Story





