Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಯುರೋ ಕಪ್: ಕ್ವಾರ್ಟರ್‌ಫೈನಲ್‌ನಲ್ಲಿ...

ಯುರೋ ಕಪ್: ಕ್ವಾರ್ಟರ್‌ಫೈನಲ್‌ನಲ್ಲಿ ಪೋರ್ಚುಗಲ್-ಪೊಲೆಂಡ್ ಪೈಪೋಟಿ

ವಾರ್ತಾಭಾರತಿವಾರ್ತಾಭಾರತಿ29 Jun 2016 11:07 PM IST
share
ಯುರೋ ಕಪ್: ಕ್ವಾರ್ಟರ್‌ಫೈನಲ್‌ನಲ್ಲಿ ಪೋರ್ಚುಗಲ್-ಪೊಲೆಂಡ್ ಪೈಪೋಟಿ

ಮಾರ್ಸೆಲ್ಲೆ, ಜೂ.29: ಯೂರೋ 2016ರ ಕ್ವಾರ್ಟರ್ ಫೈನಲ್‌ನಲ್ಲಿ ಪೊಲೆಂಡ್ ತಂಡ ಪೋರ್ಚುಗಲ್ ತಂಡವನ್ನು ಎದುರಿಸಲಿದ್ದು, ಯುರೋಪ್‌ನ ಇಬ್ಬರು ಪ್ರಮುಖ ಆಟಗಾರರಾದ ರಾಬರ್ಟ್ ಲೆವಾಂಡೊಸ್ಕಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಗುರುವಾರ ಇಲ್ಲಿ ಮುಖಾಮುಖಿಯಾಗಲಿದ್ದಾರೆ.

ಪೊಲೆಂಡ್ ಇದೇ ಮೊದಲ ಬಾರಿ ಯುರೋಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದು, 1982ರ ಬಳಿಕ ಪ್ರಮುಖ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪುವ ವಿಶ್ವಾಸದಲ್ಲಿದೆ.

ರೊನಾಲ್ಡೊಗೆ ಯುರೋಪಿಯನ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಗರಿಷ್ಠ ಗೋಲು ಬಾರಿಸಿ ಫ್ರೆಂಚ್ ಲೆಜಂಡ್ ಮೈಕಲ್ ಪ್ಲಾಟಿನಿ ದಾಖಲೆಯನ್ನು ಸರಿಗಟ್ಟಲು ಇನ್ನು ಕೇವಲ ಒಂದು ಗೋಲು ಅಗತ್ಯವಿದೆ. ಪ್ಲಾಟಿನಿ ಯುರೋ ಕಪ್ ಟೂರ್ನಿಯೊಂದರಲ್ಲಿ 9 ಗೋಲುಗಳನ್ನು ಬಾರಿಸಿದ್ದರು.

ನಾಲ್ಕು ಯುರೋ ಕಪ್‌ನಲ್ಲಿ ಸ್ಕೋರ್ ಬಾರಿಸಿದ ಮೊದಲ ಆಟಗಾರ ಎಂದು ಈಗಾಗಲೇ ದಾಖಲೆ ಬರೆದಿರುವ ರಿಯಲ್ ಮ್ಯಾಡ್ರಿಡ್ ಸ್ಟಾರ್ ರೊನಾಲ್ಡೊ ಅತ್ಯಂತ ಹೆಚ್ಚು ಯುರೋ ಪಂದ್ಯಗಳನ್ನು ಆಡಿದ ದಾಖಲೆಯನ್ನು ಮುರಿದಿದ್ದಾರೆ.

31ರ ಹರೆಯದ ರೊನಾಲ್ಡೊ ಮುಂದಾಳತ್ವದ ಪೋರ್ಚುಗಲ್ ತಂಡ ಪೊಲೆಂಡ್‌ನ್ನು ಮಣಿಸಲು ಸಫಲವಾದರೆ ಸೆಮಿಫೈನಲ್‌ನಲ್ಲಿ ವೇಲ್ಸ್ ಅಥವಾ ಬೆಲ್ಜಿಯಂ ತಂಡವನ್ನು ಎದುರಿಸಲಿದೆ. ಹಂಗೇರಿ ವಿರುದ್ಧ ಅವಳಿ ಗೋಲು ಬಾರಿಸಿ ತಂಡವನ್ನು ಸೋಲಿನ ಭೀತಿಯಿಂದ ಪಾರು ಮಾಡಿದ್ದ ರೊನಾಲ್ಡೊ ಫ್ರಾನ್ಸ್‌ನಲ್ಲಿ ಈ ತನಕ ಗಮನಾರ್ಹ ಪ್ರದರ್ಶನ ನೀಡಿಲ್ಲ.

ಪೋರ್ಚುಗಲ್ ತಂಡ ಐಸ್‌ಲೆಂಡ್ ವಿರುದ್ಧ ಮೊದಲ ಗ್ರೂಪ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೆ, ಆಸ್ಟ್ರೀಯ ವಿರುದ್ಧ ಪೆನಾಲ್ಟಿ ಅವಕಾಶವನ್ನು ಕಳೆದುಕೊಂಡಿತ್ತು. ಕ್ರೊಯೇಷಿಯ ವಿರುದ್ಧ ಅತ್ಯಂತ ನೀರಸ ಪಂದ್ಯದಲ್ಲಿ 117 ನಿಮಿಷಗಳ ಆಟದಲ್ಲಿ ರಿಕಾರ್ಡೊ ಕ್ಯೂರೆಸ್ಮ್ಮಾಗೆ ಗೋಲು ಬಾರಿಸಲು ರೊನಾಲ್ಡೊ ನೆರವಾಗಿದ್ದರು.

  ನಮಗೆ ತುಂಬಾ ಅವಕಾಶವಿದೆ. ನಮ್ಮ ತಂಡದಲ್ಲಿ ವಿಶ್ವ ದರ್ಜೆಯ ಆಟಗಾರರಾದ ರೊನಾಲ್ಡೊ, ನಾನಿ, ಕ್ಯೂರೆಸ್ಮಾ ಹಾಗೂ ಜಾವೊ ಮಾರಿಯೊ ಅವರಿದ್ದಾರೆ ಎಂದು ಪೋರ್ಚುಗಲ್ ಡಿಫೆಂಡರ್ ಜೋಸ್ ಫಾಂಟೆ ಹೇಳಿದ್ದಾರೆ.

ಪೋರ್ಚುಗಲ್ ತಂಡ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದು, ರಾಫೆಲ್ ಗುಯೆರ್ರೊ ಹಾಗೂ ಆ್ಯಂಡ್ರೆ ಗೊಮ್ಸ್‌ಗೆ ಗಾಯದ ಸಮಸ್ಯೆ ಕಾಡುತ್ತಿದೆ.

ಉಭಯ ತಂಡಗಳ ಈ ಹಿಂದಿನ ಮುಖಾಮುಖಿ:

* ಪೋರ್ಚುಗಲ್ ತಂಡ ಪೊಲೆಂಡ್ ವಿರುದ್ಧ ಈ ತನಕ 10 ಬಾರಿ ಆಡಿದ್ದು 4ರಲ್ಲಿ ಜಯ, 3ರಲ್ಲಿ ಡ್ರಾ ಹಾಗೂ 3ರಲ್ಲಿ ಸೋತಿದೆ. ಇತ್ತೀಚೆಗೆ ನಡೆದ ಎರಡು ಪಂದ್ಯಗಳು ಡ್ರಾ ಗೊಂಡಿವೆ. ಲಿಸ್ಬನ್‌ನಲ್ಲಿ ನಡೆದ ಯುರೋ 2008ರ ಅರ್ಹತಾ ಟೂರ್ನಿಯು 2-2 ರಿಂದ 2012ರ ಫೆಬ್ರವರಿಯಲ್ಲಿ ನಡೆದ ಸೌಹಾರ್ದ ಪಂದ್ಯ ಗೋಲು ರಹಿತ ಡ್ರಾ ಆಗಿತ್ತು.

*ಯುಇಎಫ್‌ಎ ಸ್ಪರ್ಧೆಗಳಲ್ಲಿ ಉಭಯ ದೇಶಗಳ ಕ್ಲಬ್‌ಗಳು 22 ಬಾರಿ ಮುಖಾಮುಖಿಯಾಗಿವೆ. ಪೋರ್ಚುಗೀಸ್ ತಂಡ 11 ಗೆಲುವು, ಪೊಲೆಂಡ್ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಯುರೋ ಕಪ್‌ನಲ್ಲಿ ಪೊಲೆಂಡ್

*ಪೊಲೆಂಡ್ ಸತತ ಮೂರನೆ ಬಾರಿ ಯುರೋ ಟೂರ್ನಿಯಲ್ಲಿ ಕಾಣಿಸಿಕೊಂಡಿದೆ. ಪ್ರಸ್ತುತ ಟೂರ್ನಿಯಲ್ಲಿ ಮೊದಲ ಬಾರಿ ಅಂತಿಮ-8ರ ಹಂತ ಪ್ರವೇಶಿಸಿರುವ ಪೊಲೆಂಡ್ 2ರಲ್ಲಿ ಜಯ, 2ರಲ್ಲಿ ಡ್ರಾ ಸಾಧಿಸಿದೆ. ಈ ಹಿಂದಿನ 2 ಟೂರ್ನಿಗಳಲ್ಲಿ 3ರಲ್ಲಿ ಡ್ರಾ ಹಾಗೂ 3ರಲ್ಲಿ ಸೋತಿದೆ.

*ಪೊಲೆಂಡ್ ತಂಡ ಮಾರ್ಸೆಲ್ಲಿಯಲ್ಲಿ ಆಡಿದ ಎರಡೂ ಪಂದ್ಯವನ್ನು ಜಯಿಸಿದೆ. ಉಕ್ರೇನ್ ವಿರುದ್ಧ 1-0 ಗೋಲುಗಳ ಅಂತರದಿಂದ ಹಾಗೂ 1990ರಲ್ಲಿ ಯುಎಇ ವಿರುದ್ಧ ಸೌಹಾರ್ಧ ಪಂದ್ಯವನ್ನು 4-0 ಅಂತರದಿಂದ ಗೆದ್ದುಕೊಂಡಿದೆ.

*ರಾಬರ್ಟ್ ಲೆವಾಂಡೊಸ್ಕಿ ಯುರೋ ಕಪ್‌ನ ಅರ್ಹತಾ ಸುತ್ತಿನಲ್ಲಿ 13 ಗೋಲುಗಳನ್ನು ಬಾರಿಸಿ 2008ರ ಯುರೋದಲ್ಲಿ ಉತ್ತರ ಐರ್ಲೆಂಡ್‌ನ ಡೇವಿಡ್ ಹೀಲಿ ನಿರ್ಮಿಸಿದ್ದ ದಾಖಲೆ ಸರಿಗಟ್ಟಿದ್ದರು.

ಯುರೋ ಕಪ್‌ನಲ್ಲಿ ಪೋರ್ಚುಗಲ್

 *ಪೋರ್ಚುಗಲ್ ಕಳೆದ ಐದು ಯುರೋ ಕಪ್‌ನಲ್ಲಿ ನಿಗದಿತ 90 ನಿಮಿಷಗಳ ಆಟದಲ್ಲಿ ಡ್ರಾ ಸಾಧಿಸಿದೆ. ಈ ಬಾರಿಯ ಯುರೋ ಕಪ್‌ನಲ್ಲಿ ನಾಲ್ಕು ಡ್ರಾ ಸಾಧಿಸಿದೆ. 2012ರ ಯುರೋ ಸೆಮಿಫೈನಲ್‌ನಲ್ಲಿ ಶೂಟೌಟ್‌ನಲ್ಲಿ ಸೋತಿದೆ.

*ಪೋರ್ಚುಗಲ್ ಸತತ ಆರನೆ ಬಾರಿ ಯುರೋ ಕಪ್‌ನಲ್ಲಿ ಆಡುತ್ತಿದೆ.

*ಪೋರ್ಚುಗಲ್ 2004ರಲ್ಲಿ ಸ್ವದೇಶದಲ್ಲಿ ನಡೆದ ಯುರೋ ಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದು ಈವರೆಗಿನ ಉತ್ತಮ ಸಾಧನೆ. ಫೈನಲ್‌ನಲ್ಲಿ ಗ್ರೀಸ್‌ನ ವಿರುದ್ಧ ಅನಿರೀಕ್ಷಿತವಾಗಿ 1-0 ಗೋಲು ಅಂತರದಿಂದ ಸೋತಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X