ಮೀನುಗಾರರಿಗೆ ಉಚಿತ ಬಲೆ ವಿತರಣೆ

ಅಂಕೋಲಾ, ಜೂ.29: ಮೀನುಗಾರರಿಗೆ ಸರಕಾರ ವಿವಿಧ ಯೋಜನೆಗಳನ್ನು ನೀಡಿದ್ದು, ಅವುಗಳಲ್ಲಿ ಬಲೆ ಕೂಡ ಒಂದಾಗಿದೆ. 10 ಸಾವಿರ ರೂ. ಮೌಲ್ಯದ ಬಲೆಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸತೀಶ ಸೈಲ್ ಹೇಳಿದರು.
ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಬುಧವಾರ 20 ಮೀನುಗಾರರಿಗೆ ತಲಾ 10 ಸಾವಿರ ರೂ. ಮೌಲ್ಯದ ಬಲೆಯನ್ನು ವಿತರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿ.ಜೆ. ಲಾಂಜೇಕರ, ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮಪ್ಪ ಎಂ.ಎಚ್., ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯರಾದ ಬೀರಾ ಗೌಡ, ವಿಲ್ಸನ್ ಡಿಕೋಸ್ತಾ, ಮಾಜಿ ಶಾಸಕ ಕೆ.ಎಚ್. ಗೌಡ, ಪ್ರಮುಖರಾದ ವಿನೋದ ನಾಯಕ, ರಾಜೇಂದ್ರ ನಾಯ್ಕ, ಪುರುಷೋತ್ತಮ ನಾಯ್ಕ, ಸುರೇಶ ನಾಯಕ ಇತರರಿದ್ದರು.
Next Story





